ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೇ ಸತಾಯಿಸುತ್ತಿರುವ ಬೈಲಕುಂಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು,

ಗ್ರಾಮ ಉದ್ಯೋಗ ಖಾತ್ರಿಯೋಜನೆಯಡಿಯಲ್ಲಿ ಸಂಕಷ್ಟದಲ್ಲಿರುವ ನೀಡದೆ ಕೂಲಿ ಕಾರ್ಮಿಕರುಗೆ ಕೆಲಸ ಕೊಡದೇ ಸತಾಯಿಸುತ್ತಿರುವ ಬೈಲಕುಂಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು,
ದಿನಾಂಕ 27/12/2023 ರಂದು ಹುಣಸಗಿ ತಾಲೂಕು ಬೈಲಕುಂಟಿ ಗ್ರಾಮ ಪಂಚಾಯಿತಿ ಒಳಪಡುವ ಗ್ರಾಮಸ್ಥರಿಗೆ ಡಿಸೆಂಬರ್ 27ರಿಂದ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ನೀಡುವದಾಗಿ ಗ್ರಾಮ ಪಂಚಾಯಿತಿ ಅಧಿಕಾರಿ ಭರವಸೆ ನೀಡಿದ್ದರು ಅದರಂತೆ ಗ್ರಾಮಗಳಿಂದ ಡಿಸೆಂಬರ್ 27ರಂದು ಬೆಳಗಿನ ಜಾವ ಗ್ರಾಮ ಪಂಚಾಯಿತಿಗೆ ಬಂದಾಗ ಯಾವುದೇ ಅಧಿಕಾರಿ ಕಾಣಲಿಲ್ಲ ಪಂಚಾಯತ್ ಮುಖ್ಯ ಅಧಿಕಾರಿಗಳಾದ ಪಿಡಿಒ ಅವರಿಗೆ ಫೋನು ಮಾಡಿ ಕೇಳಿದಾಗ ಸುಮಾರು 7,8 ಕಿಲೋಮೀಟರ್ ದೂರದ ಊರಲ್ಲಿ ಕೆಲಸವಿದೆ ಎಂದು ಕಾರ್ಮಿಕರಿಗೆ ಹೇಳಿದಾಗ ಅವರನ್ನು ಕರೆದುಕೊಂಡು ಹೋಗಲು ಯಾವುದೇ ವಾಹನ ಇಲ್ಲದ ಇರುವುದರಿಂದ ಮಧ್ಯಾಹ್ನವರೆಗೆ ಕಾದು ಕುಳಿತು ಸುಸ್ತಾಗಿದ ಮಹಿಳೆಯರು ಹಾಗೂ ಪುರುಷರು ಬೇಸರಗೊಂಡು ಇದೇ ಸಂದರ್ಭದಲ್ಲಿ ಮಾತನಾಡಿ
ಕೃಷ್ಣ ಎಡದಂಡೆ ಕಾಲುವೆಯ ನೀರು ನಿಲ್ಲಿಸಿರುವುದರಿಂದ ಯಾವುದೇ ನಮ್ಮ ಹೊಲದಲ್ಲಿ ಕೆಲಸ ಇಲ್ಲದೆ ಮನೆ ಸಂಸಾರ ನಡೆಸಲು ಬಹಳ ಕಷ್ಟಕರವಾಗಿರುವುದರಿಂದ ಪ್ರತಿ ನಮ್ಮ ಗ್ರಾಮದಲ್ಲಿ ನಮಗೆ ಉದ್ಯೋಗ ಖಾತ್ರಿ ಕೆಲಸ ನೀಡಬೇಕೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು,




