ಸಂಪಾದಕೀಯ

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ 25 ನೆ ಅಂತಾರಾಷ್ಟ್ರೀಯ ಸಮ್ಮೇಳನ.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ 25 ನೆ ಅಂತಾರಾಷ್ಟ್ರೀಯ ಸಮ್ಮೇಳನ

ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಭಾರತದಲ್ಲಿ ಸ್ಥಾಪನೆಗೊಂಡು ಜವಾಬ್ದಾರಿಯುತ ಮತ್ತು ಕ್ರಿಯಾಶೀಲ ಪೌರತ್ವದ ಧೈಯ ವಾಕ್ಯದೊಂದಿಗೆ ವಿಶ್ವದೆಲ್ಲೆಡೆ ಪಸರಿಸುತ್ತಿರುವ ಏಕೈಕ ಸ್ವಯಂ ಸೇವಾ ಸಂಸ್ಥೆ, ಈ ವಿಶಿಷ್ಟ ಸಂಸ್ಥೆಯು ಹಿರಿಯ ಜಯಶೀ ಗಳು ಮತ್ತು ಸಮಾನ ಮನಸ್ಸ ಸಮಾಜಮುಖಿ ವ್ಯಕ್ತಿಗಳಿಂದ ಸ್ಥಾಪಿಸಲ್ಪಟ್ಟ ಸಮುದಾಯ ಸೇವಾ ಸಂಸ್ಥೆಯಾಗಿದೆ. ಹಿರಿಯ ಜೇಸಿಗಳು ತಾವು ಕಲಿತಿರುವ ಹಾಗೂ ಮೈಗೂಡಿಸಿಕೊಂಡಿರುವ ಅನುಭವ ಮತ್ತು ಕೌಶಲ್ಯಗಳನ್ನು ಸಮಾಜದ ಒಳಿತಿಗಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.
ಪ್ರಾರಂಭ ಈ ಸಂಸ್ಥೆಯು 03:04 1997 ರಂದು ಸ್ಥಾಪಕ ಅಧ್ಯಕ್ಷರಾದ ಸೀ॥ ಪಿ.ಪಿ. ಪ್ರೇಮಾನಂದ ಸೆಕ್ರೆಟರಿ ಜನರಲ್ ಸೀ|| ಹರಿಪ್ರಭ ಮತ್ತು ಇತರರೊಂದಿಗೆ ಜವಾಬ್ದಾರಿಯುತ ಮತ್ತು ಕ್ರಿಯಾಶೀಲ ಪೌರತ್ನ ಧೈಯವನ್ನು ಇಟ್ಟುಕೊಂಡು 2002 ರಲ್ಲಿ ಇಂಡಿಯನ್ ಸೀನಿಯರ್ ಚೇಂಬರ್ ಅನ್ನು ಸ್ಥಾಪಿಸಲಾಗಿದೆ ಎಂದರು.
ಪ್ರಸಕ್ತ ಸೀನಿಯರ್ ಚೇಂಬರ್ ಇಂಟರ್ನ್ಯಾಶನಲ್- ದಿನಾಂಕ 18.10.2021 ರಂದು ಈ ಸಂಸ್ಥೆಯು ಮೇಲಿನಂತೆ ಮಧುನಾಮಕರಣಗೊಂಡಿತು. ಇದು ಅಧಿಕೃತ ನೋಂದಣಿಯಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಖ್ಯವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಬಲಶಾಲಿಯಾಗಿ ಬೆಳೆಯುತ್ತಿದ್ದು ತಮಿಳುನಾಡು ಆಂಧ್ರ ಗೋವಾ ಮತ್ತು ಎಲ್ಲಾ ರಾಜ್ಯಗಳಲ್ಲಿ ಈ ಪರಿಕಲ್ಪನೆ ಹೊಂದಿದ್ದು ಅಂತರರಾ ರಾಷ್ಟ್ರೀಯವಾಗಿ ದುಬೈ, ಓಮನ್, ಕತಾರ್. ಅಮೆರಿಕಾದ ಫ್ಲೋರಿಡಾ ಆಸ್ಟ್ರೇಲಿಯಾದ ಸಿಡ್ನಿ, ನೇಪಾಳ, ಬ್ಯಾಂಕಾಕ್, ಶ್ರೀಲಂಕಾ, ಐರ್ಲ್ಯಾಂಡ್, ಇಂಗ್ಲೆಂಡ್ ಗಳಲ್ಲಿಯೂ ಘಟಕಗಳನ್ನು ಹೊಂದಿ ದಾಪುಗಾಲನ್ನು ಇಡುತ್ತಿದೆ. ವಿಶ್ವಭಾತೃತ್ವ, ಜಾಗತಿಕ ಪ್ರಜ್ಞೆ, ನಾಗರಿಕ ಪ್ರಜ್ಞೆ, ಮುಂತಾದ ನಾಮಾಜಿಕ ಕಳಕಳಿ ಹೊಂದಿದ್ದು ವ್ಯಾಪಕ ಸಾರ್ವಜನಿಕ ಜನಜಾಗೃತಿ ಅಭಿಯಾನ, ಪರಿಸರ ಸಂರಕ್ಷಣೆಯಿಂದ ಸಾಮಾಜಿಕ ನ್ಯಾಯದವರೆಗೆ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಕರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ವ್ಯಕ್ತಿಗಳನ್ನು ಸಬಲೀಕರಣ ಗೊಳಿಸುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ.
ಸಮಾಜಮುಖಿ ಕಾರ್ಯಕ್ರಮಗಳು: ನಾಯಕತ್ವ ತರಬೇತಿ, ಸಾಂಸ್ಥಿಕ ತರಬೇತಿ, ನಿರ್ಗತಿಕರು ಹಾಗೂ ಅಗತ್ಯವುಳ್ಳವರಿಗೆ ಸೂಕ್ತ ನೆರವು ನೀಡುವ ಮತ್ತು ಸಮಾಜದ ಶೋಷಿತ ವರ್ಗಗಳಿಗೆ ಶಿಕ್ಷಣ ವಸತಿ ಮತ್ತು ಅವರ ವೈಯಕ್ತಿಕ ಬೆಳವಣಿಗೆಗೆ ಅವಕಾಶವನ್ನು ಮಾಡಿಕೊಡುವ ಉದ್ದೇಶವನ್ನು ಹೊಂದಿದ್ದೇವೆ.
ಜಲಧಾರ, ಸ್ವಚ್ಛಗಂಗಾ, ನಮ್ಮ ಗ್ರಹವನ್ನು ಉಳಿಸಿ, ಗಾಲಿ ಕುರ್ಚಿಗಳು, ಹೊಲಿಗೆ ಯಂತ್ರಗಳು, ಕೃತಕ ಕಾಲುಗಳ ವಿತರಣೆ, ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರದ ಉತ್ತೇಜನ ನೀಡುವುದು, ಪ್ಲಾಸ್ಟಿಕ್ ರಹಿತ ವಲಯಗಳು, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳು, ನಮ್ಮ ಸಾಮಾಜಿಕ ಬದ್ಧತೆಯನ್ನು ವ್ಯಕ್ತಪಡಿಸಲು SCI ಫೌಂಡೇಶನ್ ಚಾರಿಟಬಲ್ ಅಂಡ್ ಎಜುಕೇಶನಲ್ ಟ್ರಸ್ಟ್ ಮೂಲಕ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ 10,000/- ವಿದ್ಯಾರ್ಥಿವೇತನ, ಈ ವರ್ಷ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ ಎಂದರು.
ಸಾರ್ವಜನಿಕ ಸಂಪರ್ಕ ಹಾಗೂ ತರಬೇತಿ ಕಾರ್ಯಕ್ರಮಗಳು: ಸಾರ್ವಜನಿಕರ ವೃತ್ತಿಪರ ವ್ಯಕ್ತಿತ್ವವನ್ನು ಹೆಚ್ಚಿಸಲು, ಮೂಡಿಸಲು
ಪರಿಣಾಮಕಾರಿಯಾದ ಸಂವಹನ ಕ್ರಮ, ಸಾರ್ವಜನಿಕರ ಕಾರ್ಯಕ್ಷೇತ್ರದಲ್ಲಿ ಕೌಶಲ್ಯ ಮತ್ತು ಜ್ಞಾನವನ್ನು ಹೆಚ್ಚಿಸಲು ವಿನ್ಯಾಸಗೊಳಿಸಿರುವ ಪ್ರಮುಖ ತರಬೇತಿ ಕಾರ್ಯಕ್ರಮಗಳಿಗೆ ಅವಕಾಶ ಒದಗಿಸಿ ಕೊಡುತ್ತದೆ. ಹೀಗೆ ಹೊತ್ತು ಹಲವಾರು ಕಾರ್ಯಕ್ರಮಗಳು ಸಮಾಜಮುಖಿ ಹಾಗೂ ಬಹುಮುಖ ಪ್ರತಿಭೆಯಿಂದ ಕೂಡಿದ್ದು ಈ ಅಂತರಾಷ್ಟ್ರೀಯ SCI ಸಂಸ್ಥೆಯು ಶ್ರಮಿಸುತ್ತಿದೆ ಎಂಬುದನ್ನು ತಮ್ಮ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಎಂ. ಆರ್. ಜಯೇಶ ರವರು 2025- 26 ನೇ ಸಾಲಿನ ರಾಜ್ಯಾಧ್ಯಕ್ಷ ವರದಿ. ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button