ಸಂಪಾದಕೀಯ

ಸಿ.ಐ ಟಿ ಯು ಹ.ಬೊ.ಹಳ್ಳಿ ಶಾಸಕರಿಗೆ ಮನವಿ ಪತ್ರ

ಸಿ ಐ ಟಿ ಯು ಹ.ಬೊ.ಹಳ್ಳಿ ಶಾಸಕರಿಗೆ ಮನವಿ ಪತ್ರ
ದಿನಾಂಕ 16-10-2024 ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಹ.ಬೊ.ಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ನೇಮಿರಾಜ್ ನಾಯ್ಕ ರವರಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು ನೀಡಲಾಯಿತು ಹಾಗೂ ಕಾರ್ಮಿಕ ಸಚಿವರಾದ ಮಾನ್ಯ ಶ್ರೀ ಸಂತೋಷ್ ಲಾಡ್ ರವರಿಗೂ ಮನವಿ ಪತ್ರವನ್ನು ಕಳಿಸಿಕೊಡಲಾಯಿತು.
ಬೇಡಿಕೆಗಳು:
1.ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ವಾಪಸ್ ಪಡೆಯಬೇಕು ಹೈಕೋರ್ಟ ಆದೇಶದಂತೆ
2021 ರ ಅಧಿಸೂಚನೆ ಅನ್ವಹಿಸಿ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು. 2022-23-24 ಸಾಲಿನ ಬಾಕಿ ಅರ್ಜಿಗಳಿಗೂ ಧನ ಸಹಾಯ ಪಾವತಿಸಬೇಕು

  1. ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸುವುದು ನಿಲ್ಲಬೇಕು ಹಾಗೂ ವಿಳಂಬ ಮಾಡದೇ ಕಾರ್ಡು ವಿತರಣೆ ಆಗಬೇಕು.
  2. ಸೌಲಭ್ಯಗಳಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು.
  3. ಪಿಂಚಣಿದಾರರಿಗೆ ಶೀಘ್ರವೇ ಅವರ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು. ಪಿಂಚಣಿಗೆ ಅರ್ಜಿ ಸಲ್ಲಿಸುವಲ್ಲಿ ಆಗುತ್ತಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಬೇಕು.
  4. ಟೆಂಡರ್ ಆಧಾರಿತ ಎಲ್ಲ ಖರೀದಿ ವ್ಯವಹಾರಗಳನ್ನು ನಿಲ್ಲಿಸಬೇಕು. ಇದುವರೆಗೆ ನಡೆದಿರುವ ಖರೀದಿಗಳಲ್ಲಿ ಅವ್ಯವಹಾರಗಳ ನಡೆದಿದ್ದು, ಈ ಬಗ್ಗೆ ನ್ಯಾಯಂಗ ತನಿಖೆಯಾಗಬೇಕು.
  5. ಹೊಸ ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಗಳು ಹಾಗೂ ಸರ್ವರ್ ಸಮಸ್ಯೆ ಪರಿಹರಿಸಬೇಕು.
  6. ಬಾಕಿ ಇರುವ ಸೆಸ್ ಸಂಗ್ರಹ ಮಾಡಿ. ಬೃಹತ್ ಖಾಸಗಿ ಹಾಗೂ ಸಾರ್ವಜನಿಕ ನಿರ್ಮಾಣಗಳಿಗೆ ಶೇ 2ರಷ್ಟು ಸೆಸ್ ವಿಧಿಸಬೇಕು.
  7. ಕಲ್ಯಾಣ ಮಂಡಳಿಯನ್ನು ಮತ್ತು ಸಲಹಾ ಮಂಡಳಿಯನ್ನು ಪುನರಚಿಸಿ ಕೇಂದ್ರ ಕಾರ್ಮಿಕ ಸಂಯೋಜಿತ ಸಂಘಗಳಿಗೆ ಮಾತ್ರವೇ ಪ್ರಾತಿನಿಧ್ಯ ನೀಡಬೇಕು.
  8. ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರನ್ನು ನೊಂದಾಯಿಸುವಾಗ ಹಾಗೂ ನವಿಕರಣ ಮಾಡುವ ಸಂಧರ್ಭದಲ್ಲಿ ಸ್ಥಳಕ್ಕೆ ಹೋಗಿ ಪರಿಸಿಲನೆ ಮಾಡದೆ ಅನಗತ್ಯವಾಗಿ ತಿರಸ್ಕಾರ ಮಾಡಲಾಗುತ್ತೆದೆ ಇದಕ್ಕೆ ಡಾಟ ಎಂಟ್ರಿ ಆಪರೇಟರ್ (DEO) ಹೊಣೆಯಾಗುತ್ತಾರೆ ಆದ್ದರಿಂದ ಇವರನ್ನು ವರ್ಗಾವಣೆ ಮಾಡಬೇಕು ಕಾರ್ಮಿಕರಲ್ಲದವರನ್ನು ನೋಂದಯಿಸುವ ಆನ್ಲೈನ್ ಸೆಂಟರ್ಗಳ ಮೇಲೆ ಕ್ರಮ ಕೈಗೊಳ್ಳಬೇಕು.
  9. ಇತ್ತೀಚೆಗೆ ಆಧಾರ್ ಕಾರ್ಡನಲ್ಲಿರುವ ವಯಸ್ಸನ್ನು ಪರಿಗಣಿಸುತ್ತಿರುದರಿಂದ ಕೆಲವು ಫಲಾನಿಭಾನಿಗಳಿಗೆ 60 ವರ್ಷ ಮೀರುತ್ತಿದೆ ಇಂತಹ ಫಲಾನುಭವಿಗಳು ಪಿಂಚಣಿ ಸೇರಿದಂತೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಈ ಸಮಸ್ಯೆಯನ್ನು ಬಗೆಹರಿಸಬೇಕು.

ಮೇಲೆ ಕಾಣಿಸಿದ ಬೇಡಿಕೆಗಳನ್ನು ಶೀಘ್ರವೇ ಸರಕಾರ ಕೂಡಲೆ ಈಡೇರಿಸಿ ಕೊಡಬೇಕೆಂದು ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಯಿತು. ನಿಯೋಗದಲ್ಲಿ ಅಧ್ಯಕ ಯು.ತೋಟೇಶ, ಖಜಾಂಜಿ ಎಂ ನಾಗರಾಜ, ಕಾರ್ಯದರ್ಶಿ ಎಸ್ ಜಗನಾಥ, ಉಪಾಧ್ಯಕ್ಷ ವಿ ಕೃಷ್ಣಮೂರ್ತಿ, ಗವಿಸಿದ್ದಪ್ಪ, ಕೆ ಸ್ವಾಮಿ, ಎಂ ಪಕ್ಕಿರಪ್ಪ, ಡಿ ಶರಣಪ್ಪ, ಸಹ ಕಾರ್ಯದರ್ಶಿಗಳಾದ ಕೊಟ್ರೇಶ, ವಿ ಪ್ರಶಾಂತ, ಸಿದ್ದಕಲಿ ಸಾಬು, ಕೋಟೆಪ್ಪ , ಎ ಎಮ್ ಗಂಗಾಧರಯ್ಯ ಹಾಗೂ ಡಿ ನಾಗರಾಜ ಉಪಸ್ಥಿತರಿಂದ್ದರು.

ವರದಿ : ಮಹೇಶ್ ಮಾದೂರು (ಜಿಲ್ಲಾ ಮುಖ್ಯ ವರದಿಗಾರರು) ವಿಜಯನಗರ

Related Articles

Leave a Reply

Your email address will not be published. Required fields are marked *

Back to top button