ಜಗದೀಶ ಶೆಟ್ರು ಮರಳಿ ಗೂಡಿಗೆ ಬಂದಿದ್ದು…ಜಗದೀಶ ಶೆಟ್ರು ರಿಟರ್ನ ಟು ಪೆವೆಲಿಯನ್

ಜಗದೀಶ ಶೆಟ್ರು ಮರಳಿ ಗೂಡಿಗೆ ಬಂದಿದ್ದು…
ಜಗದೀಶ ಶೆಟ್ರು ರಿಟರ್ನ ಟು ಪೆವೆಲಿಯನ್
ಶೆಟ್ರು ಬಿ.ಜೆ.ಪಿ.ಯಿಂದ ಎಲ್ಲಾ ಅಧಿಕಾರವನ್ನೂ ಪಡೆದು ಅನುಭವಿಸಿದರು. ಶ್ರಮ ವಹಿಸಲಿಲ್ಲ. ರಾಜ್ಯಾ ಸುತ್ತಲಿಲ್ಲ. ಜನರ ನಾಡಿ ಮಿಡಿತ ಅರಿಯಲಿಲ್ಲ. ಪಕ್ಷದಲ್ಲಿ ಕಣ್ಮುಚ್ಚಿ ಕುಳಿತೇ ಕಾಲಕಾಲಕ್ಕೆ ಲಡ್ಡು ಲಬಕ್ಕನೇ ಬಾಯಿಗೆ ಹಾಕಿಕೊಂಡವರು. ಒಟ್ಟಿನಲ್ಲಿ ಅದೃಷ್ಟವಂತರೇ ಎನ್ನಬೇಕು. ಬೀದರ ಜಿಲ್ಲೆಯ ಔರಾದ ತಾಲೂಕಿನ ಜಗಬಂಡಿ, ಜಗದಾಳೆ, ಎಂಬ ಊರಿನ ಹೆಸರು ಇವರು ಪುಸ್ತಕದಲ್ಲಿಯೂ ಓದಿರಲಿಕ್ಕಿಲ್ಲ. ಅದರಂತೆ ಚಾಮರಾಜನಗರದ ಕಟ್ಟ ಕಡೆಯ ಹಳ್ಳಿಯ ಹೆಸರೂ ಇವರಿಗೆ ಗೊತ್ತಿಲ್ಲ. ( ಆದರೇ ಅಂಥಹ ಹಳ್ಳಿಗಳಿಗೆ ಸುತ್ತಿದ ರಾಜಕಾರಣಿಗಳು ನಮ್ಮ ನಡುವೆ ಇದ್ದಾರೆ) ಇವರು ಅಂತಹ ಯಾವ ಶ್ರಮಪಡಲಿಲ್ಲ. ತಾವಾಯಿತು ಬೆಂಗಳೂರು ಮತ್ತು ತಮ್ಮ ಹುಬ್ಬಳ್ಳಿ ಅಷ್ಟೇ ಅವರ ಜಗತ್ತು. ಇವರ ೧೦ ತಿಂಗಳ ಕಾಂಗೈ ಹನಿಮೂನ ಯಾಕೆ ಮುರಿದು ಬಿತ್ತು ಎಂದರೇ, ಕಾಂಗೈನಿAದ ಎಮ್.ಎಲ್.ಸಿ. ಎಮ್.ಎಲ್.ಸಿ.ಏನೋ ಆದರು. ಆದರೇ ಸಚಿವ ಸ್ಥಾನ ಸಿಗಲಿಲ್ಲ ಮನಸ್ಸು ಛಳ್ ಎಂದಿರಬೇಕು. ಪ್ರತಿಭಟಿಸುವ ಹಾಗೂ ಇಲ್ಲ. ಯಾಕೆಂದರೇ ತಮ್ಮ ಅಧಿಕಾರದ ಹಪಾಪಿತನ ಹೊರಜಗತ್ತಿಗೆ ಗೊತ್ತಾಗಬಾರದು ಎಂದು ಜಾಣ ಕುರುಡುತನದಿಂದ ಚಡಪಡಿಸಲಾರಂಭಿಸಿದರು.
