ವಕೀಲ ದೇವರಾಜೇಗೌಡರೇ, ಪ್ರಕರಣ ಸಿ.ಬಿ.ಐ.ಗೆ ವಹಿಸುವವರೆಗೆ ಹೋರಾಟ ಮಾಡೋಣ.
ವಕೀಲ ದೇವರಾಜೇಗೌಡರೇ ಯಾವುದೇ ಆಶೇ ಆಮೀಷ, ಪ್ರಲೋಭಗಳಿಗೆ ಒಳಗಾಗದೇ ಪ್ರಕರಣ ಸಿ.ಬಿ.ಐ.ಗೆ ವಹಿಸುವವರೆಗೆ ಹೋರಾಟ ಮಾಡೋಣ.
ಕರ್ನಾಟಕ ಬ್ಲೂಫಿಲ್ಮ್ ಉತ್ಪಾದಿಸುವ ರಾಜ್ಯವಾಗಿದೆ. ನಟರು, ನಿರ್ದೇಶಕರು, ನಿರ್ಮಾಕರು, ಕ್ಯಾಮರಾಮೆನ್, ಪೆನ್‌ಡ್ರೆವರ್‌ಗಳು, ಡಿಸ್ಟಿಬ್ಯೂಟರುಗಳು ಯಥೇಚ್ಚವಾಗಿ ಬೀಡು ಬಿಟ್ಟಿರುವ ಈ ರಾಜ್ಯದಲ್ಲಿರುವಷ್ಟು ಎಲ್ಲಿಯೂ ಸಿಕ್ಕಲಿಕ್ಕಿಲ್ಲ.
ಈ ಪ್ರಕರಣದಲ್ಲಿ ತೊಡಗಿಸಿಕೊಂಡು ರಾಜ್ಯದ ಹಾಗೂ ಮುಗ್ದ ಮಹಿಳೆಯರ ಚಿತ್ರಗಳನ್ನು ಸಾರ್ವಜನಿಕವಾಗಿ ತೋರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಕಾರ್ಯದಲ್ಲಿ ತೊಡಗಿರುವ ನಿರ್ದೇಶಕರು, ನಿರ್ಮಾಕರು, ಕ್ಯಾಮರಾಮೆನಗಳಿಗೆ ಈ ಸಂದರ್ಭದಲ್ಲಿ ಹಣಿಯಲೇಬೇಕಾಗಿದೆ. ತನ್ಮೂಲಕ ಅಂತರಾಷ್ಟೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯದ ಮಾನ-ಮರ್ಯಾದೆ ಹರಾಜಾಗುವುದನ್ನು ತಡೆಯಬೇಕಾಗಿದೆ.
ವ್ಯಕ್ತಿಗೆ ಅಧಿಕಾರದ, ಹಣ, ಮತ್ತು ಸಾರ್ವಜನಿಕವಾಗಿ ಕೇಳಿಬರುವ ಬಹುಪರಾಕಗಳ ಮದವೇರಿದಾಗ ಮನುಷ್ಯ ಠೇಂಕರಿಸುತ್ತಾ ಭಸ್ಮಾಸುರನಂತೆ ವರ್ತಿಸಲಾರಂಭಿಸುತ್ತಾನೆ. ರಾಜಕೀಯ ಕ್ಷೇತ್ರದಲ್ಲಂತೂ ಇದು ತುಂಬಾ ಹೆಚ್ಚಾಗಿ ಕಂಡು ಬರುತ್ತದೆ. ರಾಜಕಾರಣಿಗಳಿಗೆ ಪ್ರತಿಸ್ಪರ್ಧಿ ಹುಟ್ಟಿಕೊಂಡರಂತೂ ಈ ಭಸ್ಮಾಸುರ ಗುಣದ ರಾಜಕಾರಣಿಗಳು ವಿಚಲಿತನಾಗುತ್ತಾನೆ. ಎದುರಾಳಿಯನ್ನು ಇನ್ನಿಲ್ಲದಂತೆ ಹಣಿಯಲು ಮತ್ತು ಎದುರಾಳಿಯನ್ನು ರಾಜಕೀಯವಾಗಿ ಮುಗಿಸಲು, ಮೂಲೆಗುಂಪಾಗಿಸಲು ಆಹೋರಾತ್ರಿ ಹೊಂಚಾಕುತ್ತಾನೆ, ಹವಣಿಸುತ್ತಾನೆ. ಇತ್ತೀಚೆಗೆ ಸ್ಪರ್ಧಿ-ಪ್ರತಿಸ್ಪರ್ಧಿಗಳ ಮೇಲಾಟ, ಹೋರಾಟ ಕೆಸರೆರಚಾಟ, ರಾಜಕೀಯ ಕ್ಷೇತ್ರದಲ್ಲಿ ತುಂಬಾ ಹೆಚ್ಚಾಗಿದೆ. ಕರ್ನಾಟಕದಲ್ಲಂತೂ ಮಿತಿ ಮೀರಿದೆ.
ಇದಕ್ಕೆ ಪೂರಕವಾಗಿ ತೀಟೆಗಾಗಿ ಮೀಟಲು ಓಡಾಡುವ ಮದಗಜ ಕಾಮಣ್ಣ ರಾಜಕಾರಣಿಗಳೂ ತಮ್ಮ ತನವನ್ನು ಮರೆತು ಈ ಶೂಟಿಂಗನಲ್ಲಿಯೇ ಮಗ್ನರಾಗಿದ್ದಾರೆ. ಅಂಥಹವರ ಲೀಲೆಗಳನ್ನು ವಿಡಿಯೋ ಶೂಟಿಂಗ್ ಮಾಡಲು ಶೂಟರ್‌ಗಳು ತಮ್ಮ ಕ್ಯಾಮರಾದೊಂದಿಗೆ ರಾಜಕೀಯ ವ್ಯಕ್ತಿಗಳ ಹಿಂದೆ ಬಿದ್ದಿರುತ್ತಾರೆ. ಅಥವಾ ತೀಟೆಯ ವ್ಯಕ್ತಿಗಳ ಅಶ್ಲೀಲ ದೃಷ್ಯಗಳನ್ನು ಈಗಾಗಲೇ ಅವರ ಜೊತೆಗಿರುವ ಆಪ್ತರೇ ಶೂಟ ಮಾಡಿಕೊಂಡಿರುತ್ತಾರೆ. ಮತ್ತು ಸಮಯ ಬಂದಾಗ ಸಾರ್ವಜನಿಕವಾಗಿ ಮಿಡಿಯಾಗಳಲ್ಲಿ ಬಿಡುತ್ತಾರೆ. ಟಿ.ವಿ. ಛಾನೆಗಳು ತಮ್ಮ ಟಿ.ಆರ್.ಪಿ.ಗಾಗಿ ಇಂಥಹ ದೃಶ್ಯಗಳನ್ನು ತೋರಿಸಿದ್ದೇ ತೋರಿಸಿದ್ದು. ಕಾಮಣ್ಣರ ಲೈಂಗಿಕ ದೃಶ್ಯ ಯಾವ ಪರಿಯಾಗಿ ತಮ್ಮ ಛಾನೆಲ್‌ಗಳಲ್ಲಿ ತೋರಿಸುತ್ತಾರೆಂದರೇ ಮೀಟಾಟದ ವ್ಯಕ್ತಿ ಕೋರ್ಟಿನಿಂದ ಸ್ಟೇ ತಂದು ನಿಲ್ಲಿಸುವವರೆಗೂ ತೋರಿಸುತ್ತಾನೆ ಇರುತ್ತಾರೆ.
ವಾರದ ಹಿಂದಿನಿಂದಲೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಕಾರವೆತ್ತದ ರಾಜಕಾರಣಿಗಳು, ಮತ್ತು ದೃಶ್ಯ ಮಾಧ್ಯಮಗಳು ಬರೀ ಇಂಥಹ ದೃಶ್ಯಗಳನ್ನು ಮತ್ತು ಊಹಾಪೋಹ ಸುದ್ಧಿಗಳನ್ನೇ ಪ್ರಧಾನವಾಗಿಸಿಕೊಂಡು ಪ್ರದರ್ಶಿಸುತ್ತಿವೆ.
ದೇಶದ ಅಷ್ಟೇ ಏಕೆ? ಜಗತ್ತಿನ ಕೇಡಿಗಳು, ಕ್ರಿಮಿನಲ್ಸ್ ಕರ್ನಾಟಕದಲ್ಲಿಯೇ ಹೆಚ್ಚಾಗಿದ್ದಾರಾ? ಎನ್ನಿಸುತ್ತಿದೆ. ವರ್ಷದಲ್ಲಿ ಆರೆಂಟು ವಿವಿಧ ಥರಹದ ಅಪರೂಪದಲ್ಲಿ ಆಪರೂಪವಾಗಿರುವ, ನಾಗರೀಕ ಸಮಾಜ ನಾಚಿಕೊಳ್ಳುವ ಅತೀ ಅಮಾನವೀಯ ಘಟನೆಗಳು ನಮ್ಮ ರಾಜ್ಯದಲ್ಲಿಯೇ ಘಟಿಸುತ್ತಿವೆ.
ಕರ್ನಾಟಕ ರಾಜ್ಯದ ಆತ್ಮೀಯ ವಕೀಲ ಮಿತ್ರರೇ, ರಾಜ್ಯದ ಮಾನ ಕಾಪಾಡುವ ಈ ಸಂಕ್ರಮಣ ಕಾಲದಲ್ಲಿ ವಕೀಲರ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಯಾಕೆಂದರೇ ವಕೀಲರು ಸಮಾಜದ ಮುಖ್ಯ ಭಾಗವಾಗಿದ್ದಾರೆ. ಈ ವಿಷಯವನ್ನು ಪ್ರತಿ ಒಬ್ಬ ವಕೀಲರೂ ಚಾಲೆಂಜಾಗಿ ತೆಗೆದುಕೊಂಡು, ಮೀಟಾಟದ ರಾಜಕಾರಣಿಗಳ, ನಿರ್ಮಾಪಕ, ನಿರ್ದೇಶಕರ, ಪೆನ್‌ಡ್ರೈ ವರ್‌ಗಳ ಹಾಗೂ ಕಿಡಿಗೇಡಿಗಳ ಹುಟ್ಟಡಗಿಸುವ ಕಾರ್ಯಕ್ಕೆ ಯುದ್ದೋಪಾದಿಯಲ್ಲಿ ಸನ್ನದ್ಧರಾಗಬೇಕಾಗಿದೆ. ತನ್ಮೂಲಕ ಈ ಕುಹಕಿಗಳಿಂದ ಅಂತರಾಷ್ಟೀಯ ಮಟ್ಟದಲ್ಲಿ ಹರಾಜಾಗುತ್ತಿರುವ ಕರ್ನಾಟಕ ರಾಜ್ಯದ ಮಾನ ಉಳಿಸಬೇಕಾಗಿದೆ.
ಕಾರಣ ವಕೀಲ ದೇವರಾಜೇಗೌಡರೇ ಪ್ರಕರಣ ಸಿ.ಬಿ.ಐ.ಗೆ ವಹಿಸುವವರೆಗೆ ಹೋರಾಟ ಮಾಡೋಣ. ದೇವರಾಜೇಗೌಡರೂ ಕೂಡ ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ದು ಅಂತ್ಯ ಕಾಣಿಸಲು ಹೋರಾಟ ಮಾಡಬೇಕು. ಈ ಅನಿಷ್ಟ ಕಾರ್ಯಗಳಿಂದಾಗಿ ಕರ್ನಾಟಕ ರಾಜ್ಯದ ಮಾನ ಅಂತರಾಷ್ಟೀಯ ಮಟ್ಟದಲ್ಲಿ ತೊಳೆದು ಹೋಗುತ್ತಿದೆ. ರಾಜ್ಯದ ಜನರು ಬೇರೆ ಬೇರೆ ರಾಜ್ಯಾಗಳಿಗೆ, ಬೇರೆ ದೇಶಗಳಿಗೆ ಪ್ರಯಾಣಿಸುತ್ತಿದ್ದಾಗ, ಅಥವಾ ಅಲ್ಲಿ ನೆಲೆಸಲು ಹೊರಟಾಗ ” ನಾವು ಕರ್ನಾಟಕ ಜನರು” ಎಂದು ಹೇಳಿಕೊಳ್ಳಲಾಗದಷ್ಟು ಮುಜುಗರವಾಗುತ್ತಿದೆ. ಬಾಯ್ತಪ್ಪಿ ” ನಾವು ಕರ್ನಾಟಕದ ಜನ ” ಎಂದು ಪರಿಚಯಿಸಿಕೊಂಡಿದ್ದೇ ಆದರೇ, ಎದುರಿನ ವ್ಯಕ್ತಿ ಮುಸಿ ಮುಸಿ ನಗುತ್ತಾರೆ. ಅವಹೇಳನ ಮಾಡುತ್ತಾರೆ, ಕೆಲ ಸುಶೀಕ್ಷಿತರು ಮುಖ ತಿರುಗಿಸುತ್ತಿದ್ದಾರೆ.
ಕರ್ನಾಟಕ ರಾಜ್ಯದ ಈ ಅಡ್ನಾಡಿ ರಾಜಕಾರಣಿಗಳು ಮಾಡುವ ಮಂಗನಾಟದಿಂದಾಗಿ ನಮ್ಮ ರಾಜ್ಯದ ಜನರು ತಲೆ ತಗ್ಗಿಸುವಂಥಹ ಈ ಸ್ಥಿತಿಗೆ ತಂದಿಟ್ಟಿದ್ದಾರೆ. ಕರ್ನಾಟಕ ರಾಜ್ಯದ ಮಾನ ಉಳಿಸೋಣ ಬನ್ನಿ ಎಲ್ಲರೂ ಕೈಜೋಡಿಸೋಣ.



