ಸಂಪಾದಕೀಯ

ಗೌರವಾನ್ವಿತ ಡಿವಿಜನಲ್ ಕಂಟ್ರೋಲರ್ ಕೆ.ಕೆ.ಆರ್‌.ಟಿ.ಸಿ. ಬೀದರ್ ವಿಭಾಗ, ಬೀದರ್. ಮತ್ತು ವಿವೇಕ ಶೂನ್ಯ ಹುಮನಾಬಾದ ಡಿಪೋ ಮ್ಯಾನೇಜರ್.

ಗೌರವಾನ್ವಿತ ಡಿವಿಜನಲ್ ಕಂಟ್ರೋಲರ್ ಕೆ.ಕೆ.ಆರ್‌.ಟಿ.ಸಿ. ಬೀದರ್ ವಿಭಾಗ, ಬೀದರ್.

ಮತ್ತು ವಿವೇಕ ಶೂನ್ಯ ಹುಮನಾಬಾದ ಡಿಪೋ ಮ್ಯಾನೇಜರ್.

ಸಾರ್ವಜನಿಕರ ಪರವಾಗಿ ಬಹಿರಂಗ ಪತ್ರ.

ಸನ್ಮಾನ್ಯರೇ ದಿನಾಂಕ 18 ಆಗಸ್ಟ್ 2025 ರಂದು ಕಲ್ಯಾಣ ಕರ್ನಾಟಕ ಸಾರಿಗೆ ಬೀದರ್ ಜಿಲ್ಲೆ, ಹುಮ್ನಾಬಾದ್ ಡಿಪೋ ಬಸ್ ಸಂಖ್ಯೆ ಕೆ ಏ 38. ಎಫ್ 1276. ಹುಮ್ನಾಬಾದ್ ದಿಂದ ಬೆಂಗಳೂರಿಗೆ ಹೊರಟಿದ್ದ ಬಸ್ಸು ಹತ್ತಿಕೊಂಡು ಕುಳಿತೆನು. ದುರದೃಷ್ಟವೋ ಏನೋ…. ಬಸ್ ಲಿಂಗಸೂರು ಪಟ್ಟಣಕ್ಕೆ ಬಂದಾಗ ಬಸ್ಸಿನ ಎ.ಡಿ.ಸಿ. ಗೆ ವೈರಸ್ ಅಟ್ಯಾಕ್ ಆಗಿ ಬಸ್ಸು ತೀರಾ ನಿಧಾನವಾಗಿ ಚಲಿಸಲಾರಂಭಿಸಿತು.

ಡ್ರೈವರ್ ಕಂಡಕ್ಟ್ರುಗಳು ಲಿಂಗಸೂರು ಬಸ್ ಡಿಪೋಕ್ಕೆ ಹೋಗಿ ಬಸ್ಸಿನಲ್ಲಾಗಿರುವ ತೊಂದರೆಯನ್ನು ಅಲ್ಲಿಯ ಸಿಬ್ಬಂದಿಗಳಿಗೆ ಹೇಳಿದರು ಆದರೆ ರಾತ್ರಿ 8 ಗಂಟೆ ಆಗಿದ್ದಕ್ಕೆ ಅಲ್ಲಿ ಸಂಬಂಧಿಸಿದ ಸಿಬ್ಬoಧಿ ಇಲ್ಲದ ಕಾರಣ ಅವರು ಅಸಹಾಯಕರಾಗಿ ಮಸ್ಕಿ ಬಸ್ ಡಿಪೋಕ್ಕೆ ಹೋಗಲು ಹೇಳಿದರು. ಲಿಂಗಸೂಗೂರ್ ಡಿಪೋನಲ್ಲಿ ಮುಕ್ಕಾಲು ಗಂಟೆ ತಡವಾಯಿತು.

ಬಸ್ ಸಾವಕಾಶವಾಗಿ ಚಳಿಸುತ್ತಾ ಮಸ್ಕಿ ಡಿಪೋಕೆ ತಂದು ಡ್ರೈವರ್ ಗಳಿಬ್ಬರು ಅಲ್ಲಿ ವಿಚಾರಿಸಿದಾಗ ಎ.ಡಿ.ಸಿ ವೈರಸ್ ಸರಿಪಡಿಸುವ ಸಿಬ್ಬಂದಿ ಇದ್ದರು. ಅವರು ಒಂದು ಗಂಟೆ ಮೂವತ್ತು ನಿಮಿಷ ಶ್ರಮವಹಿಸಿ ತಾತ್ಪರ್ತಿಕವಾಗಿ ರಿಪೇರಿ ಮಾಡಿ ಕೊಟ್ಟು ಬಸ್ಸು ಪ್ರಯಾಣಿಸಲು ಅನುವು ಮಾಡಿಕೊಟ್ಟರು.

ಸಿಂಧನೂರು ಪಟ್ಟಣಕ್ಕೆ ಬಂದಾಗ ಡೀಸೆಲ್ ಫಿಲ್ಟರ್ ನಲ್ಲಿ ನೀರು ಸೇರಿದೆ ತೊಂದರೆಯಾಗುತ್ತಿದೆ ಎಂದು ಅಲ್ಲಿ 1 ಗಂಟೆ ಬಸ್ ನಿಲ್ಲಿಸಿ ಚೆಕ್ ಮಾಡಿ ಮುಂದೆ ನಡೆದೆವು.

ಅತೀ ಮಳೆಗಾಲ ಕೆಟ್ಟ ಗುಂಡಿಗಳಿಂದ ರಸ್ತೆ ಹದಗೆಟ್ಟ ಕಾರಣ ನಮ್ಮ ಬಸ್ ಬಳ್ಳಾರಿ ನಗರಕ್ಕೆ ಬರುವಷ್ಟರಲ್ಲಿ ಬೆಳಿಗ್ಗೆ 5.30 ಗಂಟೆಯಾಗಿತ್ತು . ಬಳ್ಳಾರಿಯಿಂದ ಸ್ವಲ್ಪ ಮುಂದೆ ಹೋದಾಗ ಬಸ್ ನ ಹಿಂದಿನ ಚಕ್ರದ ಒಂದು ಟೈರ್ ಪಂಚರ್ ಆಯ್ತು. ಬಸ್ ಹಿಂದೆ ಬಳ್ಳಾರಿಗೂ ಬರುವಂತಿಲ್ಲ ಮುಂದೆ ಹೋಗುವಂತಿಲ್ಲ. ಆ ವೇಳೆಯಲ್ಲಿ ಖಾಸಗಿ ಪಂಚರ್ ಗ್ಯಾರೇಜ್ ನಲ್ಲಿ ರಿಪೇರಿ ಮಾಡಿಸಲು ಕಂಡಕ್ಟ್ರು ಗಳಿಬ್ಬರು ತುಂಬಾ ಪ್ರಯತ್ನಿಸಿದರು ಒಂದೂ ಗ್ಯಾರೇಜ್ ಓಪನ್ ಇಲ್ಲ. ಡ್ರೈವರ್ಗಳು ಸಾವಕಾಶವಾಗಿ ಡ್ರೈವ್ ಮಾಡುತ್ತಾ ಚಳ್ಳಿಕೇರಿ ಪಟ್ಟಣದ ಸಮೀಪದ ಗ್ಯಾರೇಜಿನಲ್ಲಿ ಟೈಯರ್ ಪಂಚರ್ ಸರಿಪಡಿಸಲು ನಿಲ್ಲಿಸಿದರು. ಯಾವುದೇ ತರಹದ ಗ್ಯಾರಂಟಿ ಇಲ್ಲದ ತುಂಬಾ ಸವೆದು ಹೋಗಿರುವ ಟೈರಿನ ಪಂಚರ್ ಹಾಕಲು ಗ್ಯಾರೇಜಿನ ವ್ಯಕ್ತಿ ತಯಾರಿಲ್ಲ ಯಾಕೆಂದರೆ ಟೈರುಗಳು ತುಂಬಾ ಸವಿದು ಕೆಲಸಕ್ಕೆ ಬಾರದಂತಾಗಿದೆ. ನಾನು ಕಣ್ಣಾರೆ ನೋಡಿದೆ. ಡ್ರೈವರ್ ಗಳಿಬ್ಬರು ಅವರಿಗೆ ರಿಕ್ವೆಸ್ಟ್ ಮಾಡಿ ಟೈಯರ್ ಪಂಚರ್ ಹಾಕಿಸಿದರು ಅಲ್ಲಿ ಎರಡು ಗಂಟೆ 30 ನಿಮಿಷ ತಡವಾಯಿತು.

ಅಲ್ಲಿಂದ ನಮ್ಮ ಪ್ರಯಾಣ ಮುಂದುವರೆಯಿತು ಹಿರಿಯೂರು ದಾಟಿದ ನಂತರ ಎಡಿ ಸಿ ವೈರಸ್ ಮತ್ತೆ ಅಟ್ಯಾಕ್ ಆಗಿ ಬಸ್ಸು ಚಲಿಸುವುದು ನಿಧಾನವಾಯಿತು.

ಡ್ರೈವರ್ ಗಳಿಬ್ಬರೂ ಹರಸಾಹಸ ಪಟ್ಟು ಶ್ರಮವಹಿಸಿ ಹಾಗೂ ಹೀಗೂ ಮಧ್ಯಾಹ್ನ 2. 30ಕ್ಕೆ ಬೆಂಗಳೂರು ಮಹಾನಗರದ ಮೆಜೆಸ್ಟಿಕ್ಗೆ ಬಸ್ ತಂದುಬಿಟ್ಟರು ಹಿಂದಿನ ದಿನ ಸಾಯಂಕಾಲ 5:30 ಗಂಟೆಗೆ ಕಲಬುರಗಿಯಿಂದ ಹೊರಟ ಬಸ್ ಮರುದಿನ ಮಧ್ಯಾನ್ಹ 2 ಗಂಟೆಗೆ ಬೆಂಗಳೂರು ತಲುಪಿದಾಗ ಎಲ್ಲಾ ಪ್ರಯಾಣಿಕರು ಊಟ, ನಿದ್ರೆ ಇಲ್ಲದೆ ಸುಸ್ತಾಗಿದ್ದರು.

ಮಾನ್ಯರೇ, ಹುಮನಾಬಾದ್ ಡಿಪೋ ಮ್ಯಾನೇಜರ್ ರಿಗೆ ಬುದ್ದಿ ಹೇಳಿರಿ.

700 ಕಿಲೋಮೀಟರು ಚಲಿಸುವ ಬಸ್ಸು ಯಾವ ಕಂಡೀಷನಲ್ಲಿ ಇರಬೇಕೆಂಬುದು ತಮಗೆ ತಿಳಿಸುವ ಅಗತ್ಯವಿಲ್ಲ.

ಕೆ. ಕೆ. ಆರ್. ಟಿ. ಸಿ.ಹುಮನಾಬಾದ ಬಸ್ ಡಿಪೋ ಮ್ಯಾನೇಜರ್ ಅವರಿಗೆ ಸ್ವಲ್ಪವಾದರೂ ವಿವೇಕ,ಕನಿಷ್ಠ ಜ್ಞಾನ, ಬೇಡವೇ?

1) ಹುಮನಾಬಾದ ದಿಂದ ಬೆಂಗಳೂರು ಸುಮಾರು 700 ಕಿ.ಮೀ ( ಹೋಗಿ-ಬರುವುದು ಸೇರಿದರೇ 1400 ಕಿ ಮಿ.). ದೂರದ ರಹದಾರಿಗೆ ಯಾವ ಕಂಡೀಷನ್ನಲ್ಲಿರುವ ಬಸ್ ಓಡಿಸಬೇಕು ಎನ್ನುವ ಕನಿಷ್ಠ ಜ್ಞಾನ ಇರಬೇಕಾಗಿತ್ತು.

2) ಹುಮನಾಬಾದ ದಿಂದ ಬೆಂಗಳೂರಿಗೆ ಸುಮಾರು 16 ಗಂಟೆಯ ಪ್ರಯಾಣ. ಆದರೆ 22 ಗಂಟೆಗೂ ಹೆಚ್ಚು ವೇಳೆ ತೆಗೆದುಕೊಂಡಿದೆ ಅಂದರೆ ಸುಮಾರು 6 ಗಂಟೆ ತಡವಾಗಿ ಬೆಂಗಳೂರು ತಲುಪೀದೆ ಇದಕ್ಕೆ ಕಾರಣ

(1) ತುಂಬಾ ಹಳೆಯದಾದ ಬಸ್. (2) ಸವೆದು ಹೋಗಿರುವ ಟೈರುಗಳು (3) ಸರಿಯಾಗಿ ಚೆಕ್ ಮಾಡದೇ ಎ. ಡಿ. ಸಿ. ವೈರಸ್ ನಿಂದ ನಲುಗಿರುವ ಇಂಜಿನ್ (4) ವಿವೇಕ ಶೂನ್ಯ ಡಿಪೋ ಮ್ಯಾನೇಜರರ ಕೆಟ್ಟ ಆಡಳಿತ, ಮುಂಜಾಗ್ರತೆ ಇಲ್ಲದಿರುವುದು. (5) ಮoಕಾಗಿರುವ ಹೆಡ್ ಲೈಟ್ಗಳು (6) ಲಾoಗ ರೂಟಗೆ ಹೋಗುವ ಬಸ್ಗಳನ್ನು ಸರಿಯಾಗಿ ಚೆಕ್ ಮಾಡದೆ ರಸ್ತೆಗೆ ಬಿಡುವ ನಿಷ್ಠಾಳಜಿ, ಸೋಮಾರಿ, ಡಿಪೋ ಮ್ಯಾನೇಜರ್ ಮತ್ತು ಸಿಬ್ಬಂಧೀಗಳ ಬೇಜವಾಬ್ದಾರಿತನದಿಂದಾಗಿ ದುಡ್ಡು ಕೊಟ್ಟು ಪ್ರಯಾಣಿಸುವ ಪ್ರಯಾಣಿಕರ ಪಾಡೇನು?

ವಯಸ್ಸಾದವರು, ಬಿ. ಪಿ. ಶುಗರ್, ಇನ್ನಿತರ ಕಾಯಿಲೆಗಳಿಂದ ನರಳುತ್ತಿರುವವರು ಕಾಲ ಕಾಲಕ್ಕೆ ಔಷಧಿ ತೆಗೆದುಕೊಳ್ಳುವ ಅನಿವಾರ್ಯತೆ ಇರುವ ಪ್ರಯಾಣಿಕರನ್ನು ಆ ದೇವರೇ ಕಾಪಾಡಬೇಕು. ಹೆಂಗಸರು, ಮಕ್ಕಳು, ಊಟ, ನಿದ್ರೆ, ಟೀ, ಕಾಫಿ, ತಿಂಡಿ ಇಲ್ಲದೆ 24 ಗಂಟೆ ಬಸ್ಸಿನಲ್ಲಿಯೇ ಗೋಳಾಡಿದರು. ದಿನಾಂಕ್ 19/08/2925 ರಂದು ಡ್ಯೂಟಿಗೆ ಜಾಯಿನ ಆಗಬೇಕಾಗಿರುವ ಸರಕಾರಿ ನೌಕರ ಲಭೋ ಲಭೋ ಎಂದು ಬಡಿದುಕೊಳ್ಳುತ್ತಾ ಇದ್ದನು.19/98/2025 ಕ್ಕೆ ಬೆಂಗಳೂರಿನ ಕೋರ್ಟಿಗೆ ಹಾಜರಾಗಬೇಕಿದ್ದ ನನ್ನ ಪಾಡು ನಾಯಿ ಪಾಡಾಯಿತು.ಒಬ್ಬೊಬ್ಬರ ಸಮಸ್ಯೆ ಒಂದೊಂದು ತೇರನಾಗಿತ್ತು ಇದಕ್ಕೆಲ್ಲ ಹುಮನಾಬಾದ ಡಿಪೋ ಮ್ಯಾನೇಜರ್ ಮತ್ತು ಡಿಪೋ ಸಿಬ್ಬಂಧಿಗಳೇ ಕಾರಣರು.

ಕರ್ನಾಟಕ ಸಾರಿಗೆ ಸಾರ್ವಜನಿಕರ ಸೌಕರ್ಯಕ್ಕಾಗಿ ಇರುವಂತಹದು ಕರ್ನಾಟಕ ರಾಜ್ಯದಲ್ಲಿ ಪ್ರಯಾಣಿಕರಿಗೆ ಒಳ್ಳೆಯ ಸೌಕರ್ಯ ಒದಗಿಸುತ್ತಿದೆ ಎಂದು ಕೇಂದ್ರದಿಂದ ಸುಮಾರು ಬಾರಿ ಪ್ರಶಸ್ತಿ ಪಡೆದ ಹೆಮ್ಮೆಯ ಸಾರಿಗೆ ಸಂಸ್ಥೆಯಾಗಿದೆ. ಆದರೆ ಸಂಸ್ಥೆಯ ಹಲವಾರು ಅಧಿಕಾರಿಗಳು ಸಿಬ್ಬಂದಿಗಳ ಎಡಬಿಡಂಗಿತನದಿಂದಾಗಿ ಪ್ರಯಾಣಿಕರು ನಲುಗುತ್ತಿದ್ದಾರೆ.

ಹುಮನಾಬಾದ ಡಿಪೋದ ವಿವೇಕ ಶೂನ್ಯ ಮ್ಯಾನೇಜರ್ ಅವರ ಮೇಲೆ ಕಾನುನೂ ಕ್ರಮ ತೆಗೆದುಕೊಂಡು ಅವ್ರಿಗೆ ವರ್ಗಾಯಿಸಿ ಆಡಳಿತ ವಿಭಾಗದಲ್ಲಿ ಕೆಲಸ ಕೊಡಿ ಕಾರಣ ಈ ಅಧಿಕಾರಿಗೆ ಆಡಳಿತ ನಡೆಯಿಸುವ ಜ್ಞಾನವಿಲ್ಲ.

ಮಾನ್ಯರೇ ಸಾರ್ವಜನಿಕರೊಂದಿಗೆ ತಮ್ಮ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ ತಮ್ಮ ಹೃದಯ ವೈಶಾಲ್ಯಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನನ್ನ ಮನವಿಗೆ ತಾವು ಸ್ಪoಧಿಸಿದ ರೀತಿ, ತಮ್ಮ ಹೃದಯ ವೈಶಾಲ್ಯಾಕ್ಕೆ ನಾನು ಧನ್ಯವಾದಗಳನ್ನು ಹೇಳುತ್ತೇನೆ.

ಕಾರಣ ಇದೇ ಬಸ್ಸಿನಲ್ಲಿ ನಾನು ಕಲಬುರ್ಗಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೇನು. ಬಸ್ ಕಲಬುರ್ಗಿ ಬಸ್ ಸ್ಟ್ಯಾಂಡಿಗೆ ಐದು ಗಂಟೆಗೆ ಬಂದಾಗ ಅದರಲ್ಲಿ ಹತ್ತಿ ಕುಳಿತು ಬೆಂಗಳೂರಿಗೆ ಪ್ರಯಾಣಿಸಿದನು. ಬಸ್ಸಿನಲ್ಲಿ ಒಂದೇ ಒಂದು ಸೀಟ್ ಖಾಲಿ ಇತ್ತು, ಆ ಸೀಟ್ ಅಸ್ತವ್ಯಾಸ್ತವಾಗಿದ್ದು ಕಲ್ಬುರ್ಗಿಯಿಂದ ಹಿರಿಯ ನಾಗರಿಕನಾದ ನಾನು ಸುಮಾರು 14 ಗಂಟೆಯವರೆಗೆ ಅದೇಗೆ ಪ್ರಯಾಣಿಸಬೇಕಪ್ಪ ಎಂದು ಚಿಂತಿಸುತ್ತಿದ್ದೇನು. ತಮ್ಮ ಇಲಾಖೆ ಅಧಿಕಾರಿಗಳ ನೆನಪಾಯಿತು. NETನಲ್ಲಿ ಅಧಿಕಾರಿಗಳ ಮೊಬೈಲ್ ಸಂಖ್ಯೆ ಹುಡುಕುತ್ತಾ ಹಲವಾರು ಅಧಿಕಾರಿಗಳನ್ನು ಮಾತನಾಡಿಸಿದೆನು. ನನಗೆ ಸಂಬಂಧಿಸಿದ ಸಮಸ್ಯೆಗೆ ಅವರಿಂದ ಉತ್ತರಿಸಲಾಗಲಿಲ್ಲ. ಕಾರಣ ನನ್ನ ಸಮಸ್ಯೆ ಅವರಿಗೆ ಸಂಬಂಧಿಸಿದ್ದಾಗಿರಲಿಲ್ಲ. ನಿರಾಶನಾಗಿ ಕುಳಿತಿದ್ದಾಗ ನನ್ನ ಫೋನ್ ರಿಂಗಣಿಸಲಾರಂಭಿಸಿತ್ತು. ಕಾಲ್ ಪಿಕ್ ಮಾಡಿ ಹಲೋ ಎಂದಾಗ ಆ ಕಡೆಯಿಂದ ” ಹಲೋ ತಾವ್ಯಾರು ಈ ನಂಬರಿನಿಂದ ನನಗೆ ಮಿಸ್ ಕಾಲ್ ಬಂದಿತ್ತು ” ಎಂದರು ಆಗ ನಾನು ಬೀದರ್ ಜಿಲ್ಲಾ ಡಿವಿಜನಲ್ ಕಂಟ್ರೋಲ್ ಅವರ ಜೊತೆಗೆ ಮಾತನಾಡಬೇಕಾಗಿತ್ತು ಎಂದೇನು. ಅದು ನಾನೇ ಹೇಳಿ ಏನಾಗಬೇಕಾಗಿತ್ತು ಎಂದು ಕೇಳಿದರು. ನನ್ನ ಸಮಸ್ಯೆಯನ್ನು ಹೇಳಿದಾಗ ಬಸ್ಸಿನಲ್ಲಿರುವ ಡ್ರೈವರ್ ಅಥವಾ ಕಂಡಕ್ಟರಿಗೆ ನಿಮ್ಮ ಫೋನ್ ಕೊಡಿ ಎಂದರು. ಆಗ ನಾನು ಬಸ್ ಡ್ರೈವರ್ ಅವರಿಗೆ ಫೋನ್ ಕೊಟ್ಟೇನು. ಅವರು ಡ್ರೈವರ್ಗೆ ಏನು ಹೇಳಿದರೋ ಗೊತ್ತಿಲ್ಲ ಆದರೇ, ಆ ಬಸ್ಸಿನ 2 ಜನ ಡ್ರೈವರಗಳು ತಕ್ಷಣವೇ ನನಗೆ ಒಂದು ಸೀಟಿನ ವ್ಯವಸ್ಥೆ ಮಾಡಿ ಬೆಂಗಳೂರು ವರೆಗೆ ಪ್ರಯಾಣಕ್ಕೆ ನನಗೆ ತೊಂದರೆ ಆಗದಂತೆ ನೋಡಿಕೊಂಡರು. ಆ ಡ್ರೈವರ್ಗಳ ಹೆಸರು ಸಂಜೀವ್ ಮತ್ತು ಗುಂಡಪ್ಪ ಎಂದು ಆ ನಂತರ ನನಗೆ ತಿಳಿಯಿತು.

ತಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button