ಸೆಪ್ಟಂಬರ್ 22 2025ರಿಂದ ಅಕ್ಟೋಬರ್ 7 ರವರೆಗೆ ನಡೆಸಲಿರುವ ಸಮೀಕ್ಷಾ ಕಾರ್ಯಕ್ಕೆ ಶಿಕ್ಷರನ್ನು ಗಣತಿ ಮಾಡಲು ನೇಮಕ ಮಾಡಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಇದೇ ಸೆಪ್ಟಂಬರ್ 22 2025ರಿಂದ ಅಕ್ಟೋಬರ್ 7 ರವರೆಗೆ ನಡೆಸಲಿರುವ ಸಮೀಕ್ಷಾ ಕಾರ್ಯಕ್ಕೆ ಶಿಕ್ಷರನ್ನು ಗಣತಿ ಮಾಡಲು ನೇಮಕ ಮಾಡಿಕೊಳ್ಳಲಾಗಿದೆ. ಅವರು ಮನೆ ಮನೆಗೂ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಮಾಹಿತಿ ಪಡೆಯಲು 60 ಕಾಲಂಗಳು ಇದ್ದು, ಪ್ರತಿ ಕುಟುಂಬದ ಮುಖ್ಯಸ್ಥರು ಅವರ ಮತ್ತು ಅವರ ಕುಟುಂಬದ ಸದಸ್ಯರುಗಳ ವೃತ್ತಿ, ಕಸುಬು, ವಿದ್ಯಾರ್ಹತೆ, ಸಕಾರಿ ಸೌಲಭ್ಯಗಳನ್ನು ಪಡೆದಿರುವ ಬಗ್ಗೆ, ಜಾತಿ, ಉಪಜಾತಿ ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ಸಮೀಕ್ಷೆಯ ಮುಖ್ಯ ಉದ್ದೇಶ ರಾಜ್ಯದಲ್ಲಿರುವ ನಾಗರೀಕರ ಪ್ರತಿ ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿಯಲು ಈ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಈ ರೀತಿ ಸಂಗ್ರಹಿಸಿದ ಮಾಹಿತಿಯನ್ನು ಅವಲೋಕಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಸಕಾರದ ವಿವಿಧ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲವಾಗುವಂತೆ ನಿಖರ ಮಾಹಿತಿಯನ್ನು ಪಡೆಯಲು ಉದ್ದೇಶಿಸಿದೆ. ಆದ್ದರಿಂದ ಈ ಸಮೀಕ್ಷಾ ಕಾರ್ಯಕ್ರಮದಲ್ಲಿ ಎಲ್ಲಾರೂ ಭಾಗವಹಿಸಿ ಗಣತಿದಾರರಿಗೆ ನಿಖರ ಮಾಹಿತಿಯನ್ನು ನೀಡಿ ಈ ಸಮೀಕ್ಷಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಈ ಮೂಲಕ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಕೋರುತ್ತೇವೆ.
ಆದರೆ ಕೆಲವು ಪ್ರಬಲ ಜಾತಿಗಳ ಮುಖಂಡರುಗಳು ಸಮಾಜದಲ್ಲಿ ತಪ್ಪು ಮಾಹಿತಿಗಳನ್ನು ನೀಡಿ ಪ್ರಚಾರ ಮಾಡುತ್ತಿದ್ದು, ತಮ್ಮ ಜಾತಿಗಳು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಉದ್ದೇಶವನ್ನು ಹೊಂದಿರುತ್ತಾರೆ. ಇದೇ ರೀತಿ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆಯನ್ನು ತೋರಿಸಿಕೊಳ್ಳಲು ಹಲವಾರು ಕುತಂತ್ರಗಳನ್ನು ಮಾಡುವ ಸಂಭವವಿರುತ್ತದೆ.
ಆಯೋಗ ಮತ್ತು ರಾಜ್ಯ ಸರ್ಕಾರವು ಇಂತಹ ಕುತಂತ್ರಗಳನ್ನು ತಡೆಯಲು ಕ್ರಮವಹಿಸಬೇಕು. ಪ್ರಬಲ ಜಾತಿಗಳು ಈ ಹಿಂದೆ ರಾಜ್ಯದಲ್ಲಿ ನಡೆದಿರುವ ಇಂತಹ ಹಲವಾರು ವರದಿಗಳನ್ನು ವಿರೋದಿಸುತ್ತಾ ಬಂದಿರುತ್ತವೆ. ೨೦೧೪-೧೫ರಲ್ಲಿ ಸಮೀಕ್ಷೆ ನಡೆಯುವಾಗಲು ನ್ಯಾಯಾಲಯದ ಮೋರೆ ಹೋಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿರುತ್ತಾರೆ. ಆದ್ದರಿಂದ ನಮಗೆ ನ್ಯಾಯಾಲಯಗಳ ಮೇಲೆ ನಂಬಿಕೆ ಇದ್ದು, ಹಿಂದುಳಿದವರ ರಕ್ಷಣೆಯನ್ನು ಮಾಡುವ ಭರವಸೆಯನ್ನು ಹೊಂದಿದ್ದೇವೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಒಂದು ಶಾಸನ ಬದ್ದ ಸಂಸ್ಥೆಯಾಗಿದ್ದು, ಸರ್ಕಾರವಾಗಲಿ ಅಥವಾ ಮತ್ಯಾವುದೋ ಅನ್ಯ ಸಂಸ್ಥೆಗಳಾಗಲಿ ಆಯೋಗಕ್ಕೆ ನಿರ್ದೇಶಿಸುವ ಸ್ವಾತಂತ್ರ್ಯವಿರುವುದಿಲ್ಲ. ಈ ಸಮೀಕ್ಷೆಯಲ್ಲಿ ಎಲ್ಲಾ ಹಿಂದುಳಿದ ಜಾತಿಗಳು ಭಾಗವಹಿಸಿ ನಿಖರವಾದ ಮಾಹಿತಿಯನ್ನು ನೀಡಲು ಹಾಗೂ ಸಮೀಕ್ಷೆಯನ್ನು ವಿರೋಧಿಸಿವವರಿಗೆ ಸೂಕ್ತ ಉತ್ತರವನ್ನು ನೀಡಲು ಕೋರುತ್ತೇವೆ.
