ಬಿಜೆಪಿ ಪಕ್ಷವು ಈಗ ಬೆಳವಣಿಗೆಗಾಗಿ ಹೋರಾಟ ನಡೆಸುತ್ತಿಲ್ಲ . ಬದಲಿಗೆ ಉಳುವಿಗಾಗಿ ಹೋರಾಟ ನಡೆಸುತ್ತಿದೆ?

ಬಿಜೆಪಿ ಉಳಿವಿಗಾಗಿ ಹೋರಾಟ ನಡೆಸುತ್ತಿದೆ ಕರ್ನಾಟಕದಲ್ಲಿನ ಬಿಜೆಪಿ ಪಕ್ಷವು ಈಗ ಬೆಳವಣಿಗೆಗಾಗಿ ಹೋರಾಟ ನಡೆಸುತ್ತಿಲ್ಲ ಬದಲಿಗೆ ಉಳುವಿಗಾಗಿ ಹೋರಾಟ ನಡೆಸುವ ದಯನೀಯ ಪರಿಸ್ಥಿತಿ ಅದಕ್ಕೆ ಒದಗಿದೆ ಇದಕ್ಕೆ ಮುಖ್ಯ ಕಾರಣ ಕೇಂದ್ರದ ಪ್ರಮುಖ ಸಚಿವರು ಮತ್ತು ರಾಷ್ಟ್ರ ನಾಯಕರು ಕಾರಣರಾಗಿದ್ದಾರೆ ಕರ್ನಾಟಕದ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಇದೇ ನಿರ್ಣಯ ಕೈಗೊಂಡಿದ್ದಾರೆ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಅವರ ಮಗ ವಿಜೇಂದ್ರ ಅವರಿಗೆ ಸೇನಾಪತಿ ಪಟ್ಟ ಕಟ್ಟಿದ್ದರೆ ಇಂತಹ ಕೆಟ್ಟ ಪರಿಸ್ಥಿತಿ ಬರುತ್ತಿರಲಿಲ್ಲ ಕೋಟೆ ಲೂಟಿಯಾದ ಮೇಲೆ ಕೀಲಿ ಹಾಕಿದರಂತೆ ಈಗ ಕಳೆದ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಯುದ್ಧ ಅಧಿಕಾರವನ್ನು ಕಳೆದುಕೊಂಡು ಅತ್ಯಂತ ಕೆಟ್ಟ ಪರಿಸ್ಥಿತಿಗೆ ತಲುಪಿದಾಗ ಈಗ ಆ ತಪ್ಪನ್ನು ತಿದ್ದಿಕೊಳ್ಳಲು ಬಿಜೆಪಿ ಹೊರಟಿದ್ದು ವಿಷಾದಕರ ಸಂಗತಿಯಾಗಿದೆ ಉರಿಯುತು ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತಾಗಿದೆ ಬಿಜೆಪಿಯ ಪರಿಸ್ಥಿತಿ ಇದಕ್ಕೆ ಮುಖ್ಯ ಕಾರಣ ಬಿ ಎಲ್ ಸಂತೋಷ್ ಅವರು ಕರ್ನಾಟಕದ ಯಡಿಯೂರಪ್ಪನವರ ನಾಯಕತ್ವವನ್ನು ನಾಶ ಮಾಡಿ ಅವರನ್ನು ಮೂಲೆಗುಂಪು ಮಾಡಲು ಹೊರಟಿದ್ದು ಮತ್ತು ಲಿಂಗಾಯತ ಸಮುದಾಯವನ್ನು ಓಲೈಸಲು ಸಾಧ್ಯವಿಲ್ಲ ಎಂಬ ಮಾತುಗಳು ಕರ್ನಾಟಕದ ಜನತೆಯ ಮೇಲೆ ತುಂಬಾ ಪರಿಣಾಮ ಬೀರಿದವು ಇದಕ್ಕೆ ಉತ್ತರ ರೂಪವಾಗಿ ಚುನಾವಣೆ ಫಲಿತಾಂಶ ಬಂದಿತ್ತು. ಈಗ ಅರವಿಗೆ ಬಂದು ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಅಧ್ಯಕ್ಷ ಪದವಿಯನ್ನು ನೀಡಿ ಲಿಂಗಾಯತ ಸಮುದಾಯವನ್ನು ಗೌರವಿಸಲು ಹೊರಟಿದ್ದು ಆಶ್ಚರ್ಯಕರ ಸಂಗತಿಯಾಗಿದೆ ಈಗಲಾದರೂ ಸಂತೋಷ ವರಿಗೆ ತಾವು ಮಾಡಿದ ತಪ್ಪಿನ ಅರಿವಾಗಿರಬಹುದು ಎಂದು ಕೊಳ್ಳುತ್ತೇನೆ ಯಾರೋ ಮಾಡುವ ತಪ್ಪಿಗೆ ಯಾರೋ ಬಲಿ ಪಶು ವಾಗುವಂತೆ ಆಗಿದೆ ಪರಿಸ್ಥಿತಿ ಈಗ ಮುಂಬರುವ ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಬಿಜೆಪಿಯ ಅಳಿವು ಉಳಿವಿನ ಪ್ರಶ್ನೆ ನಿಂತಿದೆ ಸದ್ಯಕ್ಕೆ ಹೇಳುವುದಾದರೆ ಬಿಜೆಪಿಗೆ ಸುಧಾರಿಸಿಕೊಳ್ಳುವ ಬೆಳೆಯುವ ಅವಕಾಶಕ್ಕಿಂತ ಹೆಚ್ಚಾಗಿ ಇದ್ದುದನ್ನು ಉಳಿಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ ಈಗ ಬಿಜೆಪಿ ಉಳಿವಿಗಾಗಿ ಹೋರಾಟ ನಡೆಸಲು ಮುಂದಾಗಿದ್ದು ಯಡಿಯೂರಪ್ಪನವರ ಮಗ ಎಂಬ ಕಾರಣದಿಂದ ಮತ್ತು ಚಾಣಕ್ಯ ರಾಜಕಾರಣಿ ಯುವ ನಾಯಕ ಎಂಬ ಕಾರಣದಿಂದ ಚುನಾವಣಾ ತಂತ್ರಗಾರಿಕೆ ಏನಾದರೂ ಮಾಡಿ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಕರ್ನಾಟಕದಲ್ಲಿ ಗೆಲ್ಲಬಹುದೆಂಬ ನಿರೀಕ್ಷೆ ಇದೆ ಬದಲಿಗೆ 8 ಸ್ಥಾನಗಳು ಗೆದ್ದರೆ ಖಂಡಿತವಾಗಿ ಬಿಜೆಪಿ ಬಲಿಪಶುವಾಗುತ್ತದೆ ಮತ್ತು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ನಾಯಕತ್ವವು ಮುಕ್ತಾಯವಾಗುತ್ತದೆ ಬಹಳ ಎಚ್ಚರಿಕೆಯಿಂದ ತಂದೆ ಮಗ ಹೆಜ್ಜೆ ಇಡಬೇಕಾಗಿದೆ ಒಂದು ವೇಳೆ ಈ ಚುನಾವಣೆನಲ್ಲಿ ಆಳುವ ಪಕ್ಷಕ್ಕೆ ಹೆಚ್ಚಿನ ಸ್ಥಾನ ಬಂದು ಬಿಜೆಪಿ ನೆಲಕಚ್ಚಿದರೆ ಅದರ ಹೊಣೆ ಯಡಿಯೂರಪ್ಪನವರು ಮತ್ತು ಅವರ ಮಗ ವಿಜೇಂದ್ರ ಹೊರಬೇಕಾಗುತ್ತದೆ ಒಂದು ವೇಳೆ ಗೆದ್ದರೆ ಬಿಜೆಪಿ ಎಲ್ಲ ನಾಯಕರು ಅದಕ್ಕೆ ಕಾರಣವೆಂದು ಹೇಳಲಾಗುತ್ತದೆ ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಉಳಿಸಿಕೊಳ್ಳುವುದು ಮತ್ತು ಬೆಳೆಸುವದು ತೀರ ಅವಶ್ಯ ಮತ್ತು ಅನಿವಾರ್ಯವಾಗಿದೆ ಈಗ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಕೌರವರಂತೆ ಚಕ್ರವ್ಯೂಹವನ್ನು ರಚಿಸಿಕೊಂಡು ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ ಆ ಜೀವವನ್ನು ಭೇದಿಸಲು ಬಬ್ರುವಾಹನ ತರಹ ಉತ್ಸಾಹ ಬರೀತರಾಗಿ ಮುನ್ನುಗುತ್ತಿದ್ದಾರೆ ಈ ಯುದ್ಧದಲ್ಲಿ ಚಕ್ರವ್ಯೂಹ ಭೇದಿಸಿ ಗೆಲ್ಲುತ್ತಾರೆ ಉಸಿರುಗಟ್ಟಿ ದಿಕ್ಕು ತೋಚದಂತಾಗಿ ಅಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಾರೆ ಕಾದು ನೋಡಬೇಕು ಎಲ್ಲವೂ ಕಾಲ ನಿರ್ಣಯಿಸುತ್ತದೆ ನಾವು ಅಂದುಕೊಂಡಂತೆ ಯಾವುದೂ ಆಗುವುದಿಲ್ಲ ಆಗಿದ್ದೆ ಅಂದುಕೊಳ್ಳಬೇಕು ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ



