ಸಿಂಧನೂರು ತಾಲೂಕಿನಲ್ಲಿ ಇಂದು ಅಯೋಧ್ಯೆ ಬಲಿದಾನ ದಿವಸ ಅಂಗವಾಗಿ…

ಸಿಂಧನೂರು ತಾಲೂಕಿನಲ್ಲಿ ಇಂದು ಅಯೋಧ್ಯೆ ಬಲಿದಾನ ದಿವಸ ಅಂಗವಾಗಿ ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಸಂಯೋಗದಲ್ಲಿ ಇಲ್ಲಿನ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಘಟಕ ವತಿಯಿಂದ ಅಯೋಧ್ಯ ಬಲಿದಾನ್ ದಿವಸ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. “ಮರ್ಯಾದಾ ಪುರುಷೋತ್ತಮ್” ಶ್ರೀ ರಾಮನ ಪುಣ್ಯಭೂಮಿಯ ರಕ್ಷಣೆಗಾಗಿ ಇದೇ ದಿನ 1992 ರಲ್ಲಿ ಹಲವಾರು ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದರು ಅದೇ ರೀತಿಯಾಗಿ 500 ವರ್ಷಗಳ ಸಂಘರ್ಷದ ಇತಿಹಾಸದಲ್ಲಿ ಹಿಂದುಗಳು ಆತ್ಮಭಿಮಾನಕ್ಕಾಗಿ ಬಲಿದಾನಗೈದ ಸಾವಿರಾರು ವೀರ ಭಜರಂಗಿಯ ನೆನಪಿನಲ್ಲಿ ಕರಸೇವೆಯಲ್ಲಿ ಹುತಾತ್ಮರಾದ ಕೊಠಾರಿ ಸಹೋದರರು ಬಲಿದಾನ ದಿನವನ್ನು ಬಲಿದಾನ ದಿವಸ್ ಆಚರಣೆ ಮಾಡಲಾಗುವುದು. ಆ ಹೋರಾಟಗಾರರ ಪ್ರಾಣಾರ್ಪಣೆಯಿಂದ ಇಂದು ಅಯೋಧ್ಯೆಯ ರಾಮನ ಜನ್ಮ ಭೂಮಿ ಎಂದು ಮಾನ್ಯತೆ ಪಡೆದುಕೊಂಡಿದೆ. ಅಲ್ಲಿ ರಾಮನ ಬೃಹತ್ ದೇವಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದ್ದು. ಇದು ರಾಮಭಕ್ತರಿಗೆ ಸಿಕ್ಕ ಗೆಲವು ರಾಮಮಂದಿರ ನಿರ್ಮಾಣವು ತಮ್ಮ ಧ್ಯೇಯವೆಂದು ಅನೇಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇಂದು ವಿವಾದಿತ ಜಾಗವು ರಾಮನ ಜನ್ಮಭೂಮಿ ಮತ್ತು ಅಯೋಧ್ಯೆಯಲ್ಲಿ ಹಿಂದುಗಳ ಆರಾಧ್ಯ ದೈವ ಶ್ರೀ ರಾಮನ ಸುಂದರ ದೇವಾಲಯವು ನಿರ್ಮಾಣವಾಗುತ್ತಿದೆ. ನೂರಾರು ವರ್ಷಗಳ ಹೋರಾಟಕ್ಕೆ ಈಗ ಪ್ರತಿಫಲ ಸಿಕ್ಕದಂತಾಗಿದೆ. ನಮ್ಮ ಸಿಂಧನೂರಿನಲ್ಲಿ ಬಜರಂಗದಳದ ವತಿಯಿಂದ ಅಯೋಧ್ಯ ಬಲಿದಾನ ದಿವಸ್ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು. 52 ಜನ ರಕ್ತದಾನ ಮಾಡಿದ್ದಾರೆ ಅವರಿಗೆಲ್ಲ ತುಂಬು ಹೃದಯದ ಧನ್ಯವಾದಗಳು. ಬಸವರಾಜ್. ಬಿ ಸಾಲಗುಂದಾ ಬಜರಂಗದಳ ಜಿಲ್ಲಾ ಸಹ ಸಂಯೋಜಕರು ರಾಯಚೂರು, ರವಿಕುಮಾರ್ ಮಾನ್ವಿ ಜಿಲ್ಲಾ ಸಂಯೋಜಕರು ಬಜರಂಗದಳ ರಾಯಚೂರು, ಚಿರಂಜೀವಿ ನಾಯಕ್ ತಾಲೂಕು ಸಂಯೋಜಕರು ಬಜರಂಗದಳ, ಮನೋಹರ್ ಹಿರೇಮಠ ನಗರ ಸಂಯೋಜಕರು ಬಜರಂಗದಳ, ರಮೇಶ ಉದ್ಬಾಳ್. ಉದಯಕುಮಾರ್. ಮೌನೇಶ್. ಬಸವರಾಜ್ ಜಿ. ವೆಂಕಟೇಶ್.ಚಿರಂಜೀವಿ. ಪರ್ವತ್ ರೆಡ್ಡಿ. ನಾಗೇಶ್ ಪವರ್. ಯರಿಯಪ್ಪ. ಅನಿಲ್ ಕುಮಾರ್. ಅನೇಕ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು




