ಸಂಪಾದಕೀಯ

ಯುವಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗ ಭಾಗ್ಯ- ಬಿಜೆಪಿ ಮುಖಂಡ ನಿಸರ್ಗ ಜಗದೀಶ್ ಆರೋಪ.

ಯುವಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗ ಭಾಗ್ಯ- ಬಿಜೆಪಿ ಮುಖಂಡ ನಿಸರ್ಗ ಜಗದೀಶ್ ಆರೋಪ.

ಬೆಂಗಳೂರು:12/02/2026
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದಾಗಿನಿಂದ‌ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಯುವಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರುದ್ಯೋಗ ಭಾಗ್ಯ ಕಲ್ಪಿಸಿದ್ದಾರೆ ಎಂದು ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿಸರ್ಗ ಜಗದೀಶ್ ಆರೋಪಿಸಿದರು.

‘ಮೂರು ವರ್ಷಗಳಿಂದ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ನಡೆದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರು 1.32 ಲಕ್ಷ ಹುದ್ದೆಗಳಿಂದ ವಂಚಿತರಾಗಿದ್ದಾರೆ. ವಯೋಮಿತಿ ಮೀರಿದ ಪರಿಣಾಮ ಉದ್ಯೋಗಾವಕಾಶಗಳು ಕೈತಪ್ಪಿವೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನವಾಗಿದ್ದಾರೆ. ಇದೊಂದು ಭ್ರಷ್ಟಾಚಾರದ ಸರ್ಕಾರ. ಭ್ರಷ್ಟಾಚಾರಿಗಳ ಕೂಟದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿದ್ದಾರೆ. ಸರ್ಕಾರದ ವಿರುದ್ದ ಆರೋಪ ಮಾಡಿದರೆ ಅಂತಹ ಮಾಧ್ಯಮಗಳ ಮೇಲೆ, ಸೋಶಿಯಲ್ ಮೀಡಿಯಾಗಳ ಮೇಲೆಯೇ ಕೇಸು ದಾಖಲಿಸುತ್ತಾರೆ. ಭ್ರಷ್ಟಾಚಾರದ ಮುಚ್ಚಿ ಹಾಕಲು ಇಂತಹ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಅಬಕಾರಿ ಇಲಾಖೆಯ ನಡೆದ ಭ್ರಷ್ಟಚಾರ ಬೆಳವಣಿಗೆ.ಸಿಎಲ್-7 ಮದ್ಯದಂಗಡಿ ಪರವಾನಿಗೆಗಾಗಿ ಅಬಕಾರಿ ಉಪಾಯುಕ್ತರೊಬ್ಬರು ೨೫ ಲಕ್ಷ ರೂಪಾಯಿ ಲಂಚ ಬೇಡಿಕೆಯಿಟ್ಟಿರುವುದು ಲೋಕಾಯುಕ್ತ ಮೆಟ್ಟಿಲೇರಿದೆ. ಪೊಲೀಸ್ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟು ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದು, ನಡುರಸ್ತೆಯಲ್ಲೇ ಕಿರುಚಾಡುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜೊತೆಗೆ ಇದರ ಬೆನ್ನಿಗೇ ಮಂಡ್ಯದಲ್ಲಿ ಬಾರ್ ಲೈಸನ್ಹಣ ವಸೂಲಿ ಆರೋಪಕ್ಕೆ ಸಂಬಂಧಿಸಿ ಜಿಲ್ಲಾ ಉಪ ಆಯುಕ್ತ ನಾಗಶಯನ ಅವರನ್ನು ಸರಕಾರವೇ ಅಮಾನತುಗೊಳಿಸಿದೆ. ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಹಿಂದೆ, ಸಚಿವ ಆರ್. ಬಿ. ತಿಮ್ಮಾಪುರ್ ಮತ್ತು ಅವರ ಪುತ್ರನ ಹೆಸರೂ ಕೇಳಿ ಬರುತ್ತಿವೆ. ಕೆಲವು ಆಡಿಯೊಗಳಲ್ಲಿ ಸಚಿವರ ಹೆಸರು ಪ್ರಸ್ತಾಪವಾಗಿದೆ ಎನ್ನುವುದನ್ನು ಮುಂದಿಟ್ಟುಕೊಂಡು ಕೆಲವರು ಸಚಿವರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ.
ಹೀಗೆ ಈ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ದಿನದಿಂದ ಹಿಡಿದು ದಿನ ನಿತ್ಯ ಒಂದಲ್ಲಾ ಒಂದು ಹಗರಣದಲ್ಲಿ ಭಾಗಿಯಾಗಿ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿ ಆದಷ್ಟು ಬೇಗ ತೊಲಗಬೇಕು ಎಂದು ಜನರು ಭ್ರಮ ನೀರಸನ ಗೊಂಡಿದ್ದಾರೆ. ಸರಕಾರ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿದ್ದು, ರಾಜ್ಯದ ಜನರಿಗೆ ಉದ್ಧಾರ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಈಗ ಜನರಿಗೆ ವಂಚಿಸುತ್ತಿದೆ ಎಂದು ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿಸರ್ಗ ಜಗದೀಶ್ ಆರೋಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button