ಸಂಪಾದಕೀಯ

ಹುಲಿಹೈದರ್‌ ಗ್ರಾ.ಪಂ ಗೆ ಜಿ.ಪಂ ಸಿಇಓ ಭೇಟಿ…ಕನಕಗಿರಿ.

ಹುಲಿಹೈದರ್‌ ಗ್ರಾ.ಪಂ ಗೆ ಜಿ.ಪಂ ಸಿಇಓ ಭೇಟಿ

ವಿವಿಧ ಯೋಜನೆಯ ಪ್ರಗತಿ ಪರಿಶೀಲಿಸಿದ ಸಿಇಓ

ಕನಕಗಿರಿ: ತಾಲೂಕಿನ ಹುಲಿಹೈದರ್ ಗ್ರಾಮ ಪಂಚಾಯತಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ಅವರು ಶುಕ್ರವಾರ ಭೇಟಿ ನೀಡಿ ಸಭೆಯನ್ನು ನಡೆಸಿ, ವಿವಿಧ ಯೋಜನೆಯ ಪ್ರಗತಿಯನ್ನು ಪರಿಶೀಲನೆ ಮಾಡಿದರು. ಈ ವೇಳೆ ನರೇಗಾ, ಎಸ್.ಬಿಎಂ, NRLM ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಪ್ರಗತಿ ಹಾಗೂ ಜನರ ಬೇಡಿಕೆಗಳ ಕುರಿತು ಮಾಹಿತಿಯನ್ನು ಪಡೆದುಕೊಂಡು ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಸಭೆಯಲ್ಲಿ ಗ್ರಾಮಸ್ಥರು ಗ್ರಾಮದ ಪ್ರಮುಖ ಸಮಸ್ಯೆಗಳಾದ ಕುಡಿಯುವ ನೀರು, ಚರಂಡಿ ಸಮಸ್ಯೆ ಹಾಗೂ ಕೆರೆ ಸ್ವಚ್ಚತೆಯ ಕುರಿತು ಸಿಇಓ ಅವರಿಗೆ ಕ್ರಮ ಕೈಗೊಳ್ಳಲು ತಿಳಿಸಿದರು. ಈ ವೇಳೆ ಅವರು, ಗ್ರಾಮಸ್ಥರ ಮನವಿಗೆ ಸ್ಪಂದಿಸಿ, ಖುದ್ದು ತಾವೇ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮದ ದುರ್ಗಮ್ಮ ದೇಗುಲದ ಪಕ್ಕದಲ್ಲಿರುವ ಕೆರೆಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಕೆರೆಯನ್ನು ಅಭಿವೃದ್ಧಿಗೊಳಿಸಲು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡುವಂತೆ PRED AEE ರವರಿಗೆ ತಿಳಿಸಿದರು.

ನಂತರ ಗ್ರಾಮದ ಗ್ರಂಥಾಲಯ, ಸರ್ಕಾರಿ ಪ್ರೌಢ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ ಕುರಿತು ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.

ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ‌ ಚಂದ್ರಶೇಖರ್‌ ಕಂದಕೂರ್, ಸಹಾಯಕ ನಿರ್ದೇಶಕ (ಪಂ.ರಾ) ವೀರಣ್ಣ ನಕ್ರಳ್ಳಿ, PRED AEE ವಿಜಯಕುಮಾರ್, BEO ವೆಂಕಟೇಶ್‌, CDPO ವಿರುಪಾಕ್ಷಿ, PDO ಅಮರೇಶ್‌ ರಾಥೋಡ್, ಗ್ರಾ.ಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರು, ಉಪಾಧ್ಯಕ್ಷ ಜಗದೀಶ್‌ ಗದ್ದಿ, ಸದಸ್ಯರಾದ ಶಿವಶಂಕ್ರಪ್ಪ, ಶಿವಪುತ್ರಪ್ಪ, ರಾಜಾಸಾಬ್‌, ಪಾರ್ವತಮ್ಮ, ಹುಲಿಗೆಮ್ಮ, ಗ್ರಾಮದ ಮುಖಂಡರಾದ ರಮೇಶ್‌ ನಾಯಕ, ಅಮರಪ್ಪ ಗದ್ದಿ, ಕಂಠೆಪ್ಪ ಸಿರಿವಾರ, ಗೋಸ್ಲಪ್ಪ ಗದ್ದಿ, ಶರಣಪ್ಪ ಗದ್ದಿ, ಸಣ್ಣ ಹನುಮಂತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಮಸ್ಥರು ಹಾಜರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button