ಭಾರತದಲ್ಲಿ ತಲಸೇಮಿಯಾ ಬಾಧಿತ ಮಕ್ಕಳಿಗಾಗಿ ಮೈಲಿಗಲ್ಲು ಆಚರಿಸಿದ DKMS ಮತ್ತು ಸಂಕಲ್ಪ – ಬೆಂಗಳೂರು,

1,000 ಹೊಸ ಆರಂಭಗಳು : ಭಾರತದಲ್ಲಿ ತಲಸೇಮಿಯಾ ಬಾಧಿತ ಮಕ್ಕಳಿಗಾಗಿ ಮೈಲಿಗಲ್ಲು ಆಚರಿಸಿದ DKMS ಮತ್ತು ಸಂಕಲ್ಪ
ಬೆಂಗಳೂರು, ಭಾರತ – 4 ಸೆಪ್ಟೆಂಬರ್ 2026 ಒಂದು ಸಾವಿರ ಮಕ್ಕಳು, ಒಂದು ಸಾವಿರ ಕುಟುಂಬಗಳು ಮತ್ತು ಒಂದು ಸಾವಿರ ಹೊಸ ಆರಂಭಗಳು: ಸಂಕಲ್ಪ ಇಂಡಿಯಾ ಫೌಂಡೇಶನ್ 1,000 ಮಕ್ಕಳ ಸ್ಟೆಮ್ ಸೆಲ್ ಟ್ರಾನ್ಸ್‌ಪಾಂಟೇಶನ್ (ಕಾಂಡಕೋಶ ಕಸಿ) ಪೂರ್ಣಗೊಳಿಸುವ ಮೂಲಕ ಅಪರೂಪದ ಮೈಲಿಗಲನ್ನು ಸಾಧಿಸಿದೆ. ಇದು ತೀವು ಮಾದರಿಯ ಅನುವಂಶಿಕ ರಕ್ತಸ್ರಾವದ ಕಾಯಿಲೆಯಾದ ತಲಸೇಮಿಯಾದಿಂದ ಬಳಲುತ್ತಿರುವ ಮಕ್ಕಳಿಗೆ ನಿಯಮಿತ ರಕ್ತಪೂರಣ ಮತ್ತು ಆಜೀವ ಚಿಕಿತ್ಸೆಯಿಂದ ಮುಕ್ತಿ ನೀಡಿ, ಆರೋಗ್ಯಕರ ಜೀವನದ ಭರವಸೆಯನ್ನು ಮೂಡಿಸಿದೆ. ಈ ಸಾಧನೆಯನ್ನು ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ “1,000 ಆರಂಭಗಳು” ಎಂಬ ಪರಿಕಲ್ಪನೆಯಡಿಯಲ್ಲಿ ಆಚರಿಸಲಾಗುವುದು. ಇದು ಸಂಕಲ್ಪ ಇಂಡಿಯಾ ಫೌಂಡೇಶನ್, ಅಂತಾರಾಷ್ಟ್ರೀಯ ಲಾಭರಹಿತ ಸಂಸ್ಥೆಯಾದ DKMS ಹಾಗೂ ವೈದ್ಯಕೀಯ ಮತ್ತು ಜ್ಞಾನ ಪಾಲುದಾರ ಸಂಸ್ಥೆಯಾದ ‘ಕ್ಯೂರ್2ಚಿಲ್ಮನ್ ಫೌಂಡೇಶನ್’ ನಡುವಿನ ಹತ್ತು ವರ್ಷಗಳಿಗೂ ಹೆಚ್ಚಿನ ಸಹಭಾಗಿತ್ವದ ಪ್ರಮುಖ ಸಾಧನೆಯನ್ನು ಗುರುತಿಸುತ್ತದೆ.
ಸಂಕಲ್ಪ ಸಂಸ್ಥೆಯ ಮೂಲಕ ನಡೆಸಲಾದ 1,000 ಟ್ರಾನ್ಸ್ ಪ್ಯಾಂಟ್‌ಗಳಲ್ಲಿ.., DKMS ಸಂಸ್ಥೆಯು 820ಕ್ಕೂ ಹೆಚ್ಚು ಮಕ್ಕಳ ಚಿಕಿತ್ಸಾ ವೆಚ್ಚಕ್ಕೆ ನೆರವು ನೀಡಿದೆ. ವರ್ಷಗಳು ಕಳೆದಂತೆ, ಈ ಸಹಯೋಗವು ಕೇವಲ ಪ್ರತ್ಯೇಕ ಟ್ರಾನ್ಸ್ ಪಾಂಟ್‌ಗಳಿಗೆ ಆರ್ಥಿಕ