ಕನ್ನಡ ಸಾಹಿತ್ಯ ಪರಿಷತ್ತಿಗೆ ಕಲ್ಯಾಣ ಕರ್ನಾಟಕದವರೇ ಅಧ್ಯಕ್ಷರಾಗಬೇಕು ಪ್ರೊಫೆಸರ್ ಶಿವರಾಜ್ ಪಾಟೀಲ್.

ರಾಜ್ಯ ಕ ಸಾ ಪ ಕ್ಕೆ ಕ ಕ ಭಾಗದವರೇ ಅಧ್ಯಕ್ಷರಾಗಬೇಕು ಪ್ರೊಫೆಸರ್ ಶಿವರಾಜ್ ಪಾಟೀಲ್ ಹೇಳಿಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಲ್ಯಾಣ ಕರ್ನಾಟಕದವರೆ ಅಧ್ಯಕ್ಷರಾಗಬೇಕು ಮತ್ತು ಸಾಹಿತಿಗಳಲ್ಲದವರನ್ನು ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರನ್ನಾಗಿ ಮಾಡಬಾರದು ಕಟುವಾಗಿ ಹೇಳಿದ್ದಾರೆ ಹಾಗೆ ಮಾಡಿದರೆ ಸಾಹಿತ್ಯ ಪರಿಷತ್ತಿನ ಪಾವಿತ್ರತೆ ಹಾಳಾಗಿ ಹೋಗುತ್ತದೆ ಅದೊಂದು ಪವಿತ್ರವಾದ ಕನ್ನಡಿಗರ ಸಂಸ್ಥೆಯಾಗಿದೆ ಕನ್ನಡ ನಾಡು ನುಡಿ ಜಲ ಭಾಷೆ ಸಂರಕ್ಷಣೆ ಅದರ ಹೊಣೆಯಾಗಿದೆ ಮೈಸೂರು ಮಹಾರಾಜರು ಸಾಹಿತಿಗಳಿಗಾಗಿ ಸಾಹಿತ್ಯ ಪರಿಷತ್ತನ್ನು ಸಂಸ್ಥಾಪಿಸಿ ಸಾಹಿತ್ಯಾ ಸಕ್ತರನ್ನು ಒಂದುಗೂಡಿಸಿ ಕನ್ನಡಿಗರ ದನಿಯಾಗಿ ಪರಿಷತ್ತನ್ನು ಹೊರಹೊಮ್ಮಿಸಿದರು ಆದರೆ ಈಗ ಅಸಾಹಿತಿಗಳು ಸಂಘಟಕರು ಸಂಯೋಜಕರು ಆಯೋಜಕರು ಅಧ್ಯಕ್ಷರಾಗುತ್ತಿರುವುದು ದುರಂತದ ವಿಷಯ ಇತ್ತೀಚಿಗೆ ಎರಡು ಅವಧಿಗಳಲ್ಲಿ ಅಧಿಕಾರಿಗಳನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಮತದಾರರು ಪಶ್ಚಾತಾಪ ಪಡುತ್ತಿದ್ದಾರೆ ಅಧಿಕಾರಿಗಳಿಗೆ ಅವಕಾಶ ಕೊಡುವುದರಿಂದ ಪರಿಷತ್ತು ಅವನತಿಯತ್ತ ಹೋಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ ಇದು ಪರಿಷತ್ತಿನ ಮತದಾರರ ಅನುಭವಕ್ಕೆ ಬಂದ ಮಾತಾಗಿದೆ ಒಂದು ಬಾರಿ ಡಾಕ್ಟರ್ ಎಂ ಎಂ ಕಲಬುರ್ಗಿ ಅವರು ತಮ್ಮ ಭಾಷಣದಲ್ಲಿ ಅತ್ಯಂತ ನೋವಿನಿಂದ ಸಾಹಿತಿಗಳಲ್ಲದವರು ಹೋಟೆಲ್ ಉದ್ಯಮಿಗಳು ಪರಿಷತ್ತಿನ ಅಧ್ಯಕ್ಷರಾದರೆ ನಮ್ಮಂತವರು ಅಲ್ಲಿ ಕಾಲಿಡಬಾರದು ಅದಕ್ಕಾಗಿ ಧಾರ್ವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಪರ್ಯಾಯವಾಗಿ ಬೆಳೆಸಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು ಸಾಹಿತ್ಯ ಪರಿಷತ್ತು ಕನ್ನಡಿಗರ ದನಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಅದರಲ್ಲಿ ವಿಶೇಷವಾಗಿ ಸಾಹಿತಿ ಮತ್ತು ಸಾಹಿತ್ಯ ಆಸಕ್ತರಿಗೆ ಅದು ಚಟುವಟಿಕೆಯ ತಾಣವಾಗಿದೆ ಇಂತಹ ಪರಿಷತ್ತು ಇಂದು ಅವನತಿಯ ಅಂಚಿಗೆ ಬಂದು ಮುಟ್ಟಿದೆ ಕಾರಣವಿಷ್ಟೇ ಸಾಹಿತಿಗಳಲ್ಲದವರು ಸಾಹಿತ್ಯ ಚಟುವಟಿಕೆಗಳನ್ನು ಅರಿಯದವರು ಅದ ರ ಸಂಪರ್ಕ ಇಲ್ಲದವರು ಅಧ್ಯಕ್ಷರಾಗುವುದು ಮತ್ತು ಸಾಹಿತಿಗಳ ಅಲ್ಲದವರು ಅಧಿಕ ಪ್ರಮಾಣದಲ್ಲಿ ಮತದಾರರಾಗಿರುವುದು ನೋವಿನ ಸಂಗತಿಯಾಗಿದೆ ಸುಮಾರು ನಾಲ್ಕು ಲಕ್ಷ ಮತದಾರರಿದ್ದಾರೆ ಅತ್ಯಂತ ಹೆಚ್ಚಿನ ಸಂಖ್ಯೆಯ ಆಜೀವ ಸದಸ್ಯರನ್ನು ಹೊಂದಿದ ದೊಡ್ಡ ಸಂಸ್ಥೆಯಾಗಿದೆ ಈ ಸಂಸ್ಥೆಗೆ ಯಾರನ್ನು ನಾವು ಆಯ್ಕೆ ಮಾಡಿದರೆ ಸೂಕ್ತ ಎಂಬುದನ್ನು ಪರಿಷತ್ತಿನ ಪ್ರಭುದ್ಧ ಮತದಾರರು ಅರಿತುಕೊಳ್ಳಬೇಕು ಪರಿಷತ್ತಿನ ಧೇಯ ಉದ್ದೇಶಗಳು ಹಾಳು ಗಿಡವಿದ್ದಾರೆ ಆದ್ದರಿಂದ ಮತದಾರರು ಎಚ್ಚರಿಕೆಯಿಂದ ಮತ ಈ ಬಾರಿ ಮತ ಚಲಾಯಿಸಬೇಕು 111 ವರ್ಷದ ಇತಿಹಾಸದಲ್ಲಿ ಬಹುಪಾಲು ಹಳೆ ಮೈಸೂರಿನವರೇ ಅಧ್ಯಕ್ಷರಾಗಿದ್ದಾರೆ ಎರಡು ಮೂರು ಅವಧಿಗೆ ಮಾತ್ರ ಉತ್ತರ ಕರ್ನಾಟಕದವರು ಆಗಿದ್ದಾರೆ ಆದರೆ ಕಲ್ಯಾಣ ಕರ್ನಾಟಕದವರಿಗೆ ಅವಕಾಶವೇ ಸಿಕ್ಕಿಲ್ಲ ನಾವು ಮಲತಾಯಿ ಮಕ್ಕಳು ಆದಂತಾಗಿದ್ದೇವೆ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವ ವ್ಯವಸ್ಥೆ ಮುಂದುವರೆಯಬಾರದು ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಪ್ರಾದೇಶಿಕ ಮಹತ್ವತೆ ನೀಡುವುದಕ್ಕಾಗಿ ಈ ಬಾರಿ ಕಲ್ಯಾಣ ಕರ್ನಾಟಕದವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಮಸ್ತ ಮತದಾರರಿಗೆ ವಿನಂತಿಸಿಕೊಳ್ಳುತ್ತೇನೆ ಮತ್ತು ಈ ಬಾರಿ ನಾನು ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎರಡು ಬಾರಿ ಸೋತಿದ್ದೇನೆ ಆ ಸೋಲು ಮೂರನೇ ಬಾರಿಗೆ ಗೆಲುವಿನ ಸೋಪಾನವಾಗಿ ಪರಿವರ್ತನೆ ಯಾಗುತ್ತದೆ ಎಂಬ ಭರವಸೆ ನನಗಿದೆ ತಾವೆಲ್ಲ ಪರಿಷತ್ತಿನ ಮತದಾರರು ಹರಸಿ ಆಶೀರ್ವದಿಸಬೇಕೆಂದು ವಿನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ



