ಸುದ್ಧಿ

ಸರಕಾರದ ವಿರುದ್ದ ಅಹೋರಾತ್ರಿ ಧರಣಿ 21 ರಂದು – ಅಲೆಮಾರಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ

ಸರಕಾರದ ವಿರುದ್ದ ಅಹೋರಾತ್ರಿ ಧರಣಿ 21 ರಂದು – ಅಲೆಮಾರಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಬೆಂಗಳೂರು. ಸರಕಾರದ ವಿರುದ್ದ ಅಹೋರಾತ್ರಿ ಧರಣಿ 21 , 22 ಮಾಡಲಾಗುತ್ತದೆ ಎಂದು ಅಲೆಮಾರಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ತಿಳಿಸಿದರು. ರಾಜ್ಯಾದಾದ್ಯಂತ ಹಿಂದುಳಿದ ವರ್ಗದ ಪ್ರವರ್ಗ-1ಕ್ಕೆ ಸೇರಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ 46 ಜಾತಿಗಳನ್ನೊಳಗೊಂಡ ಅಲೆಮಾರಿ ಕುಟುಂಬಗಳು, ಹಲವಾರು ವರ್ಷಗಳಿಂದ ಬೀದಿ ಬದಿಗಳಲ್ಲಿ ಸರಕಾರಿ, ಖಾಸಗಿ ಖಾಲಿ ನಿವೇಶನಗಳಲ್ಲಿ ಗುಡಿಸಲು-ಗುಡಾರಗಳನ್ನು ಕಟ್ಟಿಕೊಂಡು ಜೀವನೋಪಾಯಕ್ಕಾಗಿ ಹಳ್ಳಿಗಳ ಮೇಲೆ ವ್ಯಾಪಾರಕ್ಕಾಗಿ ಬಾಂಡೆ ವ್ಯಾಪಾರ ಸೂಜಿ-ದಾರ. ಪಿನ್ನು, ಟೇಪು, ಬೀಗ ರಿಪೇರಿ ಮಾಡುವುದು, ದನ-ಕುರಿ-ಮೇಕೆ ಹಂದಿ ಸಾಕಾಣಿಕೆ, ಬಲೆ ಹೆಣೆಯುವುದು, ಮೀನು ಹಿಡಿದು ಮಾರುವುದು. ಧಾರ್ಮಿಕ ಬಿಕ್ಷಾಟನೆ. ಭವಿಷ್ಯ ಹೇಳುವುದು, ಗಿಣಿ ಭವಿಷ್ಯ ಹೇಳುವುದು, ಬಳೆ ಇತ್ಯಾದಿಗಳನ್ನು ಮಾರುತ್ತಾ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಕಷ್ಟಕರ ಜೀವನವನ್ನು ನಡೆಸುತ್ತಿದ್ದಾರೆ.
ಬಹಳ ಮುಖ್ಯವಾಗಿ ನಮ್ಮ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ಕಾರಿ ಜಾಗದಲ್ಲಿ ಸುಮಾರು 10 ವರ್ಷಗಳಿಂದ ಮೇಲ್ಪಟ್ಟು ಗುಡಿಸಲು ಡೇರೆ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಆ ಜಾಗವನ್ನು ಅವರ ಹೆಸರಿಗೆ ಪಹಣಿ ಪತ್ರವನ್ನು ನೀಡುವುದು ಹಾಗೂ ಈ ಜನರಿಗೆ ರುದ್ರಭೂಮಿಗಾಗಿ ಸರ್ಕಾರಿ ಜಾಗವನ್ನು ಕಾಯ್ದಿರಿಸುವುದು. ಅಲೆಮಾರಿ ಜನರು ಹೆಚ್ಚಾಗಿ ವಾಸಿಸುತ್ತಿರುವ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯ ಭವನಗಳನ್ನು ನಿರ್ಮಿಸುವುದು, ಈ ಜನಾಂಗದ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ತೆರೆಯುವುದು. ಅಲ್ಲದೆ ಈ ಜನಾಂಗದವರಿಗೆ ಇಲಾಖೆ ನೀಡುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿಗಳಿಗೆ ನೀಡುವ ಶಾಲಾ ವರ್ಗಾವಣಾ ಪತ್ರದಲ್ಲಿ ಅವರ ಹೆಸರಿನ ಜೊತೆಗೆ ಜಾತಿ ಮತ್ತು ಪ್ರವರ್ಗವನ್ನು ಗುರುತಿಸಬೇಕು ಅಲ್ಲದೆ ಈ ಜನಾಂಗದವರಿಗೆ ಹೆಚ್ಚಿನ ಮೀಸಲಾತಿಯನ್ನು ನೀಡಬೇಕು ಎಂದು ಸರಕಾರವನ್ನು ಡಿಮ್ಯಾಂಡ್ ಮಾಡಿದರು. ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಅಲೆಮಾರಿ ವಿದ್ಯಾರ್ಥಿಗಳಿಗೆ ಯಾವುದೇ ತಾರತಮ್ಯ ಮಾಡದೆ ನೇರ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು. NEET ಮತ್ತು CET ಪರೀಕ್ಷೆಗೆ ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳಿಗೆ ನೀಡುವ ಮಾನದಂಡವನ್ನು ನಮ್ಮ ವಿದ್ಯಾರ್ಥಿಗಳಿಗೂ ನೀಡಬೇಕು. ಆಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ಕೂಡಲೇ ನೇಮಕಾತಿ ಮಾಡಿ ಹೆಚ್ಚಿನ ಅನುದಾನ ನೀಡಬೇಕು.
ಸನ್ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ 2024-2025ರ ಆಯವ್ಯಯದ ಪುಟ ಸಂಖ್ಯೆ 14, ಚುಕ್ಕೆ ಗುರುತು 2 ರಲ್ಲಿ ಸೂಚಿಸಿದಂತೆ ಅಲೆಮಾರಿ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಏಕಲವ್ಯ ಮಾದರಿಯ ವಸತಿ ಶಾಲೆಯಲ್ಲಿ 20 ಸೀಟು ಮೀಸಲು ಹಾಗೂ ಪಡಿತರ ಚೀಟಿ ಮುಂತಾದ ಸರ್ಕಾರಿ ದಾಖಲೆಗಳನ್ನು ಒದಗಿಸಲು ವಿಶೇಷ ಕೋಶ ಸ್ಥಾಪನೆ ಮತ್ತು ಪುಟ ಸಂಖ್ಯೆ 14ರ ಹಿಂದುಳಿದ ವರ್ಗಗಳ ಕಲ್ಯಾಣದ ಚುಕ್ಕೆ ಗುರುತು 5ರಲ್ಲಿ ಅಲೆಮಾರಿ. ಅರೆಅಲೆಮಾರಿ ಸ್ಥಿತಿಗತಿ ಅಧ್ಯಯನಕ್ಕಾಗಿ. ಅಭಿವೃದ್ಧಿಗಾಗಿ ಕರ್ನಾಟಕ ಅಲೆಮಾರಿ ಆಯೋಗ ರಚನೆ ಎಂದು ಸೂಚಿಸಿರುವುದು ಕೇವಲ ಆಯವ್ಯಯದ ಮುಖ್ಯಾಂಶಗಳಿಗೆ ಸೀಮಿತವಾಗಿದೆ ಹೊರತು ಅದು ಇಷ್ಟರವರೆಗೂ ಅನುಷ್ಠಾನಗೊಳ್ಳಲಿಲ್ಲ. ಸರಕಾರ ಈ ಮೇಲಿನ ಎಲ್ಲ ಅಂಶಗಳನ್ನು ನಮ್ಮ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಕ್ಷೇಮಾಭಿವೃದ್ಧಿಗಾಗಿ ಕೂಡಲೇ ಅನುಷ್ಟಾನಗೊಳಿಸಬೇಕೆಂದು ಒಕ್ಕೂಟದ ವತಿಯಿಂದ ಡೈಮಂಡ್ ಮಾಡುತ್ತಿದ್ದೇವೆ ಎಂದರು.ನಮ್ಮ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಸರ್ಕಾರಿ ಜಾಗದಲ್ಲಿ ಸುಮಾರು 10 ವರ್ಷಗಳಿಂದ ಮೇಲ್ಪಟ್ಟು ಗುಡಿಸಲು ಡೇರೆ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದವರಿಗೆ ಆ ಜಾಗವನ್ನು ಅವರ ಹೆಸರಿಗೆ ಪಹಣಿ ಪತ್ರವನ್ನು ನೀಡುವುದು.

  • ಅಲೆಮಾರಿ/ಅರೆ ಅಲೆಮಾರಿ ಜನರು ಹೆಚ್ಚಾಗಿ ವಾಸಿಸುತ್ತಿರುವ ನಮ್ಮ ರಾಜ್ಯದ ಜಿಲ್ಲೆಗಳಲ್ಲಿ ಅಲೆಮಾರಿ ಸಮುದಾಯ ಭವನಗಳನ್ನು ನಿರ್ಮಿಸುವುದು.
  • ಅಲೆಮಾರಿ/ಅರೆ ಅಲೆಮಾರಿ ಮಕ್ಕಳಿಗಾಗಿ ಪ್ರತೀ ಜಿಲ್ಲೆಗಳಲ್ಲಿ ವಸತಿ ಶಾಲೆಗಳನ್ನು ತೆರೆಯುವುದು.

ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ಅಲೆಮಾರಿ ವಿಧ್ಯಾರ್ಥಿಗಳಿಗೆ ಯಾವುದೇ ತಾರತಮ್ಯ ಮಾಡದೆ ಉಚಿತವಾಗಿ ನೇರ ಪ್ರವೇಶಾತಿಗೆ ಅವಕಾಶ ಕಲ್ಪಿಸಬೇಕು.

ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ಕೂಡಲೇ ನೇಮಕಾತಿ ಮಾಡಿ ಹೆಚ್ಚಿನ ಅನುದಾನ ನೀಡಬೇಕು. ಈ ನಿಗಮದಲ್ಲಿ ಅಲೆಮಾರಿ ಜನರಿಗೆ ಬೇಕಾದ ಭೂ, ಖರೀದಿ, ಗಂಗಾ ಕಲ್ಯಾಣ ಹಾಗೂ ಧನಸಹಾಯ ಮುಂತಾದ ಹೆಚ್ಚಿನ ಯೋಜನೆಗಳನ್ನು ನಿರ್ಧರಿಸಿ ಅನುಷ್ಠಾನಗೊಳಿಸಬೇಕು.

  • NEET ಮತ್ತು CET ಪರೀಕ್ಷೆಗೆ ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಗಳಿಗೆ ನೀಡುವ ಮಾನದಂಡವನ್ನು ನಮ್ಮ ವಿದ್ಯಾರ್ಥಿಗಳಿಗೂ ನೀಡಬೇಕು.
  • ಸರಕಾರ ಅಲೆಮಾರಿ/ಅರೆ ಅಲೆಮಾರಿ ಆಯೋಗವನ್ನು ಕೂಡಲೇ ಅನುಷ್ಠಾನಗೊಳಿಸಬೇಕು. ನಮ್ಮ ಅಲೆಮಾರಿ ಜನಾಂಗದಲ್ಲಿ ಬರುವ 46 ಜಾತಿಗಳ ಕುಲವಾ ಅಧ್ಯಯನವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳ ಉನ್ನತ ವಿದೇಶ ಶಿಕ್ಷಣ ಸಾಲಕ್ಕಾಗಿ ಇರುವಂತಹ ಮಾನದಂಡದ ಜಾಗತಿಕ ಅಂಕ ಶ್ರೇಣಿ 1000 2 ನ್ನ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ಯಾವುದೇ ಜಾಗತಿಕ ಅಂಕ ನಿರ್ಧರಿಸದೆ ವಿದೇಶಿ ಶಿಕ್ಷಣ ಸಾಲ ನೀಡಬೇಕು.

ಅಲೆಮಾರಿ/ಅರೆ ಅಲೆಮಾರಿ ಜನರಿಗೆ ನೀಡುವ ಜಾತಿ ಆದಾಯ ಮತ್ತು ಮರಣ ಪ್ರಮಾಣ ಪತ್ರ ನೀಡುವಾಗ ಅಧಿಕಾರಿ ವರ್ಗದವರು ನಮ್ಮವರನ್ನು ಸತಾಯಿಸದೆ ಸರಿಯಾಗಿ ಅವರ ಹೆಸರು ಜಾತಿ ಜನಾಂಗವನ್ನು ನಮೂದಿಸಿ ನೀಡಬೇಕು.

  • ಅಲೆಮಾರಿ/ಅರೆ ಅಲೆಮಾರಿ ಫಲಾನುಭವಿಗಳಿಗೆ ಭೂ ಖರೀದಿ ಯೋಜನೆಯಲ್ಲಿ ಮಂಜೂರಾದ ಸಾಲಕ್ಕೆ ಶೇಕಡಾ 25% ಸಬ್ಸಿಡಿ ಒದಗಿಸಬೇಕು.
  • ಅಲೆಮಾರಿ/ಅರೆ ಅಲೆಮಾರಿ ಜನಾಂಗದ ಜನರಿಗೆ ವೃದ್ಯಾಪ್ಯ ವೇತನ, ಅಂಗವಿಕಲರಿಗೆ, ಅನಾಥರಿಗೆ ರೂ. 2000/-ಗಳ ಮಾಶಾಸನ ಮಂಜೂರುಗೊಳಿಸಬೇಕು.
  • ಅಲೆಮಾರಿ/ಅರೆಅಲೆಮಾರಿ ಕುಟುಂಬಗಳಿಗೆ ತಲಾ ಒಂದು ಹೆಕ್ಟೇರನಂತೆ ಆಯಾ ಜಿಲ್ಲೆಯ ವ್ಯಾಪ್ತಿಯಲ್ಲಿ ಲಭ್ಯವಿರುವ ಸರಕಾರಿ ಜಮೀನು ಮಂಜೂರು ಮಾಡಬೇಕು.

ಕಲ್ಯಾಣ ಕರ್ನಾಟಕದ ಅಲೆಮಾರಿ/ಅರೆಅಲೆಮಾರಿ ಜನಾಂಗಗಳ ಅಭಿವೃದ್ಧಿಗಾಗಿ ಯೋಜನೆಯಲ್ಲಿ ವಾರ್ಷಿಕವಾಗಿ 500ಕೋಟಿ ಅನುದಾನ ಒದಗಿಸಬೇಕು.

  • ಅಲೆಮಾರಿ/ಅರೆಅಲೆಮಾರಿ ಜನಾಂಗವರೆಗೆ ಸರಕಾರದ ವಿವಿಧ ನೇಮಕಾತಿಯಲ್ಲಿ ವಿಶೇಷ ಮೀಸಲಾತಿ ನೀಡಬೇಕು. ಅಲೆಮಾರಿ ಕಲಾವಿದರಿಗೆ, ಮಶಾಸನ ಮಂಜೂರು ಮಾಡಬೇಕು
  • ಶಿಕ್ಷಣ ಮತ್ತು ಸರಕಾರಿ ಉದ್ದೇಶದಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗಕ್ಕೆ 10% ರಷ್ಟು ಮೀಸಲಾತಿ ಕಲ್ಪಿಸಬೇಕು.

ಸರಕಾರದ ವಿವಿಧ ನೇಮಕಾತಿ ಪ್ರಾಧಿಕಾರ (ಸಮಿತಿ)ಗಳಲ್ಲಿ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಓರ್ವರನ್ನು ನಾಮ ನಿದೇರ್ಶಕರನ್ನಾಗಿ ನೇಮಿಸಬೇಕು.
ಪತ್ರಿಕಾಗೋಷ್ಠಿಯಲ್ಲಿ ಕೆ. ರವೀಂದ್ರ ಶೆಟ್ಟಿ, ಮಂಗಳೂರು, ಗೌರವಾಧ್ಯಕ್ಷರು, ಪ್ರಕಾಶ್ ಎಂ. ಬೆಂಗಳೂರು, -ರಾಜ್ಯಾಧ್ಯಕ್ಷರು, ಪ್ರತಾಪ್ ಕುಮಾರ್ ಒ., ಚಿತ್ರದುರ್ಗ, ಪ್ರಧಾನ ಕಾರ್ಯದರ್ಶಿ, ಶ್ರೀನಿವಾಸ ಕಟ್ಟಿಮನಿ, ಕೊಪ್ಪಳ, ಪ್ರದಾನ ಸಂಚಾಲಕರು, ಬಿ.ಎನ್.ನಾರಾಯಣ ಸ್ವಾಮಿ, ಬೆಂಗಳೂರು, ಗೌರವ ಸಲಹೆಗಾರರು, ನಾರಾಯಣ ಸ್ವಾಮಿ, ಅಧ್ಯಕ್ಷರು, ಗ್ರಾಮಾಂತರ ಜಿಲ್ಲೆ, ಕುಮಾರ್ ವೈ, ಮೈಸೂರು ಉಪಸ್ಥಿತರಿದ್ದರು).
ಕೆ. ರವೀಂದ್ರ ಶೆಟ್ಟಿ, ಮಂಗಳೂರು ಗೌರವಾಧ್ಯಕ್ಷರು
ಪ್ರಕಾಶ್ ಎಂ. ಬೆಂಗಳೂರು ರಾಜ್ಯಾಧ್ಯಕ್ಷರು
ಪ್ರತಾಪ್ ಕುಮಾರ್ ಒ., ಚಿತ್ರದುರ್ಗ ಪ್ರಧಾನ ಕಾರ್ಯದರ್ಶಿ ವರದಿ ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button