ಸಂಪಾದಕೀಯ

ಕರ್ನಾಟಕ ಸಂಭ್ರಮ-50 ರ ಜ್ಯೋತಿ ರಥಯಾತ್ರೆ

ಕರ್ನಾಟಕ ಸಂಭ್ರಮ-50 ರ ಜ್ಯೋತಿ ರಥಯಾತ್ರೆ

ಕನಕಗಿರಿ ತಾಲ್ಲೂಕಿನ ಗಡಿಭಾಗ ಹುಲಿಹೈದರದಲ್ಲಿ ಶಾಸಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಗಡಗಿ , ಕನಕಗಿರಿ ವಿಧಾನಸಭಾ ಕ್ಷೇತ್ರ ಹಾಗೂ ಸಚಿವರು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಎಲ್ಲಾ ಜನಪ್ರತಿನಿಧಿಗಳು, ವಿವಿಧ ಕನ್ನಡಪರ ಸಂಘಟನೆಯ ಪದಾಧಿಕಾರಿಗಳೊಂದಿಗೆ ಕನಕಗಿರಿ ಗಡಿ ಭಾಗದ ಹುಲಿಹೈದರ್ ಗ್ರಾಮದಲ್ಲಿ ರಥವನ್ನು ಸ್ವಾಗತಿಸಿ ಪೂಜೆ ಸಲ್ಲಿಸಿ ಕನಕಗಿರಿ ಪಟ್ಟಣದ ಶ್ರೀಕಿತ್ತೂರ ರಾಣಿ ಚೆನ್ನಮ್ಮ ವೃತ್ತ ಮತ್ತು ಶ್ರೀ ಮರ್ಹಷಿ ವಾಲ್ಮೀಕಿ ವೃತ್ತ ಮಾರ್ಗವಾಗಿ ಆಗಮಿಸಿ ಪೊಲೀಸ್ ಠಾಣೆಯಲ್ಲಿ ತಂಗುವುದು.

ಮಂಗಳವಾರ ದಿನಾಂಕ:05.12.2023 ರಂದು ಬೆಳಿಗ್ಗೆ 9:00 ಗಂಟೆಗೆ ಕನಕಗಿರಿ ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದಿಂದ (ಕಲ್ಮಠ) ರಾಜಬೀದಿ ಮುಖಾಂತರ ಶ್ರೀ ಕನಕಾಚಲಪತಿ ದೇವಸ್ಥಾನದವರೆಗೆ ಮೇರವಣಿಗೆ ಮುಖಾಂತರ ಚಾಲನ ನೀಡುವುವುದು. ನಂತರ ಶ್ರೀ ಕನಕಾಚಲಪತಿ ದೇವಸ್ಥಾನದಿಂದ ಶ್ರೀ ಮರ್ಹಷಿ ವಾಲ್ಮೀಕಿ ವೃತ್ತ ಮಾರ್ಗವಾಗಿ ಕ್ರೀಡಾ.ಅಂಬೇಡ್ಕರ್ ವೃತ್ತ, ಶ್ರೀ ಬಸವೇಶ್ವರ ವೃತ್ತ ಮಾರ್ಗವಾಗಿ ಮುಸಲಾಪುರ ಗ್ರಾಮ ತಲುಪುವುದು, ಮುಸಲಾಪುರ ಗ್ರಾಮದಿಂದ ವಾಪಾಸ ಕನಕಗಿರಿ ಪಟ್ಟಣಕ್ಕೆ ಅದೇ ಮಾರ್ಗವಾಗಿ ವಾಪಾಸ ಬಂದು ಪೊಲೀಸ್ ಠಾಣೆಗೆ ಕನಕಗಿರಿಯಲ್ಲಿ ತಲುಪುವುದು ಎಂದು ಆಡಳಿತ ಅಧಿಕಾರಿ ವಿಶ್ವನಾಥ್ ಮುರಳಿ ತಿಳಿಸಿದರು .

ಬುಧವಾರ ದಿನಾಂಕ:06.12.2023 ರಂದು ಬೆಳಿಗ್ಗೆ 9:00 ಗಂಟೆಗೆಯಿಂದ ಕನಕಗಿರಿ ಪಟ್ಟಣದ ಶ್ರೀ ಮರ್ಹಷಿ ವಾಲ್ಮೀಕಿ ವೃತ್ತ ಮಾರ್ಗವಾಗಿ ತಾಲೂಕಿನ ನವಲಿ ಗ್ರಾಮಕ್ಕೆ ಸಂಚರಿಸಿ ಸ್ವಾಗತ ಮತ್ತು ಮೆರವಣಿಗೆ ಕಾರ್ಯಕ್ರಮ ನಂತರ ಕನಕಗಿರಿ ತಾಲೂಕಿನ ನವಲಿ ಹೋಬಳಿಯ ಗಡಿ ಭಾಗದ ವರೆಗೆ ತೆರಳಿ ಕನಕಗಿರಿ ತಾಲೂಕು ವತಿಯಿಂದ ಬಿಳ್ಕೊಡುವ ಸಮಾರಂಭ ನಡೆಯುತ್ತೆ ಎಂದು ವಿಶ್ವನಾಥ್ ಮುರುಡಿ ತಿಳಿಸಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button