ನಾಡಿನ ಸಮಸ್ತ ಜನರಿಗೂ ಯುಗಾದಿ ಹಬ್ಬದ ಶುಭಾಶಯಗಳು —- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ರಾಯಚೂರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ರಾಯಚೂರು ವತಿಯಿಂದ ಎಲ್ಲಾ ರೈತ ಬಾಂಧವರಿಗೆ ಹಾಗೂ ರಾಜ್ಯದ ಪ್ರಜ್ಞಾವಂತ ನಾಗರಿಕರಿಗೆ
ಹೊಸ ವರ್ಷಕ್ಕೆ ಕಾಲಿಡುತ್ತಿರುವ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು
ಹೊಸ ವರ್ಷಕ್ಕೆ ಕಾಲಿಡುತ್ತಿರುವ ಎಲ್ಲರಿಗೂ ಭಗವಂತನು ಆರೋಗ್ಯ, ಆಯುಷ್ಯರಕ್ಷಣೆ, ಧನ ಸಂಪತ್ತು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುವೆ.
ಈ ವರ್ಷ ಬರ, ಅತಿಯಾದ ಬಿಸಿಲು, ಕುಡಿಯುವ ನೀರಿನ ಅಭಾವ, ಹವಾಮಾನ ಏರು ಪೇರು ಇದೆಲ್ಲದರ ನಡುವೆ ಆರೋಗ್ಯ ಕಾಪಾಡಿ ಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ .
ಇದರ ಜೊತೆಗೆ ಈ ಸದ್ಯ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಜವಾಬ್ದಾರಿ ಕೂಡ ನಮ್ಮ ನಿಮ್ಮೆಲ್ಲರ ಮೇಲಿದೆ
ತಮ್ಮಲ್ಲಿ ನನ್ನದೊಂದು ಮನವಿ
ನಮಗೆ ಸ್ವತಂತ್ರ ಸಿಕ್ಕು 75 ವರ್ಷಗಳು ಕಳೆದರೂ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ನಿಗದಿ ಮಾಡದೆ,
ಕೃಷಿ ಇಲಾಖೆ,ರೇಷ್ಮೆ ಇಲಾಖೆ,ತೋಟಗಾರಿಕೆ ಇಲಾಖೆ ಇನ್ನಿತರ ಇಲಾಖೆಗಳಿಂದ ರೈತರಿಗೆ ಸಬ್ಸಿಡಿ ರಿಯಾಯಿತಿ ದರದಲ್ಲಿ ಯಂತ್ರೋಪಕರಣಗಳನ್ನು ವಿತರಿಸುತ್ತಿರುವದು ರೈತರ ಉದ್ಧಾರಕ್ಕಲ್ಲ.
ತಮ್ಮ ಕಮಿಷನ್ ಪಡೆದು ಕೊಳ್ಳುವ ಸಲುವಾಗಿ
ರೈತರ ಉತ್ಪನ್ನಗಳಿಗೆ ಡಾಕ್ಟರ್ ಸ್ವಾಮಿನಾಥನ್ ಆಯೋಗದ ವರದಿ ಆಧರಿಸಿ,ಬೆಲೆ ನೀತಿ ನಿಗದಿ ಮಾಡದೆ ಸಾಲ ಮನ್ನಾ ಮಾಡುವುದು,ಬಡ್ಡಿ ರಹಿತ ಸಾಲ ಕೊಡುವುದು ಎಲ್ಲಾ ನಾಟಕ. ಶಿಕ್ಷಣ ಕಡ್ಡಾಯ ಗೊಳಿಸಿದ್ದರಿಂದ ಲಕ್ಷಾಂತರ ಪದವಿಧರ ವಿದ್ಯಾವಂತ ನಿರುದ್ಯೋಗ ಯುವಕರಿಗೆ ಕೆಲಸ ಕೊಡದೆ ಸರಕಾರಿ ಇಲಾಖೆಗಳಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ, ಭರ್ತಿ ಮಾಡಿ ಕೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕಾದ ಸರ್ಕಾರಗಳು ಯುವಕರಿಗೆ ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿವೆ.
ಕೇವಲ ತಮ್ಮ ತಮ್ಮ ಸ್ವಾರ್ಥದ ಸಲುವಾಗಿ ಜನರಲ್ಲಿ ಜಾತಿಯ ವಿಷ ಬೀಜ ಬಿತ್ತಿ..ಹಣ,.ಮಧ್ಯ ಪಾನ ಹಂಚಿ ಅಧಿಕಾರಕ್ಕೆ ಬಂದು ಮತ್ತೆ ಹಣ ಗಳಿಸುವದೆ ಇವರ ಕಾಯಕವಾಗಿದೆ.
ಆದಕಾರಣ ತಮ್ಮಲ್ಲಿ ನನ್ನದೊಂದು ಕಳಕಳಿಯ ವಿನಂತಿ ಏನೆಂದರೆ,
ನಮ್ಮ ಮತ
ಮಧ್ಯಪಾನ ಮುಕ್ತ ಮಾಡುವವರಿಗೆ,
ಸರಕಾರಿ ಶಾಲಾ ಕಾಲೇಜು ಗಳಲ್ಲಿ ಶಿಕ್ಷಕರನ್ನು ಕೊರತೆಯಾಗದಂತೆ ನೋಡಿಕೊಳ್ಳುವವರಿಗೆ, ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳುವವರಿಗೆ,
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ, ಔಷಧಿಗಳ ಪರಿಕರಗಳ ಕೊರತೆ ಯಾಗದಂತೆ ನೋಡಿಕೊಳ್ಳುವವರಿಗೆ
ಎಪಿಎಂಸಿ ಯಲ್ಲಿ ಕಾನೂನು ಬಾಹಿರವಾಗಿ ಸೂಟ್,ಹಮಾಲಿ,ಖಾಲಿ ಚೀಲ ತೆಗೆದು ಕೊಳ್ಳುವುದನ್ನು ರದ್ದು ಮಾಡುವದು ಸೇರಿದಂತೆ ಇನ್ನಿತರ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವವರಿಗೆ
ನಮ್ಮ ಮತ ಎನ್ನುವ ನಿರ್ಧಾರಕ್ಕೆ ಬರಬೇಕು. ಎನ್ನುವ ಮಹದಾಸೆ ನನ್ನದು ನಿಮ್ಮ ನಿಮ್ಮ ಅಭಿಪ್ರಾಯವನ್ನು ತಿಳಿಸಿ,
ವಂದನೆಗಳು,
ಇಂತಿ
ಶರಣಪ್ಪ ಮರಳಿ
ಜಿಲ್ಲಾಧ್ಯಕ್ಷರು
ರಾಯಚೂರು
9741743904
ಹೊಸ ವರ್ಷಕ್ಕೆ ಕಾಲಿಡುತ್ತಿರುವ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು




