ಸುದ್ಧಿ

ಸಂಸದ ಜಿ ಕುಮಾರ ನಾಯಕ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಿಗೇರಿ ಅವರಿಂದ ಜಂಟಿಯಾಗಿ ಭೂಮಿ ಪೂಜೆ.

ಸಂಸದ ಜಿ ಕುಮಾರ ನಾಯಕ ಹಾಗೂ ಮಾಜಿ ಶಾಸಕ ಡಿ.ಎಸ್.ಹೂಲಿಗೇರಿ ಅವರಿಂದ ಜಂಟಿಯಾಗಿ ಭೂಮಿ ಪೂಜೆ.

ಲಿಂಗಸುಗೂರು ತಾಲೂಕಿನ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ:ಸಂಸದರು

ಈ ಭಾಗದ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ ಹೆಚ್ಚಿನ ಅನುದಾನ

ಲಿಂಗಸುಗೂರು ಗ್ರಾಮೀಣ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಲಿಂಗಸುಗೂರು ವಿಧಾನಸಭಾ ಕ್ಷೇತ್ರಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಹೆಚ್ಚಿದ ಅನುದಾನವನ್ನು ತಂದು ತಾಲೂಕಿನ ಸರ್ವಾಂಗಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಜಿ ಕುಮಾರ ನಾಯಕರವರು ಮಾತನಾಡಿದರು. ಅವರಿಂದು ಲಿಂಗಸೂಗುರು ತಾಲೂಕಿನ ಮುದುಗಲ್ ಪುರಸಭೆ ವ್ಯಾಪ್ತಿಯ ಪೈಗಂಬರ್ ನಗರದಿಂದ ಜಕ್ಕೇರುಮಡು ಗ್ರಾಮದವರೆಗೆ ಕೆ.ಕೆ.ಆರ್.ಡಿ.ಬಿ ಯ ಮ್ಯಾಕ್ರೋ ಯೋಜನೆ ಅಡಿಯಲ್ಲಿ ಪಿಡಬ್ಲ್ಯೂಡಿ ಅನುಷ್ಠಾನ ಇಲಾಖೆಗೆ ಸುಮಾರು 74.32 ಲಕ್ಷ ರೂಪಾಯಿ ಮೊತ್ತದ ಬಿ ಟಿ ರಸ್ತೆ ಕಾಮಗಾರಿಗೆ ಮಾಜಿ ಶಾಸಕ ಶ್ರೀ ಡಿ ಎಸ್ ಹೂಲಿಗೇರಿ ಅವರೊಂದಿಗೆ ಜಂಟಿಯಾಗಿ ಭೂಮಿ ಪೂಜೆಯನ್ನು ನೆರವೇರಿಸಿದರು.

ಗ್ರಾಮೀಣ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಯಿಂದ ರೈತರ ಓಡಾಟಕ್ಕೆ ಹಾಗೂ ಅವರ ಬೆಳೆದ ಬೆಳೆಗಳು ಸರಕು ಸಾಮಾಗ್ರಿಗಳ ವಿಲೇವಾರಿಗಳಿಗೆ ಅನುಕೂಲವಾಗುತ್ತದೆ ಹಾಗೂ ಕೆಕೆಆರ್ಡಿಬಿಯ ಮೂಲ ಉದ್ದೇಶ “ಕಲ್ಯಾಣ ಪಥ” ಎಂಬ ಯೋಜನೆ ಮೂಲಕ ಈ ಭಾಗಗಳಲ್ಲಿ ರಸ್ತೆ ಸುಧಾರಣೆ ತರಬೇಕೆಂಬುವ ಯೋಜನೆಯನ್ನು ರೂಪಿಸಿದೆ ಎಂದು ಮಾತನಾಡಿದರು

ಈ ಸಂದರ್ಭದಲ್ಲಿ ಲಿಂಗಸೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಡಿ.ಎಸ್. ಹೂಲಗೇರಿ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಬಸವನಗೌಡ ತುರುವಿಹಾಳ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಶಿವಶಂಕರ್ ಗೌಡ ಶ್ರೀ ಎಸ್ ಆರ್ ರಸೂಲ್ ಸಾಬ್, ಶ್ರೀ ತಮ್ಮಣ್ಣ ಗುತ್ತೇದಾರ್, ಶ್ರೀ ಅಜಿಮ್ ಸಾಬ್, ಸೇರಿದಂತೆ ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು..

Related Articles

Leave a Reply

Your email address will not be published. Required fields are marked *

Back to top button