ಉಚಿತ ಆರೋಗ್ಯ ಶಿಬಿರ ಬಡವರಿಗೆ ವರದಾನ ತೊಟಗಂಟಿ. ಇರಕಲ್ಲಗಡ ಗ್ರಾಮ.

ಉಚಿತ ಆರೋಗ್ಯ ಶಿಬಿರ ಬಡವರಿಗೆ ವರದಾನ ತೊಟಗಂಟಿ.
ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ಇರಕಲ್ಲಗಡ ಗ್ರಾಮದಲ್ಲಿ KFIL ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ಬೇವಿನಹಳ್ಳಿ ಹಾಗೂ ಕಲ್ಯಾಣ ರಾಜ್ಯ ರಕ್ಷಣಾ ಸೇವಾ ಸಂಸ್ಥೆ ಕೊಪ್ಪಳ, ರೋಟರಿ ಕ್ಲಬ್ ಆಫ್ ರೈಸ್ ಬೌಲ್ ಗಂಗಾವತಿ, ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಇರಕಲ್ಲಗಡ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಯಿತು.
ಉದ್ಯಮಿ ಮಾರುತಿ ತೊಂಟಗಂಟಿ ಮಾತನಾಡಿ ಜನ ಸಾಮನ್ಯರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಬಡ ಕೂಲಿಕಾರರಿಗೆ ಉಚಿತ ಆರೋಗ್ಯ ಶಿಬಿರ ತುಂಬಾ ಅನುಕೂಲವಾಗಿದೆ. ಯಾರು ಕೂಡ ಹಿಂಜರಿಯದೇ ತಪಾಸಣೆ ಮಾಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಮಂಜುನಾಥ, ಪ್ರಮುಖರಾದ ರಾಮಣ್ಣ ಚೌಡ್ಕಿ, ಮಂಜುನಾಥ ಇರಕಲಗಡ ಇತತರು ಇದ್ದರು.
ಗೌತಮ್ ಯಾದವ್ ಪ್ರಜಾಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ


