ಸೇವಾ ಸಿರಿ ಟ್ರಸ್ಟ್ ನ ಪರಿಸರ ಕಾಳಜಿ ಶ್ಲಾಘನೀಯ: ಡಿ.ನಾಗವೇಣಿ

ಸೇವಾ ಸಿರಿ ಟ್ರಸ್ಟ್ ನ ಪರಿಸರ ಕಾಳಜಿ ಶ್ಲಾಘನೀಯ: ಡಿ.ನಾಗವೇಣಿ.

ಸಿಂಧನೂರು : ಗಿಡ ಮರಗಳ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಇಂದು ಸೇವಾ ಸಿರಿ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ವರ್ಷ ಸಾವಿರಾರು ಗಿಡಗಳನ್ನು ನೀಡುತ್ತೇವೆ.ಜನ ಜಾನುವಾರುಗಳಿಗೆ ಬಲಿಯಾಗುತ್ತಿರುವ ಗಿಡಗಳ ರಕ್ಷಣೆಗೆ ಸ್ಥಳೀಯರು ಕಾಳಜಿ ವಹಿಸಬೇಕು.ಪರಿಸರ ಸಂರಕ್ಷಣೆಯ ಬಗ್ಗೆ ಪ್ರತಿಯೊಬ್ಬರು ಆಸಕ್ತಿ ತೋರಿದಾಗ ಮಾತ್ರ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯ.ಸ್ವಚ್ಛ ಪರಿಸರವಿಲ್ಲದೆ ಮಾನವನ ಬದುಕು ಹಸನಾಗುವುದು ಅಸಾಧ್ಯ. ಪರಿಸರ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು, ಮಾನವ ಬದುಕಲು ಆಮ್ಲಜನಕ ಅವಶ್ಯ. ಇದು ಪರಿಸರದಿಂದಲೇ ದೊರೆಯುತ್ತದೆ. ಪರಿಸರ ಅಸಮತೋಲನವಾದರೆ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತವೆ. ಇವುಗಳನ್ನು ತಡೆಯಲು ಅರಣ್ಯವನ್ನು ಉಳಿಸಿ ಬೆಳೆಸಬೇಕು ಎಂದು ಮಾತನಾಡಿ
ಗಿಡ ಮರಗಳಿಂದ ಪರಿಸರವು ಹಸಿರಾಗುತ್ತದೆ ಇದು ಜೀವಿಗಳ ಉಗಮಕ್ಕೆ ಕಾರಣವಾಗುತ್ತದೆ ಗಿಡಮರಗಳು ಇದ್ದಾಗ ಕಾಡು ಬೆಳೆಯಲು ಸಾಧ್ಯ ,ಕಾಡು ಇದ್ದರೆ ನಾಡು ಸಮೃದ್ಧಿಯಾಗುತ್ತದೆ, ಆದರೆ ಪ್ರಸ್ತುತ ಮನುಷ್ಯರ ದುರಾಸೆಗೆ ಕಾಡು ಬಲಿಯಾಗುತ್ತಿದೆ.ಹಾಗಾಗಿ ವನ್ಯಪ್ರಾಣಿಗಳು ನಾಡಿನತ್ತ ಆಗಮಿಸುತ್ತಿವೆ ಎಂದು ಸಾಮಾಜಿಕ ಹೋರಾಟಗಾರ್ತಿ ಸಮಾಜ ಸೇವಕರಾದ ಶ್ರೀಮತಿ ನಾಗವೇಣಿ ಎಸ್ ಪಾಟೀಲ್ ಅವರು ಕಳವಳ ವ್ಯಕ್ತಪಡಿಸಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಇಂದಿನ ದಿನಗಳಲ್ಲಿ ಪರಿಸರದ ಕಾಳಜಿ ಮನುಷ್ಯನಲ್ಲಿ ಕ್ಷಿಣಿಸುತ್ತಿದ್ದು ಪ್ರತಿಯೊಬ್ಬರು ಪರಿಸರವನ್ನು ಉಳಿಸುವ ಬೆಳಸುವ ನಿಟ್ಟಿನಲ್ಲಿ ಸಾಗಬೇಕಿದೆ ಅಷ್ಟೇ ಅಲ್ಲದೆ ನಮ್ಮ ಆಚರಣೆಗಳನ್ನು ಹುಟ್ಟುಹಬ್ಬ ವಿವಾಹ ವಾರ್ಷಿಕೋತ್ಸವ ಮುಂತಾದ ದಿನಾಚರಣೆಗಳನ್ನು ಆಚರಿಸುವಾಗ ಕನಿಷ್ಠ ಒಂದು ಗಿಡವನ್ನಾದರು ನೆಟ್ಟು ಪಾಲನೆ ಪೋಷಣೆ ಮಾಡಿದರೆ ಮುಂದಿನ ಪಿಳಿಗೆಗೆ ಪರಿಸರದ ಬಹುದೊಡ್ಡ ಉಡುಗೊರೆ ಕೊಟ್ಟಂತೆ ಆಗುತ್ತದೆ ಎಂದು ಸೇವಾ ಸಿರಿ ಟ್ರಸ್ಟ್ ನ ಸಂಸ್ಥಾಪಕರಾದ ಪ್ರದೀಪ್ ಪೂಜಾರಿಯವರು ಮಾತನಾಡಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ಬಸವರಾಜ್ ,ಚನ್ನಬಸವ ,ದೊಡ್ಡ ಬಸವ,ದರ್ಶನ,ಸಮೀರ್,ದುರ್ಗೇಶ,ಜಾವೀದ್, ಸೇವಾ ಸಿರಿ ಟ್ರಸ್ಟ್ ನ ಸರ್ವ ಸದಸ್ಯರು ಮತ್ತು ಪರಿಸರ ಪ್ರೇಮಿಗಳು ಉಪಸ್ತಿದ್ದರು.
ವರದಿ: ವಿಜಯ್ ಕುಮಾರ್ ಹಿರೇಮಠ್



