ಡಿಸೆಂಬರ್ 23ರಂದು ಬೆಂಗಳೂರಿನಲ್ಲಿರೈತರ ರಾಷ್ಟ್ರೀಯ ಮಹಾಧಿವೇಶನ.

ಬೆಂಗಳೂರು. 16-12- 23
ರಾಜ್ಯದ ರೈತರ ಸಂಪೂರ್ಣ ಸಾಲ ಮನ್ನಾ ,ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನಿಗೆ ಒತ್ತಾಯಿಸಲು ,ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ
ರೈತರ ರಾಷ್ಟ್ರೀಯ ಮಹಾಧಿವೇಶನ.
ಕಳೆದ ಮೂರು ವರ್ಷಗಳಿಂದ ಅತಿವೃಷ್ಟಿ ಪ್ರವಾಹ ಹಾನಿ ಮಳೆಹಾನಿ, ಬರಗಾಲಕ್ಕೆ ತುತ್ತಾಗಿರುವ ರಾಜ್ಯದ ಎಲ್ಲಾ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿ ಬೆಳೆ ನಾಶವಾಗಿದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅದಕ್ಕಾಗಿ ಸಾಲಮನ್ನಾ ಆಗಲೇಬೇಕು, ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು 12 ಲಕ್ಷ ಕೋಟಿ ಮನ್ನಾ ಮಾಡಿರುವ ರೀತಿ ರೈತರ ಸಾಲ ಮನ್ನಾ ಆಗಬೇಕು, ಈ ಬಗ್ಗೆ ರೈತರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ 23 ರಂದು ಕೋರಿಕೆ ಪತ್ರ ಸಲ್ಲಿಸಲಾಗುತ್ತದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿ ರೈತರನ್ನು ದಿಕ್ಕು ತಪ್ಪಿಸಬಾರದು, ರೈತರು ಸಾಲ ಮನ್ನಾ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ
ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕುಗಳು ಬಡ್ಡಿ ದುಪ್ಪಟ್ಟುಆಗುತ್ತದೆ ಎಂದು ಹೆದರಿಸಿ ಖಾಲಿಪತ್ರಕ್ಕೆ ರೈತರ ಸಹಿ ಪಡೆದು ಸಾಲ ನವೀಕರಣ ಮಾಡುತ್ತಿದ್ದಾರೆ ಈ ಬಗ್ಗೆ ರೈತರು ಜಾಗೃತರಾಗಿರಬೇಕು
ಪ್ರಕೃತಿಯ ಮುನಿಸಿನಿಂದ ಭತ್ತ ಕಬ್ಬು ತೊಗರಿ ಜೋಳ ರಾಗಿ ಉತ್ಪಾದನೆ ಶೇಕಡ 50ರಷ್ಟು ಕಡಿಮೆಯಾಗಿರುವ ಕಾರಣ ಹೊರದೇಶಕ್ಕೆ ಹೋಗುವ ಆಹಾರಧಾನ್ಯಗಳನ್ನು ರಫ್ತು ನಿಷೇಧ ಮಾಡಿದ್ದಾರೆ ಈಗಲಾದರೂ ರೈತರ ಶಕ್ತಿ, ಶ್ರಮದ ಬಗ್ಗೆ ಸರ್ಕಾರಗಳು ವಿಶೇಷ ಕಾಳಜಿ ವಹಿಸಲಿ
ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿ ಆಗಬೇಕು ಸ್ವಾಮಿನಾಥನ್ ಆಯೋಗದ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು ಪ್ರಧಾನಿಯವರು ರೈತರಿಗೆ ಭರವಸೆ ನೀಡಿದಂತೆ ಕೇಂದ್ರ ಸರ್ಕಾರ ಕೂಡಲೇ ಈ ಕಾನೂನು ಜಾರಿ ಮಾಡಬೇಕು
ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ, ರಾಜ್ಯ ಸರ್ಕಾರ 2000ರೂ ಭಿಕ್ಷಾ ರೂಪದ ಪರಿಹಾರ ನೀಡುವುದು ಬೇಡ,ರೈತರ ನೆರವಿಗೆ ಬಾರದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕೀಯ ಚೆಲ್ಲಾಟ ಆಡುತ್ತಿದ್ದಾರೆ, ಸಂಪೂರ್ಣ ಬರ ಪರಿಹಾರ ನಷ್ಟ ಎಕರೆಗೆ ಕನಿಷ್ಠ 25,000 ರೂ ಬಿಡುಗಡೆ ಮಾಡಬೇಕು
ಕೇಂದ್ರ ಸರ್ಕಾರ ಸಕ್ಕರೆ ರಪ್ತು ನಿಷೇಧ ,ಯಥನಾಲ್ ಉತ್ಪಾದನೆಗೆ ತಡೆ ಹಾಕಿರುವುದು ಕಬ್ಬು ಬೆಳೆಯುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ರೈತರಿಗೆ ಆತಂಕ ಸೃಷ್ಟಿಯಾಗುತ್ತಿದೆ ಕೇಂದ್ರ ಸರ್ಕಾರ ಮರುಪರಿಶೀಲನೆ ನಡೆಸಲಿ ಎಂದು ಒತ್ತಾಯಿಸುತ್ತೇವೆ
ಪಂಜಾಬ್ ರಾಜ್ಯದಲ್ಲಿ ಟನ್ ಕಬ್ಬಿಗೆ 4000 ನಿಗದಿ ಮಾಡಿದ್ದಾರೆ, ರಾಜ್ಯದಲ್ಲಿ ಎರಡು ಮೂರು ಸಭೆಗಳಾದರೂ ಸಕ್ಕರೆ ಕಾರ್ಖಾನೆಗಳನ್ನು ಮಣಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ತೂಕದಲ್ಲಿ ಮೋಸ ಇಳುವರಿಯಲ್ಲಿ ಮೋಸ ಹಣ ಪಾವತಿಯಲ್ಲಿ ಮೋಸ ಮಾಡುತ್ತಿದ್ದರೂ ಸರ್ಕಾರ ಕಾರ್ಖಾನೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ
ರಾಜ್ಯ ಸರ್ಕಾರ ಕಬ್ಬು ಉತ್ಪಾದನೆ ವೆಚ್ಚ ಕಡಿಮೆ ಮಾಡಲು ಕಬ್ಬು ಬೇಸಾಯ ಕೂಲಿ ಕಾರ್ಮಿಕರ ಸಮಸ್ಯೆ ತಪ್ಪಿಸಲು ಎನ್ ಆರ್ ಇ ಜಿ ಯೋಜನೆಯನ್ನು ಲಿಂಕ್ ಮಾಡಬೇಕು, ಬಾಳೆ ಬೇಸಾಯಕ್ಕೆ ನೀಡಿರುವ ರೀತಿ
ಎಲ್ಲಾ ಕೃಷಿ ಬೆಳೆಗಳಿಗೂ ಕಬ್ಬಿನ ಬೆಳೆಗೂ ಕಡ್ಡಾಯವಾಗಿ ಬೆಳೆ ವಿಮೆಯನ್ನು ಜಾರಿಗೊಳಿಸಬೇಕು
ಬೆಳೆ ವಿಮೆ ಸರಳೀಕರಣಗೊಳಿಸಬೇಕು ಅತಿವೃಷ್ಟಿ ಬರ ನಷ್ಟ ಪರಿಹಾರ ಬೆಳೆ ವಿಮೆ ವ್ಯಾಪ್ತಿಯಲ್ಲಿ ನಷ್ಟ ಪರಿಹಾರ ನೀಡಬೇಕು
ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದಿಸಲು ತಮ್ಮ ಜೀವನವನ್ನೆ ತ್ಯಾಗ ಮಾಡುತ್ತಿರುವ 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು
ಕೃಷಿ ಪಂಪ್ಸೆಟ್ಗಳಿಗೆ ನೀಡುವ ಉಚಿತ ವಿದ್ಯುತ್ ತಪ್ಪಿಸುವಂತ ವಿದ್ಯುತ್ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು
ಕೃಷಿ ಪಂಪ್ಸೆಟ್ಗಳಿಗೆ ಹಗಲು ವೇಳೆ ನಿರಂತರ 10 ಗಂಟೆಗಳ ವಿದ್ಯುತ್ ನೀಡಬೇಕು,
ಕೃಷಿ ಪಂಫಶೆಟ್ಟಗಳಿಗೆ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡುವ 60% ಸಹಾಯಧನ ಕುಸುಮ ಯೋಜನೆಗೆ ರಾಜ್ಯ ಸರ್ಕಾರ ಶೇಕಡ 30ರಷ್ಟು ಸೇರಿಸಿ ಸಹಾಯಧನ ನೀಡಲಿ ಇದರಿಂದ ರೈತರಿಗೆ ಹಗಲು ವೇಳೆ ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್ ಸಿಗುತ್ತದೆ
ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇಕಡ 10 ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು ರೈತರ ಮಕ್ಕಳನ್ನು ಅಪಾಯದಿಂದ ಪಾರು ಮಾಡಬೇಕು
ದೆಹಲಿಯಲ್ಲಿ ವರ್ಷ ಕಾಲ ಹೋರಾಟ ಮಾಡಿದ ರೈತರ ಮೇಲೆ ಹಾಕಿರುವ ಪೊಲೀಸ್ ಮೊಖದಮೆಗಳನ್ನು ವಾಪಸ್ ಪಡೆಯಬೇಕು
ದೇಶದ ರೈತರನ್ನು ಸಂರಕ್ಷಿಸಲು ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತ ಸರ್ಕಾರ ಹೊರ ಬರಬೇಕು
ಬಗರ್ ಹುಕುಂ ಸಾಗುವಳಿ ರೈತರಿಗೆ ಅಡೆತಡೆಗಳನ್ನು ನಿವಾರಿಸಿ ಕೂಡಲೇ ಸಾಗುವಳಿ ಪತ್ರ ನೀಡಬೇಕು
ಈ ಎಲ್ಲಾ ಒತ್ತಾಯಗಳ ಬಗ್ಗೆ ರಾಜ್ಯದ ಸಹಸ್ರಾರು ರೈತರ ಸಮ್ಮುಖದಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡರ ನೇತೃತ್ವದಲ್ಲಿ ಬೆಂಗಳೂರಿನ ಅಧಿವೇಶನದಲ್ಲಿ ಚರ್ಚೆ ನಡೆಸಿ ರೈತರನ್ನು ಜಾಗೃತಿ ಮಾಡಿ ದೇಶದ ಎಲ್ಲಾ ರೈತರು ರಾಜಕೀಯೇತರವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗುವುಧು ಈ ಕಾರಣಕ್ಕಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 23 ರಂದು ಫ್ರೀಡಂ ಪಾರ್ಕಲ್ಲಿ ರೈತರ ಬೃಹತ್ ರೈತ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ
ರಾಜ್ಯಾದ್ಯಂತ ಎಲ್ಲಾ ರೈತ ಸಂಘಟನೆಗಳ ಮುಖಂಡರು, ರೈತರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಲ ಮನ್ನಾ ಆಗಲೇಬೇಕು ಎಂಬ ಕೋರಿಕೆ ಪತ್ರವನ್ನು ಅರ್ಜಿ ಸಲ್ಲಿಸುವ ಮೂಲಕ ಸರ್ಕಾರಕ್ಕೆ ಒತ್ತಾಯಿಸುವ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡುತ್ತೇನೆ
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಮತ ದಳ ವೆಂಕಟಸ್ವಾಮಿ
ಕರ್ನಾಟಕ ರಾಜ್ಯ ರೈತ ಸಂಘದ ನಾರಾಯಣ ರೆಡ್ಡಿ, ರಾಜ್ಯ ಕಬ್ಬು ಬೆಳೆಗಾರ ಸಂಘದ ಹತ್ತಳ್ಳಿದೇವರಾಜ್ , ಕನ್ನಡ ಚಳುವಳಿ ಜಿ ನಾರಾಯಣ್ ಕುಮಾರ್ ಸಂಘಟನೆ ರಾಜ್ಯಾಧ್ಯಕ್ಷಗುರುದೇವ್ ನಾರಾಯಣ ಕುಮಾರ್, ವಕೀಲ ಅಮರೇಶ್ ಸಿ ಎಚ್ ಗುರುಮೂರ್ತಿ, ಇದ್ದರು
ಅಧಿವೇಶನಕ್ಕೆ ಬರುವ ರೈತರಿಗೆ ಊಟದ ವ್ಯವಸ್ಥೆಯನ್ನು ರೈತರೇ ನಿರ್ವಹಿಸುತ್ತಿದ್ದಾರೆ – ನಾರಾಯಣ ರೆಡ್ಡಿ
ಬೆಂಗಳೂರು. ಅಧಿವೇಶನಕ್ಕೆ ಬರುವ ರೈತರಿಗೆ ಊಟದ ವ್ಯವಸ್ಥೆಯನ್ನು* ರೈತರೇ ನಿರ್ವಹಿಸುತ್ತಿದ್ದಾರೆ ನಾರಾಯಣ ರೆಡ್ಡಿ ಎಂದು ನಾರಾಯಣ ರೆಡ್ಡಿ ಅವರು ಇಂದು ಬೆಂಗಳೂರಿನ ಪ್ರೆಸ್ ಕ್ಕಬ್ ನಲ್ಲಿ ರೈತರ ಪರಿಸ್ಥಿತಿ ಯನ್ನು ತೋಡಿಕೊಂಡರು. ಒಂದೊಂದು ಜಿಲ್ಲೆ ರೈತರೇ ಒಂದೊಂದು ವ್ಯವಸ್ಥೆ ವಹಿಸಿಕೊಂಡಿದ್ದಾರೆ
ಗುಲ್ಬರ್ಗ ಜಿಲ್ಲೆಯಿಂದ ರೊಟ್ಟಿ ಚಟ್ನಿ
ಚಾಮರಾಜನಗರ ಜಿಲ್ಲೆಯಿಂದ ಬೆಲ್ಲದ ಕಾಯಿ ಮಿಠಾಯಿ ಸಿಹಿತಿಂಡಿ
ಮೈಸೂರು ಜಿಲ್ಲೆಯಿಂದ ಉದ್ದಿನ ಹಪ್ಪಳ ಮತ್ತು ಉಪ್ಪಿನಕಾಯಿ
ಗದಗ್ ಜಿಲ್ಲೆಯಿಂದ ಅನ್ನದ ವ್ಯವಸ್ಥೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸಾಂಬರ್ ತಯಾರಿಸಲು ತರಕಾರಿ ಎಣ್ಣೆ ಬೇಳೆ
ಶಿವಮೊಗ್ಗ ಜಿಲ್ಲೆಯಿಂದ ಅಡಿಕೆ ಊಟದ ತಟ್ಟೆ ಪೂರೈಸುವುದಾಗಿ ಆಯಾ ಜಿಲ್ಲೆಯ ರೈತರೇ ಸ್ವಯಂ ಪ್ರೇರಿತರಾಗಿ ಒಪ್ಪಿದ್ದಾರೆ ಸ್ವಾಭಿಮಾನದ ಸ್ವಾವಲಂಬಿ ಚಳುವಳಿ ಆಗಬೇಕೆಂಬ ಉದ್ದೇಶದಿಂದ ಈ ಅಧಿವೇಶನ ಆಯೋಜಿಸಲಾಗಿದೆ ಅಧಿವೇಶನಕ್ಕೆ ಬರುವ ರೈತರೆ ಸ್ವಂತ ಖರ್ಚಿನಿಂದ ಬರುತ್ತಿದ್ದು ಖರ್ಚಿಗಾಗಿ ಪ್ರತಿಯೊಬ್ಬರು ಐವತ್ತು ರೂಪಾಯಿ ದೇಣಿಗೆ ನೀಡುತ್ತಿದ್ದಾರೆ . ಇದು ನಮ್ಮ ದೇಶದಲ್ಲಿ ರೈತರ ಸ್ಥಿತಿ ಗತಿಗಳು. ವರದಿ. ಮಂಜುಳಾ ರೆಡ್ಡಿ.




