ಸಂಪಾದಕೀಯ

ಪೌರಕಾರ್ಮಿಕರನ್ನು ಖಾಯಂ ಮಾಡಲು ಒತ್ತಾಯಿಸಿ – ಬೆಂಗಳೂರು. 5.12.2023 …..

ಪೌರಕಾರ್ಮಿಕರನ್ನು ಖಾಯಂ ಮಾಡಲು ಒತ್ತಾಯಿಸಿ – ಬೆಂಗಳೂರು. 5.12.2023 ರಂದು ನಮ್ಮ ಮೇಲ್ಕಂಡ ಕ್ರಿಯಾ ಸಮಿತಿಯ ವತಿಯಿಂದ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಪೌರಕಾರ್ಮಿಕರನ್ನು ಖಾಯಂ ಮಾಡಲು ಒತ್ತಾಯಿಸಿ ಸಭೆಯನ್ನು ನಡೆಸುತ್ತಿರುವ ಕುರಿತು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇರವೇತನ ಅದ್ಯಕ್ಷ ಪಿ.ಎನ್. ಮುತ್ಯಾಲಪ್ಪ ತಿಳಿಸಿದರು.

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಬಿಬಿಎಂಪಿಯಲ್ಲಿನ ನೇರ ವೇತನ ಪೌರಕಾರ್ಮಿಕರು ಮತ್ತು ಲಾರಿ, ಆಟೋ ಚಾಲಕರು, ಸಹಾಯಕರು, ಲೋಡರ್‌ಗಳ ಸೇವೆಯನ್ನು ಖಾಯಂ ಮಾಡಲು ಒತ್ತಾಯಿಸಿ ನಮ್ಮ ಕ್ರಿಯಾ ಸಮಿತಿಯ ವತಿಯಿಂದ ದಿನಾಂಕ: 05.12.2023 ರಂದು ಬೆಳಿಗ್ಗೆ 11:00 ಗಂಟೆಗೆ ಮಾನ್ಯ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸಿ, ಡಾ|| ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಸಭೆಯನ್ನು ನಡೆಸಲು ಉದ್ದೇಶಿಸಿದ್ದೀಈವೆಂದರು . ಈ ಕಾರ್ಯ ಕ್ರಮದಲ್ಲಿ ಜಿ.ಕೃಷ್ಣಯ್ಯ , ನರಸಿಂಹ , ಎಂ. ಸುಬ್ಬರಾಯುಡು , ದಾಸ್‌ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ ಯಲ್ಲಿದ್ದರು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button