ಸುದ್ಧಿ

ದೇವಪುರ ಗ್ರಾಮದಲ್ಲಿ ನೀರಿಗಾಗಿ ಆಹಾಕಾರ.. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ. ದೇವಪುರ ಗ್ರಾಮ.

ದೇವಪುರ ಗ್ರಾಮದಲ್ಲಿ ನೀರಿಗಾಗಿ ಆಹಾಕಾರ.. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ.

ಜಂಗ್ಲೀ ರಾಜ್ಯದಲ್ಲಿಯ ಜನರನ್ನು ಆ ದೇವರೇ ಕಾಪಾಡಬೇಕು.

ರಾಜಕಾರಣಿಗಳ ತೇವಲಿಗಾಗಿ ” ಕಡತಗಳಲ್ಲಿ ಕಲ್ಯಾಣ ಕರ್ನಾಟಕ ” ಎಂಬ ಹಣೆಪಟ್ಟಿ ಕಟ್ಟಿ ಅಕ್ಷರಶಃ ಈ ಪ್ರದೇಶ ಜಂಗ್ಲಿ ರಾಜ್ಯವನ್ನಾಗಿಸಿದ್ದಾರೆ.

ತಾಲೂಕಿನಿಂದ ಬರೀ ೯ ಕಿ.ಮೀ.ದೂರವಿರುವ ಹಾಗೂ ರಾಜ್ಯಾ ಹೆದ್ದಾರಿ ಪಕ್ಕದಲ್ಲಿರುವ ೩ ಜಿಲ್ಲೆಗಳನ್ನು ಬೆಸೆಯುವ ರಸ್ತೆ ಸಂಪರ್ಕ ಹೊಂದಿರುವ ದೇವಪುರ ಗ್ರಾಮವು, ಗ್ರಾಮ ಪಂಚಾಯಿತಿ ಕಾರ್ಯಾಲಯ ಹೊಂದಿದೆ. ಅಧಿಕಾರಿಗಳೂ ಸಹ ಇದ್ದಾರೆ. ಆದರೇ ಗ್ರಾಮದ ಜನರು‌ ಕುಡಿಯುವ ನೀರಿಗಾಗಿ ತತ್ವಾರ ಪಡುವಂತಾಗಿದೆ.

ಬೇರೆ ಪ್ರದೇಶಗಳಲ್ಲಿ ನೀರಿನ ಕೊರತೆಯ ಬೇರೆ ಬೇರೆ ರೀತಿಯ ಸಮಸ್ಯೆಗಳಿದ್ದರೆ, ದೇವಪುರ ಗ್ರಾಮದಲ್ಲಿ ನೀರಿನ ಮೂಲ ಚೆನ್ನಾಗಿದೆ. ವಿದ್ಯುತ್ ಸಮಸ್ಯೆ ಇಲ್ಲವೇ ಇಲ್ಲ. ಎಲ್ಲವೂ ಚೆನ್ನಾಗಿಯೇ ಇದೆ. ಆದರೇ ಗ್ರಾಮ‌ ಪಂಚಾಯಿತಿ ಕಾರ್ಯಾಲಯದ ಸಿಬ್ಬಂದ್ಧಿಗಳಿಗೆ ಹಲವಾರು ತಿಂಗಳಿನಿಂದ ಸಂಬಳ ಕೊಡದೇ ಇರುವುದರಿಂದ ಸಿಬ್ಬಂಧಿಗಳು ಜೀವನ ನಿರ್ವಹಣೆಗೆ ದುಡ್ಡಿಲ್ಲದೇ ಸಾಯುವಂತಾಗಿದೆ.

ದೇವಪುರ ಗ್ರಾಮದಲ್ಲಿ, ಕರೆಂಟು ಇದೆ, ನೀರು ಇದೆ ಆದರೆ ನೀರು ಬೀಡುವ ಆಪರೇಟರ್ಗಳಿಗೆ ಸರಿಯಾಗಿ ಸಂಬಳ ಕೊಡದ ಕಾರಣ ಸಮಯಕ್ಕೆ ಸರಿಯಾಗಿ ನೀರು ಬಿಡದ ಕಾರಣಕ್ಕೆ ಬಿರು ಬಿಸಿಲಿಗೆ ಜನ ಬೆಂದು ಹೋಗುತ್ತಿದ್ದಾರೆ. ಬಳಕೆಗೆ ಬೇಡದಿದ್ದರೂ ಕೂಡಿಯಲೂ‌ ಸಹ ನೀರಿಲ್ಲದೇ ಬೇಸಿಗೆಯಲ್ಲಿ ಜನರಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಯಾಕೆ? ಎಂದು ಕೇಳಿದ ನಾಗರೀಕರಿಗೆ ಇಲ್ಲ ಸಲ್ಲದ ನೆಪ ಹೇಳಿ ಜನರ ಕಷ್ಟಕ್ಕೆ ಸ್ಪಂದಿಸುವ ಬದಲು ಚೆಲ್ಲಾಟವಾಡುತ್ತಿದ್ದಾರೆ.

ಮಾನವೀಯತೆ ಇರುವ ಅಧಿಕಾರಿಗಳ ಕೊರತೆ, ನಿರ್ಲಕ್ಷ್ಯ, ಈ‌ ಪ್ರದೇಶದಲ್ಲಿ ಎದ್ದು ಕಾಣುತ್ತಿದೆ.

ಈಗಲಾದರೂ ಮೇಲಾಧಿಕಾರಿಗಳು ಜನರ ನೈಜ ಸಮಸ್ಯೆಗೆ ಸ್ಪಂಧಿಸುತ್ತಾರೆಯೇ? ಸಿಬ್ಬಂಧಿಗಳಿಗೆ ತಿಂಗಳ ಸಂಬಳ ಕೊಡದೇ ಸತಾಯಿಸುತ್ತಿರುವುದ್ಯಾಕೆ? ಸಿಬ್ಬಂದಿಗಳು ಈ ತುಟ್ಟಿ ಕಾಲದಲ್ಲಿ ಸಂಸಾರ ನಡೆಯಿಸುವುದಾದರೂ ಹ್ಯಾಗೆ? ಎಂಬ ಕನಿಷ್ಠ ಸೌಜನ್ಯವೂ ಅಧಿಕಾರಿಗಳಿಗೆ ಇರಬೇಕಲ್ಲವೆ?.

ಸಿಬ್ಬಂಧಿಗಳಿಗೆ ಸಂಬಳ ಕೊಡಿ ಅವರಿಂದ ಸರಿಯಾಗಿ ಕೆಲಸ ತೆಗೆದುಕೊಂಡು ದೇವಪುರ ಗ್ರಾಮ ಅದರಲ್ಲೂ ವಾರ್ಡ್ ನಂ. 3 ಭ್ರಾಹ್ಮಣರ ಓಣಿಯ ನೀರಿನ ಬವಣೆ ನೀಗಿಸುತ್ತಾರೆ ಎಂಬ. ಆಶೆ ಇಟ್ಟುಕೊಂಡಿದ್ದಾರೆ. ಅಧಿಕಾರಿಗಳು‌ ಇನ್ನಾದರೂ ಕಣ್ತೆರೆಯಬಾರದೇ?

” ಪ್ರಜಾಶ್ರೀ ವೆಬ್ ಪತ್ರಿಕೆ ಹಾಗೂ ಪಾಕ್ಷೀಕ ಪತ್ರಿಕೆ ” ಪತ್ರಿಕಾ ಕಾರ್ಯಾಲಯ ಬೆಂಗಳೂರು.

Related Articles

Leave a Reply

Your email address will not be published. Required fields are marked *

Back to top button