ರಾಜಕೀಯ ಹಿನ್ನೆಲೆಯಿಂದ ಬಂದ ರಾಧಾಕೃಷ್ಣ. ಕಲ್ಬುರ್ಗಿ ಲೋಕಸಭಾ ಮತಕ್ಷೇತ್ರ ಅಭ್ಯರ್ಥಿ.

ರಾಜಕೀಯ ಹಿನ್ನೆಲೆಯಿಂದ ಬಂದ ರಾಧಾಕೃಷ್ಣ. ಕಲ್ಬುರ್ಗಿ ಲೋಕಸಭಾ ಮತಕ್ಷೇತ್ರದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಾಧಾಕೃಷ್ಣ ಅವರು ರಾಜಕೀಯ ಮನೆ ತನಗಳ ಹಿನ್ನೆಲೆಯಿಂದ ಬಂದವರು ಅವರ ಮನೆತನದಲ್ಲಿ ರಾಜಕೀಯ ನೀರು ಕುಡಿದಷ್ಟು ಸರಳ ಅವರ ತಂದೆ ರಾಜೇಂದ್ರಪ್ಪ ನವರು ಗುಂಡುಗುರ್ತಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಸಾಲದೆ ಚಿತ್ತಾಪುರ ತಾಲೂಕಿನ ಟಿಡಿಬಿ ಸದಸ್ಯರಾಗಿ ಎರಡು ಅವಧಿಗೆ ಕೆಲಸ ಮಾಡಿದವರು ಜನಪರ ಅಭಿವೃದ್ಧಿ ಪರ ಕೆಲಸ ಮಾಡಿ ರಾಜೇಂದ್ರಪ್ಪನವರು ಚಿತ್ತಾಪುರ ತಾಲೂಕಿನಲ್ಲಿಯೇ ದಲಿತ ಸಮುದಾಯದ ಬಹುದೊಡ್ಡ ನಾಯಕರಾಗಿದ್ದರು ಗುಂಡುಗುರ್ತಿ ಗ್ರಾಮದಲ್ಲಿ ದೊಡ್ಡ ಮನೆ ಕಟ್ಟಿದಾರೆ ಮತ್ತು ಜಮೀನ್ದಾರಿ ಹಾಗೂ ಒಂದು ಖಾನದನ್ ಸಂಸ್ಕೃತಿಯಿಂದ ಬಂದವರು ಗುಂಡು ಗುರ್ತಿ ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತರ ಓಣಿಯಲ್ಲಿಯೇ ಸ್ಥಾಪಿಸಿದ ಕೀರ್ತಿ ಇವರ ಮನೆತನಕ್ಕೆ ಇದೆ ಭಾರತದ ಇತಿಹಾಸದಲ್ಲಿಯೇ ಮೊದಲು ಎನ್ನಬಹುದಾದ ಗುಂಡುಗುರ್ತಿ ಗ್ರಾಮದ ಗ್ರಾಮ ಪಂಚಾಯಿತಿ ದಲಿತರ ಓಣಿಯಲ್ಲಿರುವುದು ಒಂದೇ ಎಂದು ಹೇಳಬೇಕು ಆ ರೀತಿ ಇವರ ಮನೆತನ ರಾಜಕೀಯ ಮಾಡುತ್ತಾ ಬಂದಿದೆ ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಈ ಸಾಧನೆ ಮಾಡುತ್ತಾ ಬಂದಿದ್ದು ನಾವು ಕಾಣುತ್ತೇವೆ ರಾಜೇಂದ್ರಪ್ಪನವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗುತ್ತಾ ಮತ್ತು ಅವರು ಬದುಕಿರುವ ತನಕ ಸದಸ್ಯರಾಗುತ್ತಾ ಬಂದಿದ್ದಾರೆ ಈಗಲೂ ಕೂಡ ಇವರ ಮನೆತನದವರಾಗಬೇಕು ಇಲ್ಲವೇ ಇವರು ಹೇಳಿದವರೇ ಅಧ್ಯಕ್ಷರಾಗಿರುತ್ತಾರೆ. ಇಂಥ ರಾಜಕೀಯ ಮನೆತನದಲ್ಲಿ ಮಾತೋ ಶ್ರೀ ಶಿವಮ್ಮ ಹಾಗೂ ರಾಜೇಂದ್ರಪ್ಪನವರ ಪುಣ್ಯೋದರದಲ್ಲಿ ಜನಿಸಿದ ರಾಧಾಕೃಷ್ಣ ಅವರು ಚಿಕ್ಕವರಿದ್ದಾಗ ಗುಂಡುಗುರ್ತಿಯಲಿ ಬೆಳೆದು ಮುಂದೆ ಬೆಂಗಳೂರಿಗೆ ತೆರಳಿ ಅಲ್ಲಿ ಅಕ್ಕ ರಾಧಾಬಾಯಿ ಅವರ ಮಾರ್ಗದರ್ಶನದಲ್ಲಿ ಮತ್ತು ಮಾವ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಬದುಕು ರೂಪಿಸಿಕೊಂಡವರು ದಾನ ಧರ್ಮ ಪುಣ್ಯಪರೋಪಕಾರಕ್ಕೆ ಹೆಸರಾದ ಮತ್ತು ದೀನ ದಲಿತ ಬಡವರ ಸೇವೆ ಮಾಡುವ ಇವರ ಕುಟುಂಬ ಬಹುದೊಡ್ಡದು ಇಂತಹ ಕುಟುಂಬದ ಹಿರಿಯ ಮಗನಾದ ರಾಧಾಕೃಷ್ಣ ಅವರು ಇಂದು ಬೆಂಗಳೂರಿನಲ್ಲಿದ್ದು ಕರ್ನಾಟಕಕ್ಕೆ ಸುಪರಿಚಿತ ರಾಗಿದ್ದಾರೆ ರಾಧಾಕೃಷ್ಣ ಎಂದರೆ ಯಾರಿಗೂ ತಿಳಿಯದು ಅವರನ್ನು ನಾವು ಆರ್ ಕೆ ಎಂದೇ ಕರೆಯಬೇಕು ಆರ್ ಕೆ ಎಂಬ ಹೆಸರಿನಿಂದಲೇ ಎಲ್ಲರಿಗೂ ಸುಪರಿಚಿತ ರಾಗಿದ್ದಾರೆ ಅವರು ಇದುವರೆಗೆ ಕಿಂಗ್ ಆಗಿಲ್ಲ ಕಳೆದ 35 ವರ್ಷದಿಂದ ಭಾವ ಮಲ್ಲಿಕಾರ್ಜುನ ಖರ್ಗೆ ಅವರ ಚುನಾವಣೆ ಮಾಡುತ್ತಾ ಬಂದವರು 1972 ರಿಂದ ಇದುವರೆಗೆ ಅವರ ಭಾವನವರ ಜೊತೆಗೆ ಇದ್ದು ಅವರ ಗೆಲುವಿಗೆ ಶ್ರಮಿಸಿ ಸೋಲರಿಯದ ಸರದಾರರನ್ನಾಗಿ ಮಾಡುವ ಕೀರ್ತಿಯಲ್ಲಿ ರಾಧಾಕೃಷ್ಣ ಅವರದು ಪಾಲಿದೆ ಮುಂದೆ ಪ್ರಿಯಾಂಕ ಖರ್ಗೆ ಅವರು ಚಿತ್ತಾಪುರ ಶಾಸಕರಾಗಲು ಮತ್ತು ಅವರು ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಲು ಎಲೆಯ ಮರೆಯ ಕಾಯಿಯಂತಿದ್ದು ರಾಧಾಕೃಷ್ಣ ಅವರು ಕೆಲಸ ಮಾಡಿದ್ದಾರೆ ದೊಡ್ಡ ಮನೆಯ ದೊಡ್ಡ ಮಗನಾಗಿ ಖರ್ಗೆಯವರ ಪ್ರೀತಿಯ ಅಳಿಯಂದಿರಾಗಿ ಅವರು ಹೆಸರುವಾಸಿಯಾಗಿದ್ದಾರೆ ಒಂದು ಕಡೆ ಖರ್ಗೆಯವರಿಗೆ ಅವರ ಧರ್ಮಪತ್ನಿ ರಾಧಾಬಾಯಿ ಅವರ ತಮ್ಮ ಇನ್ನೊಂದು ಕಡೆ ಅವರ ಹಿರಿಯ ಪುತ್ರಿ ಡಾ. ಜಯಶ್ರೀ ಅವರಿಗೆ ಪತಿ ಹೀಗಾಗಿ ಎರಡು ಅಳಿಯತನದ ಹೆಮ್ಮೆ ಇರುವ ರಾಧಾಕೃಷ್ಣ ಅವರು ಕರ್ನಾಟಕದ ಎಲ್ಲ ರಾಜಕಾರಣಿಗಳಿಗೆ ಸುಪರಿಚಿತರು ಅವರನ್ನು ಎಲ್ಲ ಜನ ಪ್ರೀತಿಯಿಂದ ಆರ್ ಕೆ ಎಂದೇ ಕರೆಯುತ್ತಾರೆ ಮತ್ತು ಗೌರವದಿಂದ ನಮಸ್ಕರಿಸುತ್ತಾರೆ ಕೆಲವರು ಅವರ ವ್ಯಕ್ತಿತ್ವ ಚಾರಿತ್ರ್ಯ ಬದುಕು ನೋಡಿ ಪಾದ ಮುಟ್ಟಿ ನಮಸ್ಕರಿಸುತ್ತಾರೆ ಹೀಗೆ ಪೂಜ್ಯ ಭಾವನೆ ಹೊಂದಿರುವ ರಾಧಾಕೃಷ್ಣ ಅವರು ಕಲ್ಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಈ ಬಾರಿ ಚುನಾವಣಾ ಕಣಕ್ಕೆ ಧುಮುಕಿದ್ದಾರೆ ಇವರು ರಾಜಕೀಯ ಕುಟುಂಬದಿಂದ ಬಂದವರಾದರೂ ಕೃಷಿ ಮತ್ತು ವಾಣಿಜ್ಯವನ್ನು ಎಂದೂ ಮರೆತವರಲ್ಲ ರಾಧಾಕೃಷ್ಣ ಅವರು ನೂರಾರು ಎಕರೆ ಭೂಮಿಗೆ ಮಾಲೀಕರು ಮತ್ತು ವಾಣಿಜ್ಯೋದ್ಯಮಿಗಳು 63 ವರ್ಷ ವಯಸ್ಸಿನ ರಾಧಾಕೃಷ್ಣ ಅವರು ಒಬ್ಬ ಅನುಭವಿ ಹಾಗೂ ನುರಿತ ರಾಜಕಾರಣಿಯಾಗಿದ್ದಾರೆ ಕರ್ನಾಟಕ ಪೀಪಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮೆಡಿಕಲ್ ಕಾಲೇಜ್ ಬೆಂಗಳೂರಿನ ಅಧ್ಯಕ್ಷರಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಈ ಬಾರಿ ಇವರು ಕಲ್ಬುರ್ಗಿ ಲೋಕಸಭಾ ಮೀಸಲು ಮತಕ್ಷೇತ್ರದಿಂದ ಅಭ್ಯರ್ಥಿಯಾಗಬೇಕು ಮತ್ತು ಇವರನ್ನೇ ಅಭ್ಯರ್ಥಿಯನ್ನಾಗಿಸಬೇಕೆಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಲ್ಬುರ್ಗಿ ಜಿಲ್ಲೆಯ ಕಾಂಗ್ರೆಸನ ಆರು ಶಾಸಕರು ಒತ್ತಾಯಿಸಿದ್ದರು ಕಲ್ಬುರ್ಗಿ ಲೋಕಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಒಂದು ಜೆಡಿಎಸ್ ಒಂದು ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ ಹೀಗಾಗಿ ರಾಧಾಕೃಷ್ಣ ಅವರ ಗೆಲುವು ಸುಲಭ ಎಂದು ಹೇಳಲಾಗುತ್ತಿದೆ ಇದುವರೆಗೆ ಕಿಂಗ್ ಮೇಕರ್ ಆಗಿದ್ದ ರಾಧಾಕೃಷ್ಣ ಅವರು ಈಗ ಅವರೇ ಕಿಂಗ್ ಆಗಲು ಹೊರಟಿದ್ದು ಮತ್ತು ಜನಾಭಿಪ್ರಾಯವು ಹಾಗೆ ಮೂಡಿ ಬರುತ್ತಿರುವುದು ಒಂದು ರೀತಿಯಲ್ಲಿ ಅರ್ಥಪೂರ್ಣ ಹಾಗೂ ಸಮಾಧಾನ ಅನ್ನಿಸುತ್ತಿದೆ ಡಾಕ್ಟರ್ ಮಲ್ಲಿಕಾರ್ಜುನ್ ಖರ್ಗೆ ಅವರ ಸಾಧನೆ ಮತ್ತು ಅವರ ಕೆಲಸ ಕಾರ್ಯಗಳ ಫಲಪ್ರಾಪ್ತಿ ರಾಧಾಕೃಷ್ಣ ಅವರಿಗೆ ದೊರೆತರೆ ಖಂಡಿತವಾಗಿ ಅವರು ಗೆಲ್ಲುವುದರಲ್ಲಿ ಸಂದೇಹವಿಲ್ಲ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರ ಪ್ರಭಾವ ಅವರ ಕೆಲಸ ಕಾರ್ಯಗಳು ಅವರ ಅಳಿಯ ರಾಧಾಕೃಷ್ಣ ಅವರಿಗೆ ಬಳುವಳಿಯಾಗಿ ಬರುವ ಸಾಧ್ಯತೆಗಳಿವೆ ಮತ್ತು ಅವರ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಯಾವುದಕ್ಕೂ ಕಾದು ನೋಡಬೇಕೆಂದು ಬುದ್ಧಿಜೀವಿಗಳು ಪತ್ರಕರ್ತರು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ ಮೋದಿಯವರ ಬಿರುಗಾಳಿ ಯಲ್ಲಿ ರಾಧಾಕೃಷ್ಣ ಅವರು ತರಗಲೆಯಂತೆ ತೇಲಿ ಹೋಗದೆ ಗಟ್ಟಿ ಮರದಂತೆ ಉಳಿಯುತ್ತಾರೆಂದು ಹೇಳಲಾಗುತ್ತಿದೆ ಮೋದಿಯವರು ಈ ಬಾರಿ 400 ಕ್ಕಿಂತಲೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಪಡೆಯುವುದರ ಮೂಲಕ ಮತ್ತೊಮ್ಮೆ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಂಡು ಹ್ಯಾಟ್ರಿಕ್ ಹೀರೋ ಆಗುತ್ತಾರೆಂಬ ಗಾಳಿ ಸುದ್ದಿ ಹರಡುತ್ತಿದೆ ಈ ಗಾಳಿಯಲ್ಲಿ ರಾಧಾಕೃಷ್ಣ ಅವರು ತೇಲಿ ಹೋಗುತ್ತಾರೋ ಅಥವಾ ಗಟ್ಟಿ ಬೀಜವಾಗಿ ಉಳಿಯುತ್ತಾರೆಯೋ ಎಂಬುದು ಕಾದು ನೋಡಬೇಕು ಇಲ್ಲಿ ರಾಧಾಕೃಷ್ಣ ಅವರಿಗಿಂತಲೂ ಖರ್ಗೆಯವರ ಪ್ರತಿಷ್ಠೆ ಮುಖ್ಯವಾಗಿ ಕಾಣುತ್ತಿದೆ ಇದುವರೆಗೆ ರಾಧಾಕೃಷ್ಣ ವರ್ಸಸ್ ಉಮೇಶ್ ಜಾದವ್ ಎನ್ನುತ್ತಿದ್ದರು ಈಗ ಖರ್ಗೆ ವರ್ಸಸ್ ಮೋದಿ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ ಯಾವುದಕ್ಕೂ ಫಲಿತಾಂಶಕ್ಕಾಗಿ ಕಾದು ನೋಡಬೇಕು ಆದರೆ ರಾಧಾಕೃಷ್ಣ ಅವರು ಹುಟ್ಟಿದ ಮನೆಯಿಂದ ಹಿಡಿದು ಅವರ ಭಾವನವರ ಮನೆಯವರಿಗೆ ಗುಂಡುಗುರ್ತಿ ಎಂಬ ಹಳ್ಳಿಯಿಂದ ದೆಹಲಿಯವರೆಗೆ ಬೆಳೆದ ರಾಧಾಕೃಷ್ಣ ಈಗ ಕಲ್ಬುರ್ಗಿ ಲೋಕ ಸಭೆಯ ಸದಸ್ಯರಾಗುವುದರ ಮೂಲಕ ಮಾವನಿಗೆ ತಕ್ಕ ಅಳಿಯ ಆಗುವ ರೆಂಬ ಭರವಸೆ ಮತದಾರರಿಗೆ ಇದೆ ಹೊಸಮುಖದ ಆಯ್ಕೆ ಬೇಕು ಎನ್ನುವಾಗ ರಾಧಾಕೃಷ್ಣ ಅವರ ಸ್ಪರ್ಧೆ ಅರ್ಥಪೂರ್ಣ ಹಾಗೂ ಮೌಲಿಕವಾಗಿದೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ



