ಸಂಪಾದಕೀಯ

ದತ್ತಿ ಉಪನ್ಯಾಸ, ಸನ್ಮಾನ ಕಾರ್ಯಕ್ರಮ ಕನಕಗಿರಿ.

ಕನಕಗಿರಿ

ದತ್ತಿ ಉಪನ್ಯಾಸ, ಸನ್ಮಾನ ಕಾರ್ಯಕ್ರಮ

ಕನಕಗಿರಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನಕಗಿರಿ ವತಿಯಿಂದ ದತ್ತಿ ಉಪನ್ಯಾಸ, ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ಇಲ್ಲಿನ ಆದರ್ಶ ವಿದ್ಯಾಲಯದಲ್ಲಿ ಡಿ. 30ರಂದು ಬೆಳಿಗ್ಗೆ 9ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ಸೂಳೇಕಲ್ ಬೃಹನ್ಮಠದ ಭುವನೇಶ್ವರಯ್ಯ ತಾತನವರು ಹಾಗೂ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಶರಣೆಗೌಡ ಪೊಲೀಸ್ ಪಾಟೀಲ ಅವರು ವಹಿಸುವರು.

ಬೆಂಗಳೂರಿನ ಕಸಾಪ ಸಂಘ/ಸಂಸ್ಥೆಯ ಪ್ರತಿನಿಧಿ ನಬಿಸಾಬ ಕುಷ್ಟಗಿ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಹಾಗೂ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕನಕರೆಡ್ಡಿ ಕೆರಿ ಅವರು ದಿ. ಸಾವಿತ್ರಮ್ಮ ಭುವನೇಶ್ವರಯ್ಯ ತಾತನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.

ಅಂತರರಾಷ್ಟ್ರೀಯ ಗಾಯಕ ಜೀವನಸಾಬ ಬಿನ್ನಾಳ ಅವರು ಕಾರ್ಯಕ್ರಮ ಉದ್ಘಾಟಿಸುವರು.

ಲಿಂ. ಶ್ರೀಮತಿ ಸಾವಿತ್ರಮ್ಮ ಭುವನೇಶ್ವರಯ್ಯ ತಾತನವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಕಾರ್ಯಕ್ರಮದಲ್ಲಿ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕಿ ಪ್ರಾಧ್ಯಾಪಕಿ ಆಶಿಕಾ ಎಸ್. ಎಚ್. ಅವರು ’12ನೇ ಶತಮಾನದ ಶಿವಶರಣೆಯರು, ಮಹಿಳೆ ಮತ್ತು ಸಮಾಜ ಕಲ್ಯಾಣ, ಬದುಕಿಗೆ ಭಾವೈಕ್ಯತೆ ಹಾಗೂ ಬೃಹನ್ಮಠದ ಆಧ್ಯಾತ್ಮಿಕ ವಿಚಾರಗಳು’ ಕುರಿತು ಉಪನ್ಯಾಸ ನೀಡುವರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮೆಹಬೂಬಹುಸೇನ ಅವರು ಆಶಯ ನುಡಿ ವ್ಯಕ್ತ ಪಡಿಸುವರು.
ಗಣ್ಯರು, ಜನಪ್ರತಿನಿಧಿಗಳು, ಕಸಾಪ ಪದಾಧಿಕಾರಿಗಳು ಭಾಗವಹಿಸುವರು.

ಈ ವೇಳೆ ಸಾಹಿತಿಗಳಾದ ಇಮಾಮಸಾಹೇಬ್ ಹಡಗಲಿ, ಪಾರ್ವತಿ ಕನಕಗಿರಿ, ಬೆಟ್ಟಪ್ಪ ಜೀರಾಳ, ನಾಗೇಶ ಚೆಲುವಾದಿ, ಯಮನೂರಪ್ಪ ವಡಕಿ ಹಾಗೂ ಪರ್ವಿನ್ ಗಂಗಾವತಿ ಅವರನ್ನು ಈ ಸಮಯದಲ್ಲಿ ಸನ್ಮಾನಿಸಲಾಗುವುದು ಎಂದು ಕೋಶಾಧ್ಯಕ್ಷ ತಿಪ್ಪಣ್ಣ ಮಡಿವಾಳರ. ಸಂಘ-ಸಂಸ್ಥೆ ಪ್ರತಿನಿಧಿ ಅಮರೇಶ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button