ಅಲ್ಲದೇ ಶೆಟ್ರು ಜನ್ಮತಃ ಆರ್.ಎಸ್.ಎಸ್.ನಿಂದ ಬೆಳೆದು ಬಂದವರು, ಗುರುತಿಸಿಕೊಂಡವರು. ಚೂರು ಶಿಸ್ತಿನ ಸಿಪಾಯಿ, ಸುಸಂಸ್ಕೃತರು,. ಬಿ.ಜೆ.ಪಿ.ಪಕ್ಷಕ್ಕೆ ಬಯ್ಯಲು ಅವರಲ್ಲಿ ವಿಷಯವಿಲ್ಲದೇ ಒದ್ದಾಡುತ್ತಿದ್ದರು. ಬಿ.ಜೆ.ಪಿ ಪಕ್ಷವನ್ನು ತೆಗಳಲು ಶಬ್ದಗಳಿಗಾಗಿ ತಡಕಾಡುವಂಥ ಪರಿಸ್ಥಿತಿ ತಂದು ಕೊಂಡರು. ಇವರೇನಾದ್ರೂ ಬಿ.ಜೆ.ಪಿ. ವಿರುದ್ಧ ಸ್ಟೇಟ್ಮೆಂಟ್ ಕೊಟ್ಟ ಮರುಗಳಿಗೆಯಲ್ಲಿಯೇ “ ಆವಾಗ ನೀವು ಅದೇ ಪಕ್ಷದಲ್ಲಿಯೇ ಇದ್ದಿರಲ್ಲಾ. ಆಗ ಯಾಕೆ ಪ್ರತಿಭಟಿಸಲಿಲ್ಲ. ಆಗ ಯಾಕೆ ಹೇಳಲಿಲ್ಲ. ಆಗ ಯಾಕೆ ಬಾಯ್ಮುಚ್ಚಿಕೊಂಡಿದ್ದಿರಿ ’’ ಎಂದು ಮುಖಕ್ಕೆ ರಪ್ಪ್ ಎಂದು ಹೊಡೆದಂತೆ ಬಿ.ಜೆ.ಪಿ.ಯ ಹಲವಾರು ನಾಯಕರು ಮುಗಿಬೀಳುತ್ತಿದ್ದರು. ಸಾಮಾಜಿಕ ಜಾಲ ತಾಣದಲ್ಲಿ ಇವರ ಜನ್ಮ ಜಾಲಾಡುತ್ತಿದ್ದರು. ವಿಶೇಷವಾಗಿ ಬಿ,.ಜೆ.ಪಿ. ಜಾಲತಾಣ ವಾಚಾಮಗೋಚರವಾಗಿ ಹೀಗಳೆಯುತ್ತಿತ್ತು.
ಎರಡನೇಯದಾಗಿ ಕಾಂಗೈ ಪಕ್ಷಕ್ಕೆ ಹೊಗಳುವಂಥಹ ಯಾವುದೇ ವಿಷಯ ಇವರಲ್ಲಿ ಇಲ್ಲದ ಕಾರಣಕ್ಕೆ ಮತ್ತು ಹೊಗಳು ಭಟ್ಟಂಗಿತನ, ಬಕೇಟ್ ಹಿಡಿಯುವ ಜಾಯಮಾನದವರಲ್ಲ. ಇವರಿಗೆ ರಾಜಕೀಯ ಗಿಮಿಕ್ ಮಾಡಲು ಬಾರದ ಕಾರಣ ಕಾಂಗೈನಲ್ಲಿ ೦ ಆದರು. ಹಾಗೂ ೧೦೦ ಸುಳ್ಳುಗಳನ್ನು ಹೌದೌದು ಎನ್ನುವಂತೆ ಹೇಳಿ ಜನರನ್ನು ತನ್ನೆಡೆ ಸೆಳೆಯುವಂಥಹ ಚಾಕುಚಾಕ್ಯತೆ, ಕಲೆ ಇವರಿಗೆ ಬಾರದು. ನಾಚಿಕೆ ಮಾನ ಮರ್ಯಾದೆ ಇಲ್ಲದೇ ಲಜ್ಜೇಗೇಡಿತನದಿಂದ ವರ್ತಿಸುವದು ಇವರಿಂದ ಆಗದ ಕಾರಣ ಇವರ ಪರಿಸ್ಥಿತಿ ಅಡಕೊತ್ತಿನಲ್ಲಿ ಸಿಕ್ಕಂಥಾಗಿತ್ತು . ಅನ್ನುವಂತಿಲ್ಲ, ಅನುಭವಿಸುವಂತಿಲ್ಲ ಎಂಬ ಸಂದಿಗ್ದಲ್ಲಿ ಸಿಲುಕಿಕೊಂಡಿದ್ದರು. ಕಾಂಗೈ ಪಕ್ಷ ಇವರಿಗೆ ಹೊಸದು, ಹೊಸ ಜನ, ಹೊಸತಾಗಿ ಹೊಸ ಮನೆಗೆ ಬಂದು ಮುಗ್ದನಂತೆ ಕೂರಲೂ ಆಗದೇ, ಯಜಮಾನಿಕೆ ನಡೆಸಲೂ ಅವಕಾಶಗಳು ಸಿಕ್ಕದೇ ಇದ್ದುದ್ದರಿಂದ ಒಳಗೊಳಗೇ ಚಡಪಡಿಸಲಾರಂಭಿಸಿದರು. ಅಧಿಕಾರದ ದಾಹ ಬೇರೆ ಉಕ್ಕುತ್ತಿದೆ.
ಮೂರನೇಯದಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿಯಿಂದ ಟಿಕೇಟ್ ನಿರಾಕರಿಸಿದಾಗಲೇ ಪಕ್ಷದಲ್ಲಿ ತಮ್ಮ ಸ್ಥಾನಮಾನವೇನು? ಪಕ್ಷಕ್ಕೆ ತಮ್ಮ ಕೊಡುಗೆ ಏನು? ಎಂದು ತಿಳಿದುಕೊಳ್ಳಬೇಕಾಗಿತ್ತು. ಆದರೇ ಅವರು ತಾನೊಬ್ಬ ಜನಪ್ರೀಯ ನಾಯಕ ಎಂಬ ಭ್ರಮೆಯಲ್ಲಿದ್ದರು. ನಿಜವಾಗಿ ಇವರಿಗೆ ಕಳೆದ ಬಾರಿಯ ಚುನಾವಣೆಯಲ್ಲಿ ಟಿಕೇಟ್ ನಿರಾಕರಿಸಲು ಕಾರಣ ಇವರು ಪ್ರತಿನಿಧಿಸುವ ಕ್ಷೇತ್ರದಲ್ಲಿ ಇವರ ಜನಪ್ರೀಯತೆ ಕುಗ್ಗಿದೆ. ಈ ಬಾರಿ ಇವರು ಆಯ್ಕೆಯಾಗಲಾರರು ಎಂಬ ಸರ್ವೇ ರಿಪೋರ್ಟಗಳ ಕಾರಣಕ್ಕೆ ಹೊಸ ಮುಖಕ್ಕೆ ಟಿಕೇಟ್ ಕೊಡಲು ಪಕ್ಷ ಬಯಸಿದ್ದ ಕಾರಣ ಇವರಿಗೆ ಟಿಕೇಟ್ ನಿರಾಕರಿಸಲಾಗಿತ್ತು ಎನ್ನುತ್ತಾರೆ.
ಮೊದಲೇ ಹೇಳಿದಂತೆ ಟಿಕೇಟ್ ನಿರಾಕರಿಸಿದಾಗ ಇವರ ಸ್ವಾಭೀಮಾನಕ್ಕೆ ಪೆಟ್ಟು ಬಿದ್ದಂತಾಯಿತು. ಕಾಂಗೈ ಪಕ್ಷಕ್ಕೆ ಸಿಕ್ಕ ಈ ಅವಕಾಶವನ್ನು ಕಾಂಗೈನವರು ಚೆನ್ನಾಗಿಯೇ ಉಪಯೋಗಿಸಿಕೊಳ್ಳಲು ಹವಣಿಸಿ, ಜಗದೀಶ ಶೆಟ್ಟುç ಲಿಂಗಾಯತ್ ಜನಾಂಗದ ಮಹಾನ ನಾಯಕರು,. ಬಿ.ಜೆ.ಪಿ. ಇವರನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿಲ್ಲ. ಅಪ್ರತಿಮ ಹೋರಾಟಗಾರರು, ಪಕ್ಷವನ್ನು ತಳಮಟ್ಟದಿಂದ ಬೆಳೆಸಿದ ವ್ಯಕ್ತಿಗೆ ಆಗಿರುವುದು ದೊಡ್ಡ ಅವಮಾನ, ನಮ್ಮ ಪಕ್ಷಕ್ಕೆ ಬಂದರೇ ಅವರನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂಡ್ರಿಸಿ ಮೆರವಣಿಗೆ ಮಾಡುತ್ತೇವೆ. ಲಾಲಬಾಗನಲ್ಲಿರುವ ಅಷ್ಟೂ ಹೂಗಳೊಂದಿಗೆ ಅಲಂಕರಿಸುತ್ತೇವೆ ( ಹೂ ಕಡಿಮೆ ಅನ್ನಿಸಿದರೇ ಬೇರೆ ರಾಜ್ಯಗಳಿಂದ ಇಲ್ಲವೇ ಬೇರೆ ದೇಶದಿಂದಲೂ ತರಿಸುತ್ತೆವೆ) ಧೂಪ-ದೀಪಗಳಿಂದ ಸುಗಂಧ ದ್ರವ್ಯಗಳಿಂದ ಸಿಂಗರಿಸುತ್ತೆವೆ ಎಂದು ಬಹುಪರಾಕಿಗೆ ಹೆಸರಾಗಿರುವ ಕಾಂಗೈನ ಜನ ತಮ್ಮ ದಾಟಿಯಲ್ಲಿಯೇ ಇವರನ್ನು ಹೊಗಳುತ್ತಾ, ಮದ್ಯೆ ಮದ್ಯೆ ಅಯ್ಯೋ
ಶೆಟ್ಟಿçಗೆ ಹೀಗಾಗಬಾರದಿತ್ತು, ನಮ್ಮಿಂದ ನೋಡಲಾಗುತ್ತಿಲ್ಲ, ನಮ್ಮಿಂದ ಸಹಿಸಲಾಗುತ್ತಿಲ್ಲ ಎಂದು ಶೆಟ್ಟೆçà ನಾಚುವಂತೆ ಅಂಬೋ ಎಂದು ಅಳಲಾರಂಭಿಸಿದರು. ಶೆಟ್ಟç ಬೀಗರಾಗಿರುವ ದಾವಣಗೇರೆಯ ವಯೋವೃದ್ಧರಿಂದ ಒತ್ತಡ ತಂದು ಹುಬ್ಬಳ್ಳಿಯಿಂದ ವಿಶೇಷ ವಿಮಾನದಲ್ಲಿ ಎತ್ತಾಕಿಕೊಂಡು ಬಂದು ಪಕ್ಷಕ್ಕೆ ಸೇರಿಸಿಕೊಂಡರು.
ಲಿಂಗಾಯತ್ ಜನಾಂಗಕ್ಕೆ ಪ್ರಾತಿನಿಧ್ಯವಿಲ್ಲ. ಲಿಂಗಾಯತ್ ನಾಯಕರನ್ನು ಅವಮಾನಿಸುತ್ತಾರೆ. ಅವರನ್ನು ಸರಿಯಾಗಿ ನಡೆಯಿಸಿಕೊಳ್ಳುವುದಿಲ್ಲ. ಎಂಬ ಅಪವಾದಕ್ಕೆ ಗುರಿಯಾಗಿದ್ದ ಕಾಂಗೈ ಪಕ್ಷಕ್ಕೆ ಇದ್ದ ಅಪವಾದವನ್ನು ಈ ವೇಳೆಯಲ್ಲಿ ಚೆನ್ನಾಗಿ ಎನ್ಕ್ಯಾಶ್ ಮಾಡಿಕೊಳ್ಳುವ ಕೆಲಸವನ್ನು ಕಾಂಗೈ ನೀಟಾಗಿ ಮಾಡಿತು.
ಸರಿ ಶೆಟ್ಟುç ಕಾಂಗೈಗೆ ಬಂದರು ತಮ್ಮ ಹಳೆಯ ಕ್ಷೇತ್ರದಲ್ಲಿಯೇ ಕಾಂಗೈ ಪಕ್ಷದ ಟಿಕೇಟ್ನಿಂದ ಸ್ಪರ್ಧಿಸಿದರು. ಆಗಲೂ ಅವರಿಗೆ ಅರಿವಿಗೆ ಬಾರದ ವಿಷಯವೆಂದರೇ ೩ ದಶಕಗಳಿಂದ ವಿರೋಧಿಸುತ್ತಲೇ ಬಂದಿದ್ದ ಮುಸ್ಲೀಮ್ ಜನಾಂಗ ಇವರೊಂದಿಗೆ ಸೇರಿಕೊಳ್ಳಲು, ಇವರೊಂದಿಗೆ ಓಡಾಡಲು ಮುಜುಗರವಾಗಲಾರಂಭಿಸಿತು. ಶತಾಯ-ಗತಾಯ ಬಿ.ಜೆ.ಪಿ ಎಂದರೇ ಉರಿದುಬಿಳುತ್ತಿದ್ದ ಮುಸ್ಲೀಮ್ ಜನಾಂಗದ ವಿಶ್ವಾಸ ಗಳಿಸಲು ಶೆಟ್ಟುç ವಿಫಲರಾದರು ಮತ್ತು ಚುನಾವಣೆಯಲ್ಲಿ ಮಖಾಡೆ ಮಲಗಿಸಲು ಅವೆರೂ ಕಾರಣರಾದರು.
ಶೆಟ್ಟಿçÃಗೆ ಈಗ ಜ್ಞಾನೋದಯವಾಗಿದೆ. ೩ ದಶಕಗಳಿಂದ ಕಾಪಾಡಿಕೊಂಡು ಬಂದಿದ್ದ ಅಪ್ಪಟ ಬಿ.ಜೆ.ಪಿ ಕ್ಷೇತ್ರವಿದು. ಕಾಂಗೈನಿAದ ಸ್ಪರ್ಧಿಸಿದರೇ ಮುಸ್ಲೀಮರ ಓಟು ಪಡೆಯಲು ಆಗದ ಮಾತು. ಜನ್ಮ ಜನ್ಮಕ್ಕೂ ಗೆಲ್ಲುವುದಿಲ್ಲ. ರಾಜಕೀಯ ಜೀವನ ಅಯೋಮಯವಾಗುತ್ತದೆ ಎಂದು ಅರಿತ್ತಿದ್ದಾರೆ. ಸಾಕಿನ್ನು ರಾಜ್ಯ ರಾಜಕಾರಣ ಮುಂದೆ ಲೋಕಸಭೆಯಲ್ಲಿ ಅದೃಷ್ಟ ಪರೀಕ್ಷೇ ಮಾಡಲು ಯೋಚಿಸಲಾರಂಭಿಸಿದರು. ಲೋಕಸಭೆ ಚುನಾವಣೆಗೆ ಕಾಂಗೈನಿAದ ಸ್ಪರ್ಧಿಸಿದರೇ ಹಿಂದೆ ಆಗಿರುವ ಗತಿಯೇ ಆಗುತ್ತದೆ ಎಂದು ಭಯವಿದೆ. ಮತ್ತೇ ಬಿ.ಜೆ.ಪಿಯ ಕಡೆಗೆ ವಾಲಿದರು. ಅಲ್ಲಲ್ಲಿ ತಮ್ಮ ತಪ್ಪಿನ ಅರಿವಿನ ಬಗ್ಗೆ ಮಾತಾಡಿಕೊಳ್ಳಲಾರಂಭಿಸಿದರು. ಸುದ್ಧಿ ಕೇಳಿಸಿಕೊಂಡ ಬಿ.ಜೆ.ಪಿಗೂ ಇದೇ ಬೇಕಾಗಿತ್ತು. ಬಿ.ಜೆ.ಪಿಯವರು ತಡಮಾಡದೇ ಲಬಕ್ಕನೇ ಶೆಟ್ಟçನ್ನು ಎತ್ತಾಕಿಕೊಂಡರು. ಶೆಟ್ಟೂç ರೆಟರ್ನ ಟು ಪೆವಿಲಿಯನ್ ಆಗಿದೆ.
ಮುಂದೇ? ಲೋಕಸಭೆಗೆ ಧಾರವಾಡ ಕ್ಷೇತ್ರದಿಂದಾಗಲೀ ಬೆಳಗಾಂ ಕ್ಷೇತ್ರದಿಂದಾಗಲೀ ಸ್ಪರ್ಧಿಸುವುದು. ಅಲ್ಲಿಯೂ ಅದೃಷ್ಟ ಕೈಕೊಟ್ಟರೇ ಮುಂದೆ ಬರುವ ತಾಲ್ಲೂಕು ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ಎಲೆಕ್ಷನ್ ಇದ್ದೇ ಇದೆಯಲ್ಲ?



