ಸುದ್ಧಿ

ದರೋಜಿ -ಬಾಗಲಕೋಟ್ ರೈಲ್ವೆ ಯೋಜನೆ ಯನ್ನು ಕೇಂದ್ರ ಬಜೆಟ್ ನಲ್ಲಿ ಸೇರಿಸಲು ಕೊಪ್ಪಳ ಸಂಸದರಿಗೆ ಮನವಿ

ದರೋಜಿ-ಗಂಗಾವತಿ-ಬಾಗಲಕೋಟ ರೈಲ್ವೇ ಹೋರಾಟ ಸಮಿತಿ ಕನಕಗಿರಿ ರೈಲ್ವೆ ಮಾರ್ಗದ ಕುರಿತಾಗಿ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ದರೋಜಿ ಗಂಗಾವತಿ ಬಾಗಲಕೋಟ್ ಹೋರಾಟ ಸಮಿತಿಯ ಸಹ ಸಂಚಾಲಕರಾದ ದುರ್ಗಾ ದಾಸ್ ಯಾದವ್ ಅವರು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ ಗಂಗಾವತಿಯ ಕೇಂದ್ರಬಿಂದುವಾದ ಅಂಜನಾದ್ರಿ ಹಂಪಿ ಕನಕಗಿರಿ ಬಾಗಲಕೋಟ್ ಐಹೊಳೆ ಪಟ್ಟದಕಲ್ಲು ಧಾರ್ಮಿಕ ದೃಷ್ಟಿಯಿಂದ ಹಾಗೂ ಕೈಗಾರಿಕಾ ದೃಷ್ಟಿಯಿಂದ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಅತ್ಯಂತ ಪ್ರಸಿದ್ಧವಾಗಿದ್ದು ಬಡ ಕೂಲಿ ಕಾರ್ಮಿಕರಿಗೂ ಅನುಕೂಲವಾಗುವುದು ಎಂದು ತಿಳಿಸಿದರು. ದರೋಜಿ-ಗಂಗಾವತಿ- ಬಾಗಲಕೋಟ ರೈಲ್ವೇ ಯೋಜನೆಯು ಎಚ್.ಆರ್ ಶ್ರೀನಾಥ ಮಾಜಿ ವಿಧಾನ ಪರಿಷತ್ ಸದ್ಯಸರು ಹಾಗು ದರೋಜಿ-ಗಂಗಾವತಿ-ಬಾಗಲಕೋಟ ರೈಲ್ವೇ ಹೋರಾಟ ಸಮಿತಿಯ ಸಂಚಾಲಕ ಇವರ ಯಶಸ್ವಿ ನೇತ್ರುತ್ವದಿಂದ ಹಾಗು ಹಿಂದಿನ ಕೊಪ್ಪಳ ಸಂಸದರಾದ ಶ್ರೀ ಕರಡಿ ಸಂಗಣ್ಣನವರ ಪ್ರಯತ್ನ ಫಲಯುತ ಕೇಂದ್ರ ಸರ್ಕಾರದಿಂದ ಮೂಂಜೂರಾಗಿದ್ದು PET SURVEY ಕಾರ್ಯಕ್ಕೆ ಉಲ್ಲೇಖಗಳಲ್ಲಿ ತೊರಿಸಿದಂತೆ ಹಣ ನಿಗದಿಪಡಿಸಿ, ಈಗಾಗಲೇ ಡೋನ್ ಸರ್ವೆ ಕಾರ್ಯ ಮುಗುದಿದ್ದು, ಆದ್ದರಿಂದ ದಿನಾಂಕ:23-07-2024 ರಂದು ನಡೆಯುವ ಅಧಿವೇಷನದ ಬಜೆಟ್‌ನಲ್ಲಿ ಸದರಿ ಯೋಜನೆಗೆ ದರೋಜಿ-ಗಂಗಾವತಿ-ಬಾಗಲಕೋಟ ವರೆಗೆ ಹಣಕಾಸಿನ ಅನುಮೋದನೆಯನ್ನು ಕೇಂದ್ರ ರೈಲ್ವೇ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್‌ರವರಿಗು ಮತ್ತು ಕೇಂದ್ರದ ರಾಜ್ಯ ರೈಲ್ವೇ ಖಾತೆ ಸಚಿವರಾದ ಮಾನ್ಯಶ್ರೀ ವಿ.ಸೋಮಣ್ಣರವರಿಗು ಬಜೆಟ್‌ನಲ್ಲಿ ಸೇರಿಸಲು ತಾವು ಶಿಫಾರಸ್ಸು ಮಾಡಿಸಿ ಶೀಘ್ರವೇ ಕಾರ್ಯಾರಂಭ ಮಾಡಿಸಲು ಈ ರೈಲುಮಾರ್ಗ ಹೋರಾಟ ಸಮಿತಿಯಿಂದ ಕೊಪ್ಪಳ ಜಿಲ್ಲೆಯ ಸಂಸದರಾದ ರಾಜಶೇಖರ್ ಹಿಟ್ನಾಳ್ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಸಂಸದ ರಾಜಶೇಖರ್ ಅವರು ದರೋಜಿ ಗಂಗಾವತಿ ಬಾಗಲಕೋಟ್ ವರೆಗೂ ರೈಲ್ವೆ ಸರ್ವೆ ಮುಗಿದಿದ್ದು ಈಗ ಅದಕ್ಕೆ ಹಣವನ್ನು ಮೀಸಲು ಇಟ್ಟಿದ್ದು ಕೇಂದ್ರ ರೈಲ್ವೆ ಖಾತೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವರಾದ ವಿ ಸೋಮಣ್ಣ ನವರಿಗೆ ಈ ಮಾರ್ಗವನ್ನು ಕಾರ್ಯರೂಪಕ್ಕೆ ತರುವಂತೆ ಒತ್ತಾಯಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾ ಸಂಸದರಾದ ರಾಜಶೇಖರ್ ಹಿಟ್ನಾಳ್ ಅವರು ತಿಳಿಸಿದರು .

ಈ ಸಂದರ್ಭದಲ್ಲಿ ಸಹ ಸಂಚಾಲಕರಾದ ದುರ್ಗಾ ದಾಸ್ ಯಾದವ್ ಮಲಿಗ್ವಾಡ ದೇವಪ್ಪ ತೋಳದ್ ಮೃತ್ಯುಂಜಯ ಸ್ವಾಮಿ ಭೂಸನೂರ್ ಮಟ್ ಚೇತನ್ ಯಾದವ್ ಬಸವರಾಜ್ ತುರವಿಹಾಳ ರಂಗಣ್ಣ ಕುರುಬೂರು ನಾರಾಯಣಪ್ಪ ಐಲಿ ಷಣ್ಮುಖಪ್ಪ ಐಲಿ ಬಸವರಾಜ್ ಗೌಡ ಪಾಟೀಲ್ ತಾವರಗೇರಾ ಹಾಗೂ ಅನೇಕ ಪ್ರಮುಖರು ಮತ್ತು ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button