ಕಣ್ಣಿದ್ದವರು ಕನಕಗಿರಿಯನ್ನು ನೋಡಲೆಬೇಕು”ಸುವರ್ಣ ಗಿರಿಯ ವೈಭವ ಹಾಗೂ ಹೆಮ್ಮೆಯ ಇತಿಹಾಸ”

ಕಣ್ಣಿದ್ದವರು ಕನಕಗಿರಿಯನ್ನು ನೋಡಲೆಬೇಕು
“ಸುವರ್ಣ ಗಿರಿಯ ವೈಭವ ಹಾಗೂ ಹೆಮ್ಮೆಯ ಇತಿಹಾಸ”
ವರದಿ : ಗೌತಮ್ ಯಾದವ್ ಕನಕಗಿರಿ
ಕನಕಗಿರಿ : ಗಂಗಾವತಿಯಿಂದ ೨೦ ಕಿ.ಮೀ. ದೂರ ವಿರುವ ಕನಕಗಿರಿ ಕ್ಷೇತ್ರವು. ಐತಿಹಾಸಿಕ ಮತ್ತು ಪೌರಾಣಿಕ ಪುಣ್ಯ ಕ್ಷೇತ್ರವಾಗಿದೆ. ಐತಿಹಾಸಿಕ ವಾಗಿ ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಈ ಕ್ಷೇತ್ರವು ಪೌರಾಣಿಕವಾಗಿ ಸ್ಕಂದ ಪುರಾಣ ದಲ್ಲಿ ಉಲ್ಲೇಖವಾಗಿದೆ.
ಈ ಪುಣ್ಯ ಕ್ಷೇತ್ರದಲ್ಲಿ ಲಕ್ಷ್ಮೀ ನರಸಿಂಹನು ಕನಕಾಚಲಪತಿ ಎಂಬ ನಾಮದಿಂದ ಉದ್ಭವ ವಾಗಿ ಭಕ್ತರನ್ನು ಉದ್ಧಾರ ಮಾಡುತ್ತಿದ್ದಾನೆ.
ಪುಷ್ಪಾ, ಜಯಂತಿ ನದಿಗಳ ಸ್ನೇಹ ಸಂಬಂ ಧದಲ್ಲಿ. ಬೆಳೆದುನಿಂತ ತರುಲತೆಗಳು ಸದಾ ಅರಳಿ ಪರಿಮಳ ಸೂಸುವ ಈ ಸ್ಥಳವು “ಕನಕ” ಎಂಬ ಮುನಿಯನ್ನು ಆಕರ್ಷಿಸಿತು. ಆತನ ತಪಸ್ಸು ನಿರಾತಂಕವಾಗಿ ಸಾಗಿತ್ತು.
ಒಮ್ಮೆ ನಾಡಿನಲ್ಲಿ ಭೀಕರ ಬರಗಾಲ. ಜನ ಅನ್ನ ನೀರಿಗಾಗಿ ಬಾಯಿ ಬಿಡುತ್ತಿದ್ದರು. ಭಗ ವಂತನ ಅನುಗ್ರಹ ದೊರಕಿಸಿ ಕೊಡುವವರು ಯಾರಾದರೂ ಇದ್ದಾರೆಯೇ ಎಂದು ಅವರ ನೊಂದ ಹೃದಯ ಕೊರಗುತ್ತಿತ್ತು. ಕನಕಮು ನಿಯ ದಿವ್ಯ ದೃಷ್ಟಿಗೆ ಗೊಚರವಾಯಿತು. ಮುನಿಯು ಅನನ್ಯಭಾವದಿಂದ ಭಗವಂತ ನನ್ನು ಮೊರೆಯಿಡಲು ಭಗವಂತನು ಪ್ರತ್ಯಕ್ಷ ನಾಗಿ ಸುವರ್ಣ ವೃಷ್ಠಿ ಕರೆದನು. ಅಂದಿನಿಂ ದಲೇ ಈ ನಾಡು ಸುವರ್ಣಗಿರಿ’ ಅರ್ಥಾತ್ ಕನಕಗಿರಿ ಎಂದು ಪ್ರಸಿದ್ದಿಯಾಯಿತು. ಪ್ರತ್ಯ ಕ್ಷನಾದ ಭಗವಂತನು ಗುಪ್ತ ನರಸಿಂಹ ಸಾಲಿ ಗ್ರಾಮವಾಗಿ’ ಕನಕಾಚಲಪತಿ ಎಂದು ಕರೆಯಿ ಸಿಕೊಳ್ಳ ತೊಡಗಿದನು.
ಪರಸಪ್ಪ ನಾಯಕನು ಗೊಲ್ಲ ವೃತ್ತಿಯ ವನು, ಬೇಡ ಜಾತಿಗೆ ಸೇರಿದವನು. ಈ ನಾಯಕನು ಗುಜ್ಜಲ ವಂಶದ ಮೂಲ ಪುರು ಷನು, ಪರಸಪ್ಪ ನಾಯಕನು ಬಹಳ ದೈವ ಭಕ್ತಿಯುಳ್ಳವನಾಗಿದ್ದನು. ಆತನ ಜೀವನದಲ್ಲಿ ಒಂದು ಪವಾಡವು ನಡೆಯಿತು..
ನಾಯಕನ ಆಕಳುಗಳಲ್ಲಿ ನೆಚ್ಚಿನ ಆಕಳೊಂ (ದಕ್ಕೆ “ಕಾಮಧೇನು” ಎಂದು ಕರೆಯುತ್ತಿ ದ್ದರು. ಸಮೃದ್ಧಿಯಾಗಿ ಹಾಲುಕೊಡುವ ಈ ಆಕಳು ಅದೇಕೋ ಹಾಲು ಕೊಡದಾಯಿತು. ನಾಯಕನು ಗೊಲ್ಲರ ಮೇಲೆ ಅನುಮಾನಿಸಿ ಅವರನ್ನು ಗದರಿಸಿದನು. ಗೊಲ್ಲರು ಭಯಭೀ ತರಾಗಿ ಮೇಯಿಸುವ ಸಮಯದಲ್ಲೇ ಈ ಆಕಳಕಡೆಗೆ ವಿಶೇಷ ಗಮನ ಹರಿಸಿದರು. ಆ ಹಸುವು ಅವರಿಂದ ತಪ್ಪಿಸಿಕೊಂಡು ಹೋಗಿ ಒಂದು ಹುತ್ತದ ಮೇಲೆ ಎಲ್ಲ ಹಾಲನ್ನು ಸುರಿಸ ತೊಡಗಿತು. ಗೋಪಾಲಕರು ಈ ವಿಸ್ಮಯವನ್ನು ನೋಡಿ ನಾಯಕನಿಗೆ ತಿಳಿಸಿ ‘ದರು. ನಾಯಕನು ಪರೀಕ್ಷಿಸಿ ಅದರ ಮೂಲ ವನ್ನು ಹೊರತೆಗೆಯಬೇಕೆಂದು ಹುತ್ತವನ್ನು ಕಿತ್ತಲು ಆಜ್ಞಾಪಿಸಿದನು. ಗುದ್ದಲಿಯನ್ನೆತ್ತಿ ‘ಹುತ್ತಕ್ಕೆ ಹಾಕಿದಾಗ ರಕ್ತ ಚಿಮ್ಮಿ ಭಯಂಕರ ನಾದವಾಯಿತು. ಗೊಲ್ಲರು ಭಯದಿಂದ ಮೃತಪಟ್ಟರು, ನಾಯಕನು ಮೂರ್ಛಹೊ ‘ದನು.
- ಅಂದೇ, ರಾತ್ರಿ ನಾಯಕನ ಸ್ವಪ್ನದಲ್ಲಿ ಭಗವಂತನು ಕಾಣಿಸಿಕೊಂಡು, ರಜತಗಿರಿ ಯಲ್ಲಿ ವಾಸಿಸುತ್ತಿರುವ ವೆಂಕಟೇಶನೇ ನಾನು ಇಲ್ಲಿ ಲಕ್ಷ್ಮಿನರಸಿಂಹನ ರೂಪದಲ್ಲಿ, ನನ್ನ ಬೆಟ್ಟ ವನ್ನೇರಿ ದರುಶನ ಪಡೆಯಲು ಭಾಗ್ಯವಿಲ್ಲದ ಭಕ್ತರನ್ನು ಅನುಗ್ರಹಿಸಲು ಇಲ್ಲಿ ಸಾಲಿಗ್ರಾಮ ರೂಪದಲ್ಲಿ ಉದ್ಭವಿಸಿದ್ದೇನೆ ಎಂದು ನುಡಿ ದನು.
ಬೆಳಿಗ್ಗೆ ನಾಯಕನು ಬಂದು ನೋಡುತ್ತಾನೆ ಪುಷ್ಟ ಜಯಂತಿ ನದಿಗಳು ಮೈತುಂಬಿಕೊಂಡು ಹರಿಯುತ್ತಲಿವೆ. ಹುತ್ತವೆಲ್ಲವೂ ಕರಗಿ ಶ್ರೀ ನರಸಿಂಹ ಸಾಲಿಗ್ರಾಮವು ಮತ್ತು ಶಿಲಾಮಂ ಟಪಗಳು ಹೊರಬಂದಿವೆ. ಪರಸಪ್ಪ ನಾಯ * ಕನು ಪುಲಕಿತಗೊಂಡು ಸ್ವಾಮಿ ಲಕ್ಷ್ಮಿನರಸಿಂ ಹನೇ, ಕನಕಾಚಲಪತಿಯೇ ಎಂದು ಸ್ತುತಿಸಿದನು .
ಈ ವಿಷಯವು ಎಲ್ಲಕಡೆಗೂ ಹಬ್ಬಿತ್ತು. ವಿಜಯನಗರದ ದೊರೆ ಪ್ರೌಢದೇವರು ಯನು, ಕನಕಾಚಲಪತಿಯ ದರ್ಶನಕ್ಕೆ ಆತುರನಾಗಿ ಬಂದನು ಸ್ವಾಮಿಯನ್ನು ಕಣ್ಮುಂಬ ನೋಡಿದನು.
ಪ್ರೌಢದೇವರಾಯನು ಸ್ವಾಮಿಯ ಪೂಜಾ ವಿಧಿಗಳು, ನಿರಂತರವಾಗಿ ವೈಭವದಿಂದ ನೆರ ವೇರುತ್ತಿರಲಿ ಎಂದು ಕ್ರಿ.ಶ. ೧೩೫೮ ನಳ ನಾಮ ಸಂವತ್ಸರ ಕಾರ್ತಿಕ ಶುದ್ಧ ದಶಮಿ ಯಂದು ೧೨ ಗ್ರಾಮಗಳನ್ನು ಪರಸಪ್ಪ ನಾಯಕನಿಗೆ ಜಹಗೀರ ಹಾಕಿಕೊಟ್ಟನು. ಈ ವಿಷಯವು ದೇವಸ್ಥಾನದ ಉತ್ತರ ಭಾಗದಲ್ಲಿ ರುವ ಶಿಲಾಶಾಸನದಲ್ಲಿದೆ.
ಸ್ವಾಮಿನಿಷ್ಠನಾದ ಪರಸಪ್ಪ ನಯಕನ ಕಾರ್ಯಸಾಹಸಗಳಿಗೆ ಮೆಚ್ಚಿ ಪ್ರೌಢ ದೇವರಾ. ಯನು ೧೪೦೦ ಶಾಲಿವಾಹನಶಕ ವಿಲಂಬ ನಾಮ ಸಂವತ್ಸರದಲ್ಲಿ ೪ ಲಕ್ಷ ವರಹ ಮತ್ತು ಕನಕಗಿರಿ ಪ್ರದೇಶವನ್ನು ಕೊಟ್ಟು ಅದನ್ನು ರಾಜಧಾನಿಯನ್ನಾಗಿ ಮಾಡಿ ಕೊಂಡಿರಲು ಹೇಳಿದನು.
ಪರಸಪ್ಪನಾಯಕನು ‘ಕೊಂಡಮಾ ಚಾರ್ಯ” ಎಂಬವರಿಗೆ ತಿಪ್ಪನಾಳ ಮತ್ತು ಮಲ್ಲಾಪೂರ ಗ್ರಾಮಗಳನ್ನು ಉಂಬಳಿಯಾಗಿ ಕೊಟ್ಟು ಶ್ರೀ ಕನಕಾಚಲಪತಿಯ ನಿತ್ಯ ಪೂಜಾ ವಿಧಿಗಳು ನಡೆಯುವಂತೆ ವ್ಯವಸ್ಥೆ ಮಾಡಿ, ದನು. ಅಂದಿನಿಂದ ಈ ವರೆಗೂ ವಿಶಿಷ್ಠಾದೈತ ಸಂಪ್ರದಾಯದ ಶ್ರೀವೈಷ್ಣವರೇ ಸ್ವಾಮಿಯ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪರಸಪ್ಪನಾಯಕನ ತರುವಾಯ ಆತನ ಮಗನಾದ ಉಡುಚಿ ನಾಯಕನು ಪಟ್ಟಕ್ಕೆ ಬಂದ ಮೇಲೆ ಕನಕಗಿರಿಯ ಕೋಟೆ ಗೋಡ. ನರಸಿಂಹ ತೀರ್ಥಕ್ಕೆ ಶಿಲೆ ಆ ತೀರ್ಥದ ಸುತ್ತ ಅನಂತಶಯನ ಈಶ್ವರ ಸೂರ್ಯನಾರಾಯ ಣನ ಗುಡಿಗಳನ್ನು ಕಟ್ಟಿಸಿದನು. ಶ್ರೀ ಸ್ವಾಮಿಯ ದೇವಾಲಯದ ಒಳ, ಹೊರ ಮಧ್ಯರಂಗಗಳು, ಪ್ರಾಕಾರದ ಗೋಡೆಗಳು ನಿರ್ಮಾಣಗೊಂಡವು
