ಸಂಪಾದಕೀಯ

ಶ್ರದ್ಧಾ ಭಕ್ತಿಯಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ….ಕನಕಗಿರಿ.

ಶ್ರದ್ಧಾ ಭಕ್ತಿಯಿಂದ ಸವಿತಾ ಮಹರ್ಷಿ ಜಯಂತಿ ಆಚರಣೆ

ಕನಕಗಿರಿ ಪಟ್ಟಣದ ತಹಶೀಲ್ ಕಾರ್ಯಾಲಯದಲ್ಲಿ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವನಾಥ್ ಮುರುಡಿ ಅವರ ನೇತೃತ್ವದಲ್ಲಿ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ತಹಶೀಲ್ದಾರ್ ವಿಶ್ವನಾಥ್ ಮುರುಡಿ ಸವಿತಾ ಮಹರ್ಷಿ ಅವರು ಜನನ ಶಿವನ ಬಲಗಣ್ಣಿನಿಂದ ಜನಿಸಿದವನೇ ಸವಿತಾ ಮಹರ್ಷಿ ಎಂದು ಪ್ರತಿತಿಯಿದೆ ಸವಿತಾ ಸಮಾಜದವರನ್ನು ಸೂರ್ಯ ವಂಶಕ್ಕೆ ಸೇರಿದವರೆಂದು ಹೆಮ್ಮೆಯಿಂದ ಹೇಳಬಹುದು ಎಂದರು. ಅಪಾರ ಜ್ಞಾನಭಂಡಾರ ಹೊಂದಿದ ಸವಿತಾ ಮಹರ್ಷಿಗಳು ನಾಲ್ಕನೇ ವೇದವಾದ ಸಾಮವೇದ ಕೃತಿ ರಚಿಸಿದ್ದಾರೆ. ಇವರ ಮಗಳಾದ ಗಾಯತ್ರಿದೇವಿಯು ಶ್ರೇಷ್ಠಮಂತ್ರವಾದ ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ ಯಂದರು ಮಹಾತ್ಮರ ಜಯಂತಿಗಳು ಆಚರಣೆಗೆ ಸೀಮಿತವಾಗಬಾರದು. ದಿನನಿತ್ಯದ ವ್ಯವಹಾರದಲ್ಲಿ ಮಾರ್ಗದರ್ಶಕವಾಗಬೇಕು. ಅವರು ನಡೆದ ದಾರಿ, ನುಡಿದ ಮಾತು ನಮಗೆ ಮಾದರಿ ಆಗಬೇಕು’ ಎಂದರು.

ಈ ವೇಳೆ ತಹಶೀಲ್ದಾರರು ವಿಶ್ವನಾಥ ಮುರುಡಿ, ಗ್ರೇಡ್ 2 ತಹಶೀಲ್ದಾರರು ಶ್ರೀ ವಿ.ಎಚ್.ಹೋರಪೇಟಿ, ಸಿಬ್ಬಂದಿಗಳಾದ ಮುತ್ತಣ್ಣ ಗೌಂಡಿ, ಗುರುಲಿಂಗಯ್ಯ ಪೂಜಾರಿ, ಸಂಗಮೇಶ, ಶಿವರಾಜ ಗ್ರಾ.ಆ.ಅ ಕನಕಗಿರಿ, ಗಡ್ಡಿ ಕುಮಾರ ಗ್ರಾ.ಆ.ಅ ಮುಸಲಾಪುರ ಕನಕಗಿರಿ ತಾಲೂಕು ಅಧ್ಯಕ್ಷರು ಶಂಕ್ರಪ್ಪ
ತಾಲೂಕು ಉಪಾಧ್ಯಕ್ಷರು ನಾರಾಯಣಪ್ಪ ಹಾಗೂ ಸಾಮಾಜದ ಗುರು ಹಿರಿಯರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ

Related Articles

Leave a Reply

Your email address will not be published. Required fields are marked *

Back to top button