ಸಂಪಾದಕೀಯ

ಹೆಣ್ಣು…. ಈ ಸಮಾಜದಲ್ಲಿ ಹೆಣ್ಣಿನ ಪಾತ್ರ.

ಹೆಣ್ಣು

ನಾನಾರೆಂದು ತಿಳಿಯುವ ಮೊದಲೇ
ಮುಗ್ಧತೆಯಲ್ಲಿ ಕಳೆಯಿತು ಬಾಲ್ಯ
ಅರಳುವ ಮುನ್ನವೇ ಕಮರಿತು ಎನ್ನ ಜೀವ!!

ನಾನಾರೆಂದು ತಿಳಿಯುವುದರೊಳಗೆ
ನನ್ನನ್ನು ನಾನು ಅರಿತುಕೊಳ್ಳದ ಮುನ್ನವೇ
ಯೌವನಾವಸ್ಥೆಗೆ ಬಂದು ನಿಂತಿತ್ತು ಎನ್ನ ಜೀವ!!

ನಾನೊಂದು ಹೆಣ್ಣೆಂದು ಅರಿತಕೊಳ್ಳುವುದರಲ್ಲಿ
ನನ್ನೊಳಗಿನ ಕನಸುಗಳು ಬೂದಿಯಾಗಿ
ಪರರ ಪಾಲಾಯಿತು ಎನ್ನ ಜೀವ !!

ಪ್ರಪಂಚದ ಜ್ಞಾನ ತಿಳಿದುಕೊಳ್ಳುವ ಮುನ್ನವೇ
ಕರಿಮಣಿಗೆ ಶರಣಾಗಿ ಹಾರವೋ ಹಗ್ಗವೋ
ಅರಿಯದೇ ಶರಣಾಯಿತು ಎನ್ನ ಜೀವ!!

ಅರಿಯದವರೊಡನೆ ಹೊಂದಿಕೊಳ್ಳುವ ವಯಸ್ಸು
ಚಿಗುರುವ ಮುನ್ನವೇ
ಮಡಿಲಲ್ಲೊಂದು ಮಗು ಪಡೆಯಿತು ಎನ್ನ ಜೀವ !!

ತಾಯಿತನದ ಸುಖ ಅನುಭವಿಸುತ್ತಾ
ನನ್ನೊಳಗಿನ ಆಸೆ ಆಕಾಂಕ್ಷೆಗಳು ಬತ್ತಿ ಹೋಗಿ ಬರಿದಾಯಿತು ಎನ್ನ ಜೀವ !!

ಸಂಸಾರದ ನೊಗ ಹೊತ್ತು
ಹೋಗುವ ದಾರಿಯಲ್ಲಿ
ಸಮಯ ಜಾರಿ ಆಯುಷ್ಯ ಕರಗಿ
ಮುಪ್ಪು ಆವರಿಸಿ ಬಿಟ್ಟಿತು ಎನ್ನ ಜೀವ !!

ಬಂಧನದ ಬೆಸುಗೆಯ ಬೇಲಿಯೊಳಗೆ
ಜೇನು ಗೂಡು ಕಟ್ಟಿ ಬೆಳೆಸಿ ಸಾವಿರಾರು
ಜೀವಗಳಿಗೆ ಆಲದ ಮರವಾಯಿತು ಎನ್ನ ಜೀವ!!

ಮನುಕುಲದ ಇತಿಹಾಸದಲ್ಲಿ
ಅಳಿಸಲಾಗದ ಲಿಪಿ ಬರೆದು
ಅಮರವಾಯಿತು ಎನ್ನ ಜೀವ !!

ನಾನಾರು ಎಂಬ ಪ್ರಶ್ನೆಗೆ ಉತ್ತರ ಸಿಗದೆ ಪ್ರಶ್ನೆಯಾಗಿಯೇ ಉಳಿಯಿತು
ಎನ್ನ ಜೀವ!!

ನಾನಾ ಸಂಬಂಧದ ಪಾತ್ರಕ್ಕೆ
ಜೀವ ತುಂಬಿ ಬದುಕುವಲ್ಲಿ
ಯಶಸ್ವಿಯಾಯಿತು ಎನ್ನ ಜೀವ!!

ಸಂಸಾರದ ಯುದ್ಧಭೂಮಿಯಲ್ಲಿ
ಗೆದ್ದು ದೇವತೆ ಪಟ್ಟ ಮುಡಿಗೇರಿಸಿಕೊಂಡಿತ್ತು
ಎನ್ನ ಜೀವ !! ಹೆಣ್ಣು ಹೆಣ್ಣಾಗಿ .

🙏🌹🙏🌹🙏🌹🙏🌹

ಶ್ರೀಮತಿ ಅಮರಾವತಿ ಹಿರೇಮಠ
9108259250

Related Articles

Leave a Reply

Your email address will not be published. Required fields are marked *

Back to top button