ಪತ್ರಿಕೋದ್ಯಮ

ಒಳ ಮೀಸಲಾತಿ ಜಾರಿಗೆ ತಂದಂತಹ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಡಾ . ಡಿ . ಜಿ . ಸಾಗರ್ ಬೆಂಗಳೂರು.

ಒಳ ಮೀಸಲಾತಿ ಜಾರಿಗೆ ತಂದಂತಹ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಡಾ . ಡಿ . ಜಿ . ಸಾಗರ್ ಬೆಂಗಳೂರು.ಒಳ ಮೀಸಲಾತಿ ಜಾರಿಗೆ ತಂದಂತಹ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಡಾ . ಡಿ . ಜಿ . ಸಾಗರ್ ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ತಿಳಿಸಿದರು .
ಮೇಲ್ಕಂಡ ವಿಷಯಕ್ಕೆ‌ ಸಂಬಂಧಿಸಿದಂತೆ ಪರಿಶಿಷ್ಟ ಸಮುದಾಯಗಳ ಮೂರು ದಶಕಗಳ ಕಾಲದ ಬೇಡಿಕೆ ಹಾಗೂ ಹೋರಾಟ ಕೊನೆಗೂ ಗೆಲವು ಕಂಡಿದೆ ಒಳಮೀಸಲಾತಿ ಹಂಚಿಕೆಯ ಮಹತ್ತರ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟಕೈಗೊಂಡಿದೆ. ಪರಿಶಿಷ್ಟ ಜಾತಿಗಳನ್ನು ಮೂರು ವರ್ಗಿಕರಣ ಮಾಡಿ ಶೇ 17%ರಷ್ಟು ಎಸ್.ಸಿ ಮೀಸಲು ಪ್ರಮಾಣವನ್ನು ಬಲಗೈ ಹೊಲೆಯ/ಛಲವಾದಿಗೆ ಶೇ-6% ಹಾಗೂ ಎಡಗೈ ಮಾದಿಗ ಜನಾಂಗಕ್ಕೆ ಶೇ-6% ಹಾಗೂ ಸ್ಪೃಶ್ಯ ಜಾತಿಗಳಿಗೆ ಶೇ-5% ಒಳಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ.
ಇಂತಹ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿರುವ ಸಾಮಾಜಿಕ ನ್ಯಾಯದ ಹರಿಕಾರ, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರಿಗೂ ನಮ್ಮ ಸಮುದಾಯದ ಸಚಿವರುಗಳಿಗೂ ಮತ್ತು ಸಭೆಯಲ್ಲಿ ಹಾಜರಿದ್ದ ಎಲ್ಲಾ ಸಚಿವರಿಗೂ ನಮ್ಮ ಸಮಿತಿಯಿಂದ ಮತ್ತು ನಾಡಿನ ಎಲ್ಲಾ ಜನತೆಯ ಪರವಾಗಿ ಹೃದಯಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು . ಡಾ. ಡಿ ಜಿ ಸಾಗರ್ ಡಿ ಎಸ್ ಎಸ್ ರಾಜ್ಯ ಸಂಚಾಲಕರಾದ ಮಂಜುನಾಥ ಅಣ್ಣಯ್ಯ, ಮಾರುತಿ ಬೌಧೆ, ವೈ ಸಿ ಮಯೂರ್ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button