ಸಿನಿಮಾ

ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಲಕ್ಷ ತುಳಸಿ ಅರ್ಚನೆ

ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಲಕ್ಷ ತುಳಸಿ ಅರ್ಚನೆ

ಕನಕಗಿರಿ ಪಟ್ಟಣದ ಐತಿಹಾಸಿಕ ಪವಿತ್ರ ಪುಣ್ಯಕ್ಷೇತ್ರ ಎಂದು ಪ್ರಸಿದ್ಧವಾದ ಎರಡನೇ ತಿರುಪತಿ ಎಂದು ಸುಪ್ರಸಿದ್ಧ ಆರಾಧ್ಯ ವಾದ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ ಹಾಗೂ ವಿಶೇಷ ಪೂಜೆ ಕಾರ್ಯಕ್ರಮಗಳು ಜರಗಿದವು ಈ ದಿನ ವಿಶೇಷವಾಗಿ ಉತ್ತರ ದಿಕ್ಕಿನಲ್ಲಿರುವಂತಹ ದ್ವಾರ ದಿಂದ ಭಕ್ತರಿಗೆ ದರ್ಶನ ಬಿಡಲಾಗಿತ್ತು.

2023ರ ಕೊನೆಯ ಏಕಾದಶಿಯಾದ ವೈಕುಂಠ ಏಕಾದಶಿಯನ್ನು ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ಅಂದರೆ 2023 ರ ಡಿಸೆಂಬರ್ 23 ರಂದು ಆಚರಿಸ ಲಾಗಿರುತ್ತದೆ.

ನಂತರ ಮಾತನಾಡಿದ ಪವಮಾನ ಆಚಾರಿ ಅವರು ವೈಕುಂಠ ಏಕಾದಶಿ ಹಿಂದೂ ಧರ್ಮದಲ್ಲಿ ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನವನ್ನು ವಿಷ್ಣುವನ್ನು ಪೂಜಿಸಲು ಮೀಸಲಿಡಲಾಗಿದೆ ಮತ್ತು ಭಕ್ತರು ಉಪವಾಸವನ್ನು ಆಚರಿಸುತ್ತಾರೆ, ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ ಮತ್ತು ವಿಷ್ಣುವಿನ ಆಶೀರ್ವಾದ ಪಡೆಯಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಶುಭ ದಿನದಂದು, ವೈಕುಂಠದ ದ್ವಾರಗಳು ಭಕ್ತರಿಗೆ ತೆರೆಯುತ್ತವೆ ಎಂಬ ನಂಬಿಕೆಯಿದೆ. ಇದು ಭಾರತದಲ್ಲಿ ಪ್ರಮುಖ ಹಬ್ಬವಾಗಿದ್ದು, ವಿಷ್ಣುವಿನ ಎಲ್ಲಾ ದೇವಾಲಯಗಳಲ್ಲಿ ಆಚರಿಸಲಾಗುತ್ತದೆ. ಮಾರ್ಗಶೀರ್ಷ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ ಯಂದು ಹೇಳಿದರು.

ಈ ದಿನವು ಸಂಪೂರ್ಣವಾಗಿ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಜನರು ವಿಶೇಷ ವಿಷ್ಣುವನ್ನು ಮೆಚ್ಚಿಸಲು ಮತ್ತು ಆಶೀರ್ವಾದ ಪಡೆಯಲು ಈ ಶುಭ ದಿನದಂದು ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಉಪವಾಸವನ್ನು ಆಚರಿಸುತ್ತಾರೆ. ಈ ಏಕಾದಶಿಯನ್ನು ಭಾರತದಲ್ಲಿ ಹಾಗೂ ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷವಾಗಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಬಹಳ ವೈಭವದಿಂದ ಆಚರಿಸುತ್ತಾರೆ. ಹಾಗೆ ಕನಕಗಿರಿಯಲ್ಲೂ ಕೂಡ ಎರಡನೇ ತಿರುಪತಿ ಎಂದು ಪ್ರಸಿದ್ಧವಾದ್ದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ವೆಂಕಟೇಶ್ವರನ ಅವತಾರದ ನರಸಿಂಹ ಅವತಾರವಿದ್ದರಿಂದ ಪ್ರಾರ್ಥನೆ ಸಲ್ಲಿಸುತ್ತಾರೆ ಎಂಬುವುದು ಇಲ್ಲಿಯ ಸಾಂಪ್ರದಾಯವಾಗಿದೆ.

ಭಕ್ತರು ಕನಕಾಚಲ ಲಕ್ಷ್ಮೀ ನರಸಿಂಹನನ್ನು ಪೂಜಿಸುತ್ತಾರೆ, ಉಪವಾಸವನ್ನು ಆಚರಿಸುತ್ತಾರೆ ಮತ್ತು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹನನ್ನು ಮೆಚ್ಚಿಸಲು ಮತ್ತು ಅವರ ಆಶೀರ್ವಾದವನ್ನು ಪಡೆಯಲು ಜನರು ಈ ಶುಭ ದಿನದಂದು ವಿಷ್ಣು ಸಹಸ್ರನಾಮ, ಶ್ರೀ ಹರಿ ಸ್ತೋತ್ರವನ್ನು ಪಠಿಸುತ್ತಾರೆ. ಈ ಏಕಾದಶಿಯಂದು ಯಾರು ಪೂರ್ಣ ಭಕ್ತಿ ಮತ್ತು ಸಮರ್ಪಣೆಯಿಂದ ಉಪವಾಸವನ್ನು ಆಚರಿಸುತ್ತಾರೋ, ಅವರು ವಿಷ್ಣುವಿನ ಆಶೀರ್ವಾದವನ್ನು ಪಡೆಯುತ್ತಾರೆ ಮತ್ತು ನೇರವಾಗಿ ವೈಕುಂಠ ಧಾಮಕ್ಕೆ ಹೋಗುತ್ತಾರೆ ಎಂದು ನಂಬಲಾಗಿದೆ ಎಂದು ದೇಶುಕಾಚಾರಿ ಅರ್ಚಕರು ಹೇಳಿದರು.

ನಂತರ ದೇವಸ್ಥಾನದ ಅರ್ಚಕರಾದ ಸಿಂಗಾಚಾರಿ ಮಾತನಾಡಿ ದೇವಸ್ಥಾನ ದಲ್ಲಿ ಜನನ ಮತ್ತು ಸಾವಿನ ಚಕ್ರದಿಂದ ಮುಕ್ತಿಯನ್ನು ಯಶಸ್ವಿಯಾಗಿ ಪಡೆಯಲಾಗುತ್ತೆ ಎಂಬ ನಂಬಿಕೆಯಿದೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ವಿಶೇಷ ಲಕ್ಷ ತುಳಸಿ ಅರ್ಚನೆಗಾಗಿ ಬಿ ವಿ ಜೋಶಿ ರಂಗಾಚಾರಿ ದೇಶಕಛಾರ್ಯ ಅರ್ಚಕರು ರಂಗಣ್ಣ ಭಟ್ಟರ್ ಕೆಎಚ್ ಕುಲಕರ್ಣಿ ಚಿದಾನಂದ ಭಟ್ಟರ್ ಮಧುಸೂದನ್ ಆಚಾರಿ ಮೊದಲಾದವರು ಹಾಗೂ ಅನೇಕ ಸದ್ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button