ತುರ್ವಿಹಾಳ: ಪಟ್ಟಣ ಪಂಚಾಯಿತಿಯ 4ನೇ ವಾರ್ಡ್ಗೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಜಯಶಾಲಿ

ಪಟ್ಟಣ ಪಂಚಾಯತ್ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಜಯಶಾಲಿ
ತುರ್ವಿಹಾಳ: ಪಟ್ಟಣ ಪಂಚಾಯಿತಿಯ 4ನೇ ವಾರ್ಡ್ಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆಲುವು ಸಾಧಿಸಿದೆ.
4ನೇ ವಾರ್ಡ್ ಕಾಂಗ್ರೆಸ್ ಪಕ್ಷದ ಸದಸ್ಯರಾದ ಡಿ.ಶಂಕರಗೌಡ ವಿರನಗೌಡ ಮೃತಪಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಹಿಂದುಳಿದ ವರ್ಗ (ಅ) ಸ್ಥಾನದ ಉಪಚುನಾವಣೆಯಲ್ಲಿ 735 ಮತಗಳಲ್ಲಿ ಭಾರತೀಯ ಜನತಾಪಕ್ಷ ಅಭ್ಯರ್ಥಿ ಮುನಿಯಪ್ಪ ತಂದೆ ಪರಮೇಶ್ವರಪ್ಪ 376 ಮತಗಳನ್ನು ಪಡೆದು 22 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಲಾಜಿ ತಂದೆ ಮರಿಯಪ್ಪ 354 ಮತಗಳನ್ನು ಪಡೆದಿದ್ದಾರೆ
ಸಂಭ್ರಮಾಚರಣೆ. ಪಟ್ಟಣ ಪಂಚಾಯತ್ ಉಪಚುನಾವಣೆಯಲ್ಲಿ ಮುನಿಯಪ್ಪ ತಂದೆ ಪರಮೇಶ್ವರಪ್ಪ 22 ಮತಗಳ ಅಂತರದಿಂದ ಜಯಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ಮುಂದೆ ಈಳು ಕಾಯಿ ಹೊಡೆದು ಕನಕದಾಸ ಸರ್ಕಲ್ ಬಸವೇಶ್ವರ, ಸರ್ಕಲ್ ನಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕ ಮಾತನಾಡಿ ಪಟ್ಟಣದ ಶಂಕರಲಿಂಗೇಶ್ವರ ತಾತನವರ ಕೃಪಾಶೀರ್ವಾದ ಮತ್ತು ಕಾಂಗ್ರೆಸ್ ಪಕ್ಷದ ದುರಾಡಳಿತಕ್ಕೆ ಜನರು ಬೆಸತ್ತು ನಮ್ಮ ಪಕ್ಷದ ಅಭ್ಯರ್ಥಿಗೆ ಆಶೀರ್ವಾದ ಮಾಡಿದ್ದಾರೆ ಎಂದರು
ಕೆ.ಕರಿಯಪ್ಪ ಸಿಂಧನೂರು ಮಾತನಾಡಿ ತುರ್ವಿಹಾಳ ಪಟ್ಟಣ ಪಂಚಾಯತ್ ಅಭ್ಯರ್ಥಿಯ ಗೆಲುವು ಇದು ಕಾರ್ಯಕರ್ತರ ಗೆಲುವು ಭಾರತೀಯ ಜನತಾ ಪಕ್ಷಕ್ಕೆ ಮುಂದಿನ ದಿನಮಾನಗಳಲ್ಲಿ ಎಲ್ಲಾ ಸ್ಥಳೀಯ ಚುನಾವಣೆಗೆ ಜನರು ಬೆಂಬಲಿಸುತ್ತಾರೆ ಎಂದರು.
ಸಂಭ್ರಮಾಚರಣೆಯಲ್ಲಿ: ಬಸವರಾಜ್ ಸ್ವಾಮಿ ಹಸಮಕಲ್, ರುದ್ರಸ್ವಾಮಿ ಕೆಂಡದ ಮಠ, ಚಂದ್ರಕಾಂತ ಗೂಗೆಬಾಳ್ ಜಿಲ್ಲಾ ಉಪಾಧ್ಯಕ್ಷರು, ಶರಣಯ್ಯ ಸೊಪ್ಪಿನಮಠ್ ಮಂಡಲ ಅಧ್ಯಕ್ಷರು ಮಸ್ಕಿ, ಸಿದ್ದೇಶ್ ಗುರಿಕಾರ್ ವಕೀಲರು, ವೆಂಕೋಬಯ್ಯ ಶೆಟ್ಟಿ, ವೆಂಕಣ್ಣ ಸಾಹುಕಾರ್ ಗುಂಡ, ಕರಕಪ್ಪ ಸಾಹುಕಾರ,ಬಾಲಪ್ಪ ಕುಂಟೋಜಿ ಕರಿಯಪ್ಪ ಭಂಗಿ, ನಿಂಗಪ್ಪ ಸಜ್ಜನ್, ಚನ್ನಬಸವ ದೇಸಾಯಿ, ಸಿದ್ದರಾಮೇಶ ತಾಲೂಕ ನಗರ ಅಧ್ಯಕ್ಷರು ಸಿಂಧನೂರು, ಚಂದ್ರು ಪವಾಡಶೆಟ್ಟಿ,ವೆಂಕಣ್ಣ ಉಪ್ಪಾರ್,ನಿರುಪಾದಿ ಉಪ್ಪಲದೊಡ್ಡಿ, ಶಿವುಮಣಿ ,ಮರಿಸ್ವಾಮಿ ಬುದ್ದಿನ್ನಿ,ಬಸನಗೌಡ ಮೈಲಾಪುರ್, ಯಲ್ಲಪ್ಪ ಪೂಜಾರಿ, ನಾಗರಾಜ್ ತೆಕ್ಕಲಕೋಟಿ, ನಾಗರಾಜ್ ಗಡ್ಯಾಳ್, ದೇವಪ್ಪ ಬಳಗಾನೂರ, ಮತ್ತು ಪಕ್ಷದ ಹಿರಿಯ ಹಾಗೂ ಕಿರಿಯ ಕಾರ್ಯಕರ್ತರು ಭಾಗವಹಿಸಿದ್ದರು