ಮಾನ್ಯ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಯವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿರವರು ತಮ್ಮ ಪ್ರಮಾಣ ವಚನ ಸಂದರ್ಭದಲ್ಲಿ ಎನೆಂದು ಹೇಳಿ ಪ್ರಮಾಣ ವಚನ ಸ್ವೀಕರಿಸಿರುತ್ತಾರೆ ಎಂದು ಒಮ್ಮೆ ಅವರು ಪೂನಾವರ್ತಿಸಿಕೊಳ್ಳಬೇಕು ಅಥವಾ ನಮ್ಮ ಹಿಂದುಳಿದ ಜಾತಿಗಳ ಒಕ್ಕೂಟವು ಅವರಿಗೆ ನೆನಪು ಮಾಡಿಕೋಡಬೇಕಾಗುತ್ತದೆ. ಮಾನ್ಯ ಕೇಂದ್ರ ಸಚಿವರು ಈ ಸಮೀಕ್ಷಾ ವಿಚಾರದಲ್ಲಿ ಅನಗತ್ಯವಾಗಿ ರಾಜ್ಯದ ಜನರಲ್ಲಿ ಗೊಂದಲವನ್ನು ಉದ್ಭವಿಸಲು ಉನ್ನಾರ ನಡೆಸುತ್ತಿದ್ದಾರೆ. ಇದು ಅವರ ಘನತೆಗೆ ಯೋಗ್ಯವಾದ ನಡೆಯಾಗಿರುವುದಿಲ್ಲ.
ಈ ಸಮೀಕ್ಷೆಯು ಕೇವಲ ಹಿಂದುಳಿದ ಜಾತಿಗಳ ಸಮೀಕ್ಷೆಯಾಗಿರುವುದಿಲ್ಲ. ಇದು ರಾಜ್ಯದ ಎಲ್ಲಾ ಜಾತಿಯ ಎಲ್ಲಾ ಧರ್ಮದವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಅಧ್ಯಾಯನವಾಗಿರದೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವವನ್ನು ಒಳಗೊಂಡಿರುವ ಸಾಮಾಜಿಕ ಕ್ರಾಂತಿಯಾಗಿರುತ್ತದೆ ಆದ್ದರಿಂದ ಈ ಮೂಲಕ ತಮ್ಮ ಮಾಧ್ಯಮಗಳ ಮೂಲಕ ಈ ಸಮೀಕ್ಷೆಯನ್ನು ವಿರೋಧಿಸುವವರಿಗೆ ಕೇಳಿಕೊಳ್ಳು ವುದೆನೆಂದರೆ ತಾವುಗಳು ಈ ಸಮೀಕ್ಷೆಯಲ್ಲಿ ಸಕ್ರೀಯವಾಗಿ ಪಾಲ್ಗೋಂಡು ತಮ್ಮ ಜಾತಿಗಳಲ್ಲಿ ಇರುವ ಅತಿ ಹಿಂದುಳಿದವರ ಅಭಿವೃದ್ಧಿಗೆ ಅನುಕೂಲಕರವಾಗುವ ಈ ಸಮೀಕ್ಷೆಯನ್ನು ಬೆಂಬಲಿಸಲು ತಿಳಿಸುತ್ತೇವೆ.
(ಕೆ.ಎಂ. ರಾಮಚಂದ್ರಪ್ಪ)
ಅಧ್ಯಕ್ಷರು
(ಕೆ. ವೆಂಕಟಸುಬ್ಬರಾಜು)
ಉಪಾಧ್ಯಕ್ಷರು
(ಎಣ್ಣೆಗೆರೆ ಆರ್ ವೆಂಕಟರಾಮಯ್ಯ)
ಪ್ರಧಾನ ಕಾರ್ಯದರ್ಶಿ
(ಜಿ.ಡಿ. ಗೋಪಾಲ್)
ಆಂತರಿಕ ಲೆಕ್ಕ ಪರಿಶೋಧಕರು
(ಆರ್. ರಾಮಕೃಷ್ಣಪ್ಪ)
ಕಾರ್ಯದರ್ಶಿ
(ಸುಜ್ಞಾನಮೂರ್ತಿ)
ವಿಶ್ವಕರ್ಮ ಸಮಾಜ



