ಸಂಪಾದಕೀಯಸಿನಿಮಾ

ಮಧುಗಿರಿಯಲ್ಲಿ ಅಕ್ರಮ ಭೂ ಕಬಳಿಕೆ – ನಟರಾಜ್ ಜೆ.ಎನ್ . ಬೆಂಗಳೂರು

ಮಾಡುಗಿರಿನಲಿ ಅಕ್ರಮ ಭೂ ಕಬಳಿಕೆ – ನಟರಾಜ್ ಜೆ.ಎನ್ . ಬೆಂಗಳೂರು. ಸಹಕಾರದಿಂದ ಗೋಮಾಳ ಮತ್ತು ಬಗರ್‌ಹುಕುಂ ಭೂಮಿಗೆ ನಕಲಿ ದಾಖಲೆ ಸೃಷ್ಟನೆ ಮಾಡಿದ ಪರಭಾರೆ ಮಾಡಿದ ಭೂಮಿ ಅಕ್ರಮದ ಮಾಡಿದ್ದರೆಂದು ನಟರಾಜ್ ಜೆ ಎನ್. ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಆರೋಪಿಸಿದರು. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕೋಡಿಗೇನಹಳ್ಳಿ ಹೋಬಳಿಯ ದೊಡ್ಡಮಾಲೂರು ಗ್ರಾಮದ ಸರ್ವೆ ಸಂಖ್ಯೆ 64ರಲ್ಲಿ 113 ಸರ್ಕಾರಿ ಸರ್ಕಾರಿ ಗೋಮಾಳ ಭೂಮಿ ಭಾರಿ ಭೂಅಕ್ರಮ ನಡೆದಿದೆ ಎಂಬ ಆರೋಪವನ್ನು ಸ್ಥಳೀಯರು ಆರೋಪಿಸಿತಿದ್ದಾರೆಂದು
ಪತ್ರಿಕಾಗೋಷ್ಠಿಯ ಮೂಲಕ ಮಾತನಾಡುತ್ತಾ, ಈ ಭೂಮಿಯಲ್ಲಿ ಕಳೆದ 50 ವರ್ಷಗಳ ಹಿಂದೆ ಸುಮಾರು 49 ಆಸ್ಪತ್ರೆ ಭೂಮಿಯನ್ನು ಬಗರ್‌ಹುಕುಂ ಆಧಾರದ ಮೇಲೆ ಸಾಗುವಳಿ ಮಾಡಿಕೊಂಡಿದ್ದಾರೆಂದು ವಿವರಿಸಿದರು. ಉಳಿದ 57.04 ಭೂಮಿ ಗೋಮಾಳ ಮತ್ತು ಬಿ ಖರಾಬು ಎಂಬುದು 1993-94ರ ಸರ್ಕಾರಿ ದಾಖಲೆಗಳಿಂದ ಸ್ಪಷ್ಟವಾಗಿದೆ.
ಆದರೆ ಇತ್ತೀಚೆಗಷ್ಟೇ ಡಿ.ವಿ. ಮಂಜುನಾಥ್ ಬಿನ್ ಡಿ. ವೀರಭದ್ರಪ್ಪ ಹಾಗೂ ಜೆ.ಎನ್. ಹರೀಶ್‌ಕುಮಾರ್ ಬಿನ್ ನಂಜುಂಡಯ್ಯ ಎಂಬುವವರು, ಮಂಗಮ್ಮ, ಭಾಗ್ಯಮ್ಮ ಮತ್ತು ಸಿದ್ದಪ್ಪ ಎಂಬ ತಮಗೆ ಸಂಬಂಧವಿಲ್ಲದ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 4 ಎಕರೆ ಭೂಮಿಯನ್ನು ತಮ್ಮ ಹೆಸರಿಗೆ ತಿದ್ದುಪಡಿ ಮಾಡಿಕೊಂಡಿದ್ದರೆ ಎಂದು ಆರೋಪಿಸಿದರು , ಈ ನಕಲಿ ದಾಖಲೆ ಭೂ ಖರೀದಿ ಪತ್ರವೂ ಬೆಳಕಿಗೆ ಬಂದಿದೆ ಎಂದರು.
ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸ್ಥಳ ಪರಿಶೀಲನೆ ನಡೆಸದೇ ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೇ, ನೇರವಾಗಿ ಭೂಮಿಯ ಕ್ರಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದು ಇವರ ಗಂಭೀರ ಆರೋಪ, ಅಧಿಕಾರಿಗಳು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮ ಭೂ ಪರಭಾರೆಗೆ ಅವಕಾಶ ನೀಡಿದ್ದಾರೆ ಎಂದು ನಟರಾಜ್ ಜೆ.ಎನ್. ಅವರು ಆರೋಪಿಸಿದರು.
ತಮ್ಮಿಂದ ನಿಜವಾದ ದಾಖಲೆಗಳನ್ನು ನೀಡುವಂತೆ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದರೂ ದಾಖಲೆ ನೀಡದೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು. ಇದು ಭೂಮಿಅಕ್ರಮ ಮತ್ತು ನಕಲಿ ದಾಖಲೆ ಸೃಷ್ಟಿಯ ಘಟನೆಯನ್ನು ಮುಚ್ಚಿಹಾಕುವ ಸಂಚು ಎಂದು ಅವರು ಶಂಕಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡಬೇಕೆಂದು ಒತ್ತಿಯಿಸಿದ್ದರೆ. ನಕಲಿ ದಾಖಲೆಗಳ ಪರಿಶೀಲನೆ, ಭೂಅಕ್ರಮದಲ್ಲಿ ಅಧಿಕಾರಿಗಳು ವಿರುದ್ಧ ಕ್ರಮ, ಹಾಗೂ ಭೂಮಿಯನ್ನು ಮರುವಶಕ್ಕೆ ತೆಗೆದುಕೊಳ್ಳುವ ಸರ್ಕಾರದ ಕ್ರಮವನ್ನು ಕೈಗೊಳ್ಳಲು ಅವರು ರಾಜ್ಯ ಸರ್ಕಾರವನ್ನ್ ಡೈಮಂಡ್ ಮಾಡಿದರು.
ಸರ್ಕಾರದಿಂದ ಸ್ಪಷ್ಟ ಮತ್ತು ಶೀಘ್ರ ಪ್ರತಿಕ್ರಿಯೆ ಲಭ್ಯವಾಗದ ಸ್ಥಿತಿಯಲ್ಲಿ, ಸಂಘಟನೆಗಳು ಸೇರಿ ತೀವ್ರ ಹೋರಾಟ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದರು. ವರದಿ ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button