ಜಿಲ್ಲೆ
ಮಾಲತೇಶ ಶ್ಯಾಗೋಟಿ ಅವರಿಗೆ ಯುವ ಮುಖಂಡ ಅಪ್ಪಣ್ಣ ನದಾಫ್ ಸೇರಿ ಇನ್ನಿತರರಿಂದ ವಿಶೇಷ ಸನ್ಮಾನ

ಹುಬ್ಬಳ್ಳಿ : ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ನೂತನ ಸದಸ್ಯರಾಗಿ ಆಯ್ಕೆಯಾದ ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಅವರಿಗೆ ಇಂದು ಹುಬ್ಬಳ್ಳಿಯಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಚಿಕ್ಕನರ್ತಿ ಗ್ರಾಮದ ಯುವ ಮುಖಂಡರಾದ ಅಪ್ಪಣ್ಣ ನದಾಫ್, ಸಂಜೀವ್ ಸೋಮರೆಡ್ಡಿ, ಗುರುಪಾದಪ್ಪ ಸ್ವಾದಿ ಹಾಗೂ ಬೆನಕನಹಳ್ಳಿ ಗ್ರಾಮದ ಪೂಜಶ್ರೀ ಪ್ರಭಯ್ಯ ಸ್ವಾಮಿ ಹಿರೇಮಠ್ ಹಾಗೂ ಹಿರೇನರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗುರುಸಿದ್ದಗೌಡ ಮೇಲ್ಮಾಳಗಿ ಕುಂದಗೋಳ ತಾಲೂಕ ಪ್ರಧಾನ ಕಾರ್ಯದರ್ಶಿಯಾದ ರಮೇಶಗೌಡ ಮೇಲ್ಮಾಳಗಿ, ಹುಬ್ಬಳ್ಳಿ ತಾಲೂಕ ಅಧ್ಯಕ್ಷರಾದ ಷಣ್ಮುಖ ಐಹೊಳೆ ಹಾಗೂ ಇನ್ನಿತರೊಂದಿಗೆ ಸನ್ಮಾನಿಸಿ ಶುಭ ಹಾರೈಸಲಾಯಿತು.




