ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆಗಳು. ಬಹುದಿನಗಳ ಬೇಡಿಕೆಯಾಗಿದ್ದ ಮತ್ತು ವೀರಶೈವ ಲಿಂಗಾಯಿತರ ಸುಂದರ ಕನಸಾಗಿದ್ದ ಮತ್ತು ಅತ್ಯಂತ ಖುಷಿಕೊಡುವ ಸಂಗತಿ ಎಂದರೆ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುವುದು ಅದನ್ನು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಎಸ್ ಸಿದ್ದರಾಮಯ್ಯನವರು ಎಲ್ಲ ವೀರಶೈವ ಲಿಂಗಾಯತರ ಮಠಾಧೀಶ ಪೀಠಾಧೀಶರ ಹಾಗೂ ಬಸವಭಕ್ತರ ಮನವಿ ಮೇರೆಗೆ ಈಗ ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದ್ದಾರೆ ದುರ್ದೈವದ ಸಂಗತಿ ಎಂದರೆ ಬಸವಾಭಿಮಾನಿಗಳು ವೀರಶೈವ ಲಿಂಗಾಯಿತರು ಎಷ್ಟು ಸಂತೋಷ ಪಡಬೇಕೊ ಅಷ್ಟು ಸಂತೋಷ ಪಡುತ್ತಿಲ್ಲ ಸಂಭ್ರಮಿಸುತ್ತಿಲ್ಲ ಕಾರಣವೇನೆಂಬುದು ನಮಗೆ ತಿಳಿಯುತ್ತಿಲ್ಲ ಬಸವಣ್ಣನವರನ್ನು ತಮ್ಮ ಬದುಕಿನ ಮಾರ್ಗವಾಗಿಸಿಕೊಂಡವರು. ಬಸವಣ್ಣನವರ ಹೆಸರಿನಲ್ಲಿ ಮಠ ಪೀಠಗಳನ್ನು ಕಟ್ಟಿಕೊಂಡವರು ಸಾವಿರಾರು ಕೋಟಿ ರೂಪಾಯಿ ಆಸ್ತಿಯನ್ನು ಮಾಡಿಕೊಂಡವರು. ಬಸವಭಕ್ತರೆಂದು ಹೇಳಿಕೊಂಡವರು ಇವರೆಲ್ಲ ಏಕೆ ಸುಮ್ಮನಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಇದುವರೆಗೆ ಮೌನ ಮುರಿದು ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ ಮತ್ತು ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತಿಲ್ಲ ಒಂದು ಮಾತ್ರ ಸತ್ಯ ಸಿದ್ದರಾಮಯ್ಯನವರು ವೀರಶೈವ ಲಿಂಗಾಯತರ ಕಪಿಮುಷ್ಠಿಯಿಂದ ಬಸವಣ್ಣನವರನ್ನು ಬಿಡಿಸಿಕೊಂಡು ಹೋಗಿ ಕರ್ನಾಟಕದ ಸಾಂಸ್ಕೃತಿಕ ನಾಯಕನನ್ನಾಗಿ ಮಾಡುವುದರ ಮೂಲಕ ಏಳು ಕೋಟಿ ಕನ್ನಡಿಗರ ಪ್ರಾತಿನಿಧಿಕ ವ್ಯಕ್ತಿಯನ್ನಾಗಿಸಿದ್ದು ಜಾತ್ಯಾತೀತ ಮನೋಭಾವವನ್ನು ತೋರಿಸುತ್ತದೆ ಈಗ ಬಸವ ಜಯಂತಿ ಕೇವಲ ವೀರಶೈವ ಲಿಂಗಾಯಿತರು ಆಚರಿಸುವಂತಿಲ್ಲ ಸಮಸ್ತ ಕನ್ನಡಿಗರು ಜಾತಿ ಮತ ಪಂಥ ಭೇದವಿಲ್ಲದೆ ದೀನ ದಲಿತ ಶೋಷಿತರೆಲ್ಲರೂ ಕೂಡಿ ಬಡವ ಶ್ರೀಮಂತರು ಎಂಬ ಭೇದಭಾವವಿಲ್ಲದೆ ಹೆಣ್ಣು ಮಕ್ಕಳು ಗಂಡು ಮಕ್ಕಳು ಸೇರಿ ಬಸವಣ್ಣನವರ ಜಯಂತಿ ಆಚರಿಸಬೇಕು ಮತ್ತು ಸಾಂಸ್ಕೃತಿಕ ನಾಯಕನನ್ನು ಗೌರವಿಸಬೇಕು ಬಸವಣ್ಣನವರ ಸಾವಿರಾರು ವಚನಗಳಲ್ಲಿ ಕನ್ನಡಿಗರ ಸಂಸ್ಕೃತಿ ಅಡಗಿದೆ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಸರ್ವರಿಗೆ ಸಮಪಾಲು ಸಮ ಬಾಳು ನೀಡುವ ಜಾತಿ ಮತ ಪಂಥಗಳ ಬೇರುಗಳನ್ನು ಕಿತ್ತು ಎಸೆದ ಅನುಭವ ಮಂಟಪದ ಮೂಲಕ ಸಮಾನತೆ ಸಹೋದರತೆ ಸಾರಿದ ಹೆಣ್ಣು ಗಂಡು ಎಂಬ ಭೇದ ಭಾವ ಅಳಿಸಿ ಒಳಗೆ ಸುಳಿವ ಆತ್ಮ ಒಂದೇ ಎಂದು ಹೇಳಿದ ಸಕಲ ಜೀವಾತ್ಮರಿಗೆ ಲೇಸು ಬಯಸಿದ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಎಲ್ಲಿ ಜೀವವಿದಿಯೋ ಅಲ್ಲಿ ದೇವನಿದ್ದಾನೆ ಎಂಬ ಭಾವ ಎನ್ನುವ ಸಮ ಭಾವನೆ ನಾನೊಬ್ಬನೇ ಭಕ್ತ ಜಗದೊಳಗಿನ ಜನಗಳೆಲ ಜಂಗಮ ನೀನೆ ಅಯ್ಯಾ ಕೂಡಲಸಂಗಮದೇವ ಎಂದು ಹೇಳಿದ ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಸ್ಥಾವರ ಕಳಿವುಂಟು ಜಂಗಮಕ್ಕೆ ಅಳಿವಿಲ್ಲ ಎಂಬ ಶಾಶ್ವತ ಸಿದ್ದಾಂತವನ್ನು ಕೊಟ್ಟ ವಿಶ್ವಗುರು ಬಸವಣ್ಣನವರು ಇಂದು ಕರ್ನಾಟಕದ ಸಾಂಸ್ಕೃತಿಕ ನಾಯಕರು ತಮಿಳುನಾಡಿನಲ್ಲಿ ತಿರುವಳುವವರನ್ನು ತಮಿಳುನಾಡಿನ ಸಾಂಸ್ಕೃತಿಕ ನಾಯಕ ಎಂದು ತಮಿಳುನಾಡಿನ ಸರಕಾರ ಘೋಷಿಸಿದೆ ತಿರುವಳುವವರಿಗೆ ಯಾವ ಸ್ಥಾನಮಾನ ಗೌರವವನ್ನು ನೀಡಿ ಅವರ ಸಾಹಿತ್ಯ ಸಂಸ್ಕೃತಿ ಅರಿವು ಆಚಾರಗಳನ್ನು ಪ್ರಚಾರ ಮಾಡಿದ್ದಾರೆ ಅದೇ ಮಾದರಿಯಲ್ಲಿ ವಿಶ್ವಗುರು ಬಸವಣ್ಣನವರ ವಿಚಾರಗಳನ್ನು ಪ್ರಚಾರ ಮಾಡುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಬೇಕು ಅದನ್ನು ಬಿಟ್ಟು ಕೇವಲ ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟದಲ್ಲಿ ಕೇವಲ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸುವುದರ ಮೂಲಕ ಲಿಂಗಾಯತ ಸಮುದಾಯವನ್ನು ಒಲಿಸಿ ಓಲೈಸುವ. ಪ್ರಯತ್ನ ಮಾಡಬಾರದು ಇದು ಮುಂಬರುವ ಲೋಕಸಭಾ ಚುನಾವಣೆಯ ಗಿಮಿಕ್ ಆಗಬಾರದು ಜನಾಂಗೀಕ ಕಳಕಳಿ ಸಾಂಸ್ಕೃತಿಕ ಚಿಂತನ ಹಾಗೂ ಬಸವ ಧರ್ಮ ತತ್ವ ಸಿದ್ಧಾಂತಗಳನ್ನು ಎಲ್ಲರಿಗೂ ಮುಟ್ಟಿಸುವ ವಿಚಾರ ಕರ್ನಾಟಕ ಸರ್ಕಾರ ಮಾಡಬೇಕು ಈಗ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ್ದು ಬಸವ ಅಭಿಮಾನಿಗಳಿಗೆ ಸಂತೋಷವನ್ನುಂಟು ಮಾಡಿದೆ ನಿಜ ಆದರೆ ಅದಕ್ಕಿರುವ ಸೌಲಭ್ಯ ಸೌಲತ್ತುಗಳನ್ನು ಬಿಡುಗಡೆ ಮಾಡಬೇಕು ಇದಕ್ಕೆ ಒಂದು ತಜ್ಞರ ಸಮಿತಿ ರಚಿಸಿ ಬಸವಣ್ಣನವರ ಕುರುಹುಗಳು ಮತ್ತು ಅವರ ಕಾರ್ಯಕ್ಷೇತ್ರಗಳು ಅವರು ರಚಿಸಿದ ಸಾಹಿತ್ಯ ಅವರು ನಿರ್ಮಿಸಿದ ಅನುಭವ ಮಂಟಪದ ಪರಿಕಲ್ಪನೆ ಕನ್ನಡಿಗರಿಗೆ ತಿಳಿ ಹೇಳಬೇಕು ಆ ದಿಸೆಯಲ್ಲಿ ನಿರಂತರವಾದ ಪ್ರಯತ್ನ ಮುಂದುವರಿಯುತ್ತಿರಬೇಕು ಅಂದಾಗ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಅರ್ಥಪೂರ್ಣವಾಗುತ್ತದೆ ಇಲ್ಲದಿದ್ದರೆ ಅದು ಘೋಷಣಾ ವಾಕ್ಯವಾಗಿ ಕೇವಲ ವೀರಶೈವ ಲಿಂಗಾಯತರಿಗೆ ಮತ್ತು ಬಸವ ಅಭಿಮಾನಿಗಳ ತುಟಿಗೆ ತುಪ್ಪ ಸವರುವ ಕೆಲಸ ನಡೆದಂತಾಗುತ್ತದೆ ಈ ದಿಸೆಯಲ್ಲಿ ಮುಖ್ಯಮಂತ್ರಿಗಳು ಚಿಂತನೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಅಲ್ಲದೆ ಕಾಂಗ್ಸಸೇತರೆರ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಬಸವ ಅಭಿಮಾನಿಗಳು ಬಸವ ಭಕ್ತರು ರಾಮ ಜನ್ಮ ಭೂಮಿ ನಿರ್ಮಾಣ ಮತ್ತು ಪ್ರಾಣ ಪ್ರತಿಷ್ಠಾಪನೆಗೆ ಮುಂದಾಗಿ ಮಂಗಳ ಕಾರ್ಯಗಳನ್ನು ಏರ್ಪಡಿಸುವುದರ ಮೂಲಕ ಹಿಂದುಗಳು ಸಮಸ್ತ ಲೋಕಕ್ಕೆ ಸನ್ಮಂಗಲವನ್ನುಂಟು ಮಾಡುವ ದೀಪ ಬೆಳಗಿಸುವ ಕಾರ್ಯಕ್ರಮಗಳು ನಡೆಸಿದಂತೆ ಕರ್ನಾಟಕದ ಎಲ್ಲ ಬಸವಾಭಿಮಾನಿಗಳ ಮನೆಯಲ್ಲಿ ದೀಪ ಹಚ್ಚಿ ಗಂಟೆ ಜಾಗಟೆಗಳನ್ನು ಬಾರಿಸಿ ನಗಾರಿ ನೌಬತ್ತುಗಳನ್ನು ನುಡಿಸಿ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಕರ್ನಾಟಕ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು ಹೆಚ್ಚಾಗಿ ಬಸವಣ್ಣನವರ ಹೆಸರಿನಲ್ಲಿ ಬಾಳಿ ಬದುಕುತ್ತಿರುವ ಕರ್ನಾಟಕದ ಎಲ್ಲಾ ಮಠಪೀಠಗಳು ಸಂಘ ಸಂಸ್ಥೆಗಳು ಪುರಾಣ ಕೀರ್ತನಾಕಾರರು ಮತ್ತು ಪ್ರವಚನಕಾರರು ಎಲ್ಲರೂ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬೃಹತ್ ಆದ ಮತ್ತು ಮಹತ್ತಾದ ಒಂದು ಅಭಿನಂದನಾ ಸಮಾರಂಭವನ್ನು ಏರ್ಪಡಿಸಬೇಕು ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕೂಡಲಸಂಗಮ ಮತ್ತು ಬಸವಕಲ್ಯಾಣದಲ್ಲಿ ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಮಗ್ರ ವಚನ ಸಂಪುಟಗಳನ್ನು ಪ್ರಕಟಿಸಿದ ಮತ್ತು ಸರಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅಳವಡಿಸುವ ಮಹತ್ವದ ಆದೇಶವನ್ನು ನೀಡಿದ ಕರ್ನಾಟಕ ಸರಕಾರಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸುವುದರ ಮೂಲಕ ಸಿದ್ದರಾಮಯ್ಯನವರಿಗೆ ಗೌರವಿಸಬೇಕು ದುರ್ದೈವದ ಸಂಗತಿ ಎಂದರೆ ಈ ಘೋಷಣೆ ನಮಗೆ ಸಂಬಂಧವಿಲ್ವವೆಂಬತ್ತೆ ಕರ್ನಾಟಕದ ಬಸವಾಭಿಮಾನಿಗಳು ಮೌನವಾಗಿ ಕುಳಿತಿರುವದರ ಹಿಂದೆ ಯಾವ ಸದುದ್ದೇಶವಿದೆ ಎಂಬುದು ಅರ್ಥವಾಗುತ್ತಿಲ್ಲ ಅದಕ್ಕಾಗಿ ನಾನು ವಿಷಾದಿಸುತ್ತೇನೆ ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಕಾರ್ಯಪ್ರವೃತ್ತರಾಗಿ ಕಾಂಗ್ರೆಸ್ ಸರ್ಕಾರವನ್ನು ಸಿದ್ದರಾಮಯ್ಯನವರನ್ನು ಅಭಿನಂದಿಸಲೇಬೇಕು ಅಂದಾಗ ಬಸವಣ್ಣನವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂಬುದು ನನ್ನ ಭಾವನೆಯಾಗಿದೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿತ್ತಕರು ಕಲ್ಬುರ್ಗಿ