- ಈತನ ಶರುವಾಯ ಈತನ ಮಗ ಕೆಲ ವಡಿ ಉಡುಚಿ ನಾಯಕನು ಶಾಲಿವಾಹನಶಕ ೧೪೫೫ ರಲ್ಲಿ ದೇವಾಲಯದ ಮೂರು ಗೋಪುರಗಳನ್ನು ಕಟ್ಟಿಸಿದನು. ಗೋಡೆಗಳ ಮೇಲೆ ಅಂದವಾದ ಮೂರ್ತಿಗಳನ್ನು ಮಾಡಿ ಸಿದನು. ಈತನು ಸ್ವಾಮಿಯ ಜಾತ್ರೆಯನ್ನು ವೈಭವವಾಗಿ ನಡೆಯುವಂತೆ ವ್ಯವಸ್ಥೆ ಮಾಡಿ ಸಿದನು. ಅದರ ಪ್ರಕಾರ ಪ್ರತಿ ಸಂವತ್ಸರ ‘ಪಾಲ್ಗುಣ ಶುದ್ಧ ತ್ರಯೋದಶಿಯಿಂದ ಫಾಲ್ಗುಣ ಬಹುಳ ಏಕಾದಶಿ ಪರ್ಯಂತ ೧೪ ದಿನಗಳ ಜಾತ್ರೆಯ ಪರಿಪಾಠ ಹಾಕಿದನು. ಈ ಹದಿನಾಲ್ಕು ಉತ್ಸವದಲ್ಲಿ ಫಾಲ್ಗುಣ ಬ. ಪಂಚಮಿ ಜರುಗುವ ಗರುಡೋತ್ಸವ ಅತ್ಯಂತ ಮಹತ್ವವಾದದ್ದು. ಇಂದಿಗೂ ಈ ಎಲ್ಲ ಉತ್ಸ ವಗಳೂ ಜರುಗಿ ಜಾತ್ರೆ ವೈಭವ ಪೂರ್ಣವಾಗಿ ನೆರವೇರುತ್ತದೆ.
ಇದೇ ವಂಶದ ವೆಂಕಟಪ್ಪ ನಾಯಕ ನೆಂಬುವನು ಆಗಿನ ಕಾಲದಲ್ಲಿ ಒಂದು ಲಕ್ಷ ರೂಪಾಯಿ – ವೆಚ್ಚದಿಂದ ಶಾಲಿವಾಹನಶಕ ೧೫೦೮ ರಲ್ಲಿ ಒಂದು ಭಾವಿ ತೋಡಿಸಿದನು. ఈగలూ ఈ భావి ವೆಂಕಟಾಪತಿ ಭಾವಿ ಎಂದೇ ಪ್ರಸಿದ್ಧವಾಗಿದೆ.
ನಂತರ ಈ ಸಂಸ್ಥಾನವು ನಿಜಾಮರ ಆಡ ಳಿತಕ್ಕೆ ಒಳಪಟ್ಟು ತನ್ನ ವೈಭವವನ್ನು ಕಳೆದುಕೊಂಡಿತು. ಜಾಗ್ರತ ಸ್ಥಾನವಾದ ದೇವಾಲ ಯಕ್ಕೆ ಯಾವದೇ ಧಕ್ಕೆ ತಟ್ಟಲಿಲ್ಲ. ಆಗ ಪುಷ್ಪ, ಜಯಂತಿ ಎಂಬ ಚಿಕ್ಕ ನದಿಗಳು ಶಾಪದಿಂದ ಹಳ್ಳಗಳಾಗಿ ಹರಿಯುತ್ತಲಿವೆ ಎಂಬ ಪ್ರತೀತಿ , ಇದೆ.
ಬಾಕ್ಸ್:::::
ಕಣ್ಣಿದ್ದವರು ಕನಕಗಿರಿ ನೋಡಬೇಕು. ಕಾಲಿದ್ದವರು. ಹಂಪೆ ನೋಡಬೇಕು ಎಂಬ ನಾನುಡಿ ಎಂಬ ಕನ್ನಡದಗಾದೆ ಇದೆ.
ವರದಿಯ ಮಾಹಿತಿ ಮತ್ತು ವಿಷಯ ಸಂಗ್ರಹಣೆ (ಸುವರ್ಣಗಿರಿ )ಕನಕಗಿರಿ ಕ್ಷೇತ್ರದ ಹಿರಿಯ ಇತಿಹಾಸಕಾರರು ಶ್ರೀ ದುರ್ಗಾದಾಸ್ ಯಾದವ್ ಕನಕಗಿರಿ ಇವರಿಂದ ….
ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ : 8867257737




