ಸಂಪಾದಕೀಯ

ನಗರ ಕಲಿಕಾ, ಪ್ರಾಯೋಗಿಕ ತರಬೇತಿ: ಅರ್ಜಿ ಆಹ್ವಾನ. ಕನಕಗಿರಿ

ನಗರ ಕಲಿಕಾ, ಪ್ರಾಯೋಗಿಕ ತರಬೇತಿ: ಅರ್ಜಿ ಆಹ್ವಾನ

ಕನಕಗಿರಿ ಪ.ಪಂ ವ್ಯಾಪ್ತಿಯಲ್ಲಿ ಡೇ ನಲ್ಮ್ ಅಭಿಯಾನ ಮತ್ತು ಪಿ.ಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಕಲಿಕಾ ಮತ್ತು ಪ್ರಾಯೋಗಿಕ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕಲಿಕಾ ಮತ್ತು ಪ್ರಾಯೋಗಿಕ (ಟಿ.ಯು.ಎಲ್.ಐ.ಪಿ – ದ ಅರ್ಬನ್ ಲರ್ನಿಂಗ್ ಇಂಟರ್ನ್ಶಿಪ್ ಪ್ರೋಗ್ರಾಂ) ತರಬೇತಿ ಕಾರ್ಯಕ್ರಮವನ್ನು 2023-24ನೇ ಸಾಲಿಗೆ ಅನುಷ್ಠಾನಗೊಳಿಸಲು ಸರಕಾರದಿಂದ ಗುರಿಗಳನ್ನು ನಿಗದಿ ಪಡಿಸಲಾಗಿದ್ದು, ಬೀದಿ ಬದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡುವುದು, ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಿ ಕೊಡುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿದೆ.
ಪಟ್ಟಣ ಪಂಚಾಯತ್ ವ್ಯಾಪ್ತಿಯ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗಳೊಂದಿಗೆ ಫೆ.22 ರೊಳಗಾಗಿ ಸರ್ಕಾರದ ವೆಬ್‌ಸೈಟ್ Ministry of Housing and Urban Affairs ನಲ್ಲ್ಲಿ https://internship.aicte-india.org/module_ulb/Dashboard/TulipMain/ ರ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ಅರ್ಜಿ ಸಲ್ಲಿಸುವಂತೆ ಕನಕಗಿರಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button