ಸಂಪಾದಕೀಯ

ಅಂಬೇಡ್ಕರ್‌ ವಸತಿ ಶಾಲೆಗೆ ಜಿ.ಪಂ ಸಿಇಓ ಸರ್‌ ಭೇಟಿ. ಕನಕಗಿರಿ.

ಅಂಬೇಡ್ಕರ್‌ ವಸತಿ ಶಾಲೆಗೆ ಜಿ.ಪಂ ಸಿಇಓ ಸರ್‌ ಭೇಟಿ

ಶಾಲಾ ವಿದ್ಯಾರ್ಥಿಗಳಿಗೊಂದಿಗೆ ಮಧ್ಯಾಹ್ನದ ಊಟ ಸವಿದ ಸಿಇಓ

ಕನಕಗಿರಿ: ತಾಲೂಕಿನ ಹಿರೇಖೇಡಾ ಗ್ರಾ.ಪಂ ವ್ಯಾಪ್ತಿಯ ಸಿರಿವಾರ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಗೆ ಶುಕ್ರವಾರ ಜಿ.ಪಂ ಸಿಇಓ ರಾಹುಲ್‌ ರತ್ನಂ ಪಾಂಡೆ ಅವರು ಭೇಟಿ ನೀಡಿ, ಮೂಲಸೌಕರ್ಯಗಳನ್ನು ಪರಿಶೀಲನೆ ಮಾಡಿದರು.

ಮೊದಲಿಗೆ ವಸತಿ ಶಾಲೆಯ ಶಿಕ್ಷಕರ/ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲಿಸಿದ ಅವರು, ಗೈರು ಹಾಜರಾದ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲು ಆದೇಶಿಸಿದರು. ಬಳಿಕ ವಿದ್ಯಾರ್ಥಿಗಳಿಗೊಂದಿಗೆ ಪ್ರತ್ಯೇಕವಾಗಿ ಸಮಾಲೋಚಿಸಿ, ಶಾಲೆಯಲ್ಲಿನ ಮೂಲಸೌಕರ್ಯ ಹಾಗೂ ಹಾಸ್ಟೆಲ್‌ ವ್ಯವಸ್ಥೆಯ ಕುರಿತು ಮಾಹಿತಿಯನ್ನು ಪಡೆದುಕೊಂಡರು.

ಇದೇ ವೇಳೆ ವಸತಿ ಶಾಲೆಯ ಹಾಸ್ಟೆಲ್‌ ಗೂ ಹಾಗೂ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾ ಸಾಮಾಗ್ರಿಗಳ ಪರಿಕರಗಳ ದಾಸ್ತಾನು ಕೊಠಡಿಗಳಿಗೆ ಭೇಟಿ ನೀಡಿದರು. ಈ ವೇಳೆ ಯಾವುದೇ ಪರಿಕರಗಳು ಕೊಠಡಿಯಲ್ಲಿ ಇಲ್ಲದೇ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಬಳಿಕ ವಸತಿ ಶಾಲೆಯ ಮೂಲಸೌಕರ್ಯ ಕುರಿತು ಸಮಗ್ರ ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸಿ, ಒಂದು ವಾರದೊಳಗೆ ವರದಿಯನ್ನು ಸಲ್ಲಿಸಲು ಡಿಡಿ ಸೋಶಿಯಲ್ ವೆಲ್ ಫೇರ್ ಅವರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.

ಇನ್ನು, ಆಹಾರದ ದಾಸ್ತಾನು ಕೊಠಡಿಗೆ ಭೇಟಿ ನೀಡಿದ ಅವರು, ಆಹಾರದ ಗುಣಮಟ್ಟವನ್ನು ಪರೀಕ್ಷೆ ಮಾಡಿದರು. ಖುದ್ದು, ವಿದ್ಯಾರ್ಥಿಗಳೊಂದಿಗೆ ಕುಳಿತುಕೊಂಡು ಮಧ್ಯಾಹ್ನದ ಭೋಜನವನ್ನು ಸವಿದರು.

ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ‌ ಚಂದ್ರಶೇಖರ್‌ ಕಂದಕೂರ್, ಸಹಾಯಕ ನಿರ್ದೇಶಕ (ಪಂ.ರಾ) ವೀರಣ್ಣ ನಕ್ರಳ್ಳಿ, PRED AEE ವಿಜಯಕುಮಾರ್, BEO ವೆಂಕಟೇಶ್‌, PDO ಅಮರೇಶ್‌ ರಾಠೋಡ್, ಗ್ರಾ.ಪಂ ಉಪಾಧ್ಯಕ್ಷ ಜಗದೀಶ್‌ ಗದ್ದಿ, ಸದಸ್ಯರಾದ ಶಿವಶಂಕ್ರಪ್ಪ, ಶಿವಪುತ್ರಪ್ಪ, ರಾಜಾಸಾಬ್‌, ಗ್ರಾಮದ ಮುಖಂಡರಾದ ರಮೇಶ್‌ ನಾಯಕ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button