ಸಂಪಾದಕೀಯ

ಎಸ್. ಟಿ ಸಮುದಾಯದ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕು – ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಜಿ ಬೆಂಗಳೂರು.

ಎಸ್. ಟಿ ಸಮುದಾಯದ ಮೀಸಲಾತಿಯನ್ನು ಜನಸಂಖ್ಯೆ ಗೆ ಅನುಗುಣವಾಗಿ ಹೆಚ್ಚಿಸಬೇಕು – ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಜಿ ಬೆಂಗಳೂರು. ಎಸ್. ಟಿ ಸಮುದಾಯದ ಮೀಸಲಾತಿಯನ್ನು ಜನಸಂಖ್ಯೆ ಗೆ ಅನುಗುಣವಾಗಿ ಹೆಚ್ಚಿಸಬೇಕು ಎಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ಯನ್ನು ಶ್ರೀ ಮಹರ್ಷಿ ವಾಲ್ಮೀಕಿ ಗುರು ಪೀಠ ಟ್ರಸ್ಟ್ ವತಿ ಇಂದ ನಿರ್ವಹಿಸಿದರು. ಕರ್ನಾಟಕ ರಾಜ್ಯದಲ್ಲಿ 2011ರ ಜನಗಣತಿಯ ಪ್ರಕಾರ ಪರಿಶಿಷ್ಟ ಪಂಗಡದವರ ಜನಸಂಖ್ಯೆ 42 ,49 ಲಕ್ಷಗಳು ಮತ್ತು ಪರಿಶಿಷ್ಟ ಜಾತಿಯವರ ಜನಸಂಖ್ಯೆ 1.04 ಕೋಟಿಗಳಿಗೂ ಹೆಚ್ಚಿದ್ದು ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಅನುಕ್ರಮವಾಗಿ ಶೇಕಡ 7 ಮತ್ತು ಶೇಕಡ 17 ಇರುತ್ತದೆ. ಸರ್ಕಾರದ ಮತ್ತು ಅದರ ವ್ಯಾಪ್ತಿಯಡಿ ಬರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ಉದ್ಯೋಗಗಳಲ್ಲಿ ಈ ಜನಾಂಗದವರ ಪ್ರಾತಿನಿದ್ಯತೆ ಇವರ ಜನಸಂಖ್ಯೆಗನುಗುಣವಾಗಿ ಇಲ್ಲದೇ ಇರುವುದನ್ನು ಸರ್ಕಾರದ ಗಮನಕ್ಕೆ ಕಾಲ ಕಾಲಕ್ಕೆ ತಂದಿದ್ದರೂ ಸಹ 1954 ರಲ್ಲಿ ನಿಗದಿ ಮಾಡಿದ್ದ ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಪಂಗಡದವರಿಗೆ ಶೇಕಡ 3 ರಿಂದ 7 ಕ್ಕೆ ಮತ್ತು ಪರಿಶಿಷ್ಟ ಜಾತಿಯವರಿಗೆ ಶೇಕಡ 15 ರಿಂದ 17 ಕ್ಕೆ ಹೆಚ್ಚಿಸದೇ ಇದ್ದ ಕಾರಣ 2022 ರಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿಯ ಶ್ರೀಗಳ ಮುಂದಾಳತ್ವದಲ್ಲಿ ಸಮುದಾಯಗಳು ನಡೆಸಿದ 257 ದಿನಗಳ ಸುಧೀರ್ಘ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್‌ದಾಸ್ ರವರ ಏಕ ಸದಸ್ಯ ಆಯೋಗವು ನೀಡಿದ ವರದಿಯ ಶಿಫಾರಸ್ಸುಗಳ ಆಧಾರದ ಮೇಲೆ ಪರಿಶಿಷ್ಟ ಪಂಗಡದವರಿಗೆ ಚಾಲ್ತಿಯಲ್ಲಿದ್ದ ಮೀಸಲಾತಿ ಪ್ರಮಾಣವನ್ನು ಶೇಕಡ 15 ರಿಂದ 17 ಕ್ಕೆ ಹೆಚ್ಚಿಸಿ ದಿ ಕರ್ನಾಟಕ ಷೆಡ್ಯೂಲ್ ಕಾಸ್ಟ್ ಅಂಡ್ ಷೆಡ್ಯೂಲ್ ಟ್ರೈಬ್ (ರಿಜಿಸ್ಟ್ರೇಷನ್ ಇನ್ ಎಜುಕೇಷನಲ್ ಇನ್ಸಿಟಿಟ್ಯೂಟ್ ಅಂಡ್ ಅಪಾಂಯಿಂಟ್‌ಮೆಂಟ್ ಆರ್ ಪೋಸ್ ಇನ್ ದಿ ಸರ್ವೀಸಸ್ ಅಂಡರ್ ದಿ ಸ್ಟೇಟ್) ಆಕ್ಟ್, 2022 (ಕರ್ನಾಟಕ ಆಕ್ಟ್ ನಂ.01 ಆಫ್ 2023) ಹೊರಡಿಸಿದ್ದಿತು. ಹಾಗೂ ಈ ಆದ್ಯಾದೇಶದ ಮೇರೆಗೆ ನೇಮಕಾತಿಗಳಲ್ಲಿ ರೋಸ್ಟರ್ ಬಿಂದುಗಳನ್ನು ನೇರನೇಮಕಾತಿ ಮತ್ತು ಬಡ್ತಿ ನೇಮಕಾತಿಗಳಲ್ಲಿ ಹೊಸದಾಗಿ ಅಳವಡಿಸಿಕೊಂಡು ನೇಮಕಾತಿಗಳನ್ನು ಮಾಡುವಂತೆ ಆದೇಶಗಳನ್ನು ಹೊರಡಿಸಲಾಗಿತ್ತು. ಆದರೆ ಈ ಆದೇಶಗಳಿಂದ ಬಾದಿತರಾದವರು ಕರ್ನಾಟಕ ಅಡ್ಡಿನಿಷ್ಟೇಷನ್ ಟ್ರಿಬ್ಯೂನಲ್ ಮತ್ತು ಘನ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಇವುಗಳ ಮೇಲೆ ಘನ ಕರ್ನಾಟಕ ಉಚ್ಚನ್ಯಾಯಾಲಯವು ದಿನಾಂಕ: 27.11.2025 ರಂದು ಮದ್ಯಂತರ ಆದೇಶ ನೀಡಿ ಹೆಚ್ಚಿಸಲಾದ ಮೀಸಲಾತಿ ಪ್ರಮಾಣದಂತೆ ಯಾವುದೇ ನೇಮಕಾತಿಯ ಬಗ್ಗೆ ಘನ ನ್ಯಾಯಾಲಯದ ಅಂತಿಮ ಆದೇಶದವರೆಗೆ ಅಧಿಸೂಚನೆಗಳನ್ನು ಹೊರಡಿಸಬಾರದೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುತ್ತದೆ , ಆದರೆ ಈ ಆದೇಶಗಳಿಂದ ಅನೇಕ ವರ್ಷಗಳಿಂದ ಸಾರ್ವಜನಿಕ ನೇಮಕಾತಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಗಳಲ್ಲಿ ಸೂಕ್ತ ಪ್ರಾತಿನಿದ್ಯತೆಗಳು ಸಿಗದೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಯುವಕರು ಮತ್ತು ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ರಚಿಸಿದ್ದ ಏಕ ಸದಸ್ಯ ಸಮಿತಿ ನೀಡಿದ ವರದಿಯ ಮೇಲೆ ಹೆಚ್ಚಿಸಲಾಗಿರುವ ಮೀಸಲಾತಿ ಪ್ರಮಾಣವನ್ನು ಅಳವಡಿಸಿಕೊಂಡು ನೇಮಕಾತಿಗಳನ್ನು ಮಾಡಲು ಅವಕಾಶ ಮಾಡಿಕೊಡಲು ಕರ್ನಾಟಕ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿರುವ ಸದುದ್ದೇಶವನ್ನು ಘನ ಉಚ್ಚನ್ಯಾಯಾಲಯದ ಅವಗಾಹನೆಗೆ ತಂದು ಉದ್ಭವಸಿರುವ ತೊಂದರೆಯನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರವನ್ನು ಈ ಮೂಲಕ ಒತ್ತಾಯಿಸಿದರು. ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್. (ರಿ)
ಶ್ರೀ ವಾಲ್ಮೀಕಿ ಮಹಾಸಂಸ್ಥಾನ, ರಾಜನಹಳ್ಳಿ . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button