” ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ” ಗೆ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀವಿ.ಸೋಮಣ್ಣ ರವರಿಂದ ಮಾಲಾರ್ಪಣೆ.

ಭಾರತ ಸ್ವಾತಂತ್ರ್ಯದ ಬೆಳ್ಳಿಚುಕ್ಕಿ. ಕಿತ್ತೂರು ಸಂಸ್ಧಾನದ ವೀರರಾಣಿ ಚೆನ್ನಮ್ಮನವರ ಜಯಂತಿ ಹಾಗೂ 200ನೇ ವರ್ಷದ ವಿಜಯೋತ್ಸವದ ಪ್ರಯುಕ್ತ ನವದೆಹಲಿಯ ಭಾರತದ ಸಂಸತ್ ಅವರಣದ ಪ್ರೇರಣಾ ಸ್ಧಳದಲ್ಲಿರುವ ” ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ”ಗೆ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಸನ್ಮಾನ್ಯಶ್ರೀವಿ.ಸೋಮಣ್ಣ ರವರು ನಾಳೆ ಬೆಳಿಗ್ಗೆ 9 -30 ಗಂಟೆಗೆ (23 – 10 – 2024) ಬುಧವಾರ ದಿನ ಮಾಲಾರ್ಪಣೆಯನ್ನು ಮಾಡಲಿದ್ದಾರೆ .ಕನ್ನಡ ನಾಡು ನುಡಿ ಪರಂಪರೆ ಬಗ್ಗೆ ಕಾಳಜಿ ಮತ್ತು ಬದ್ದತೆಯುಳ್ಳ ಶ್ರೀವಿ.ಸೋಮಣ್ಣ ಅವರ ಈ ನಡೆ ಶ್ಲಾಘನೀಯ. ಅನೇಕ ವರ್ಷಗಳಿಂದ ದೆಹಲಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಇದ್ದರೂ ಯಾರು ಸಹ ಅಕೆಯ ಜಯಂತಿ ಮತ್ತು ವಿಜಯೋತ್ಸದ ಸಂಧರ್ಭದಲ್ಲಿ ಮಾಲಾರ್ಪಣೆಯ ಗೌರವ ಸೂಚಿಸಿರಲಿಲ್ಲ. ಮಾನ್ಯಶ್ರೀವಿ.ಸೋಮಣ್ಣ ಅವರ ಈ ನಿರ್ಧಾರ ಸಮಸ್ತ ಕನ್ನಡಿಗರಿಗೆ ಹರ್ಷವನ್ನುಂಟು ಮಾಡಿದೆ. ಅವರಿಗೆ ಅಭಿನಂದನೆಗಳು.
ಪಾಲನೇತ್ರ.
.ಅಧ್ಯಕ್ಷರು. ಕರ್ನಾಟಕ ವಿಚಾರ ವೇದಿಕೆ
ಬೆಂಗಳೂರು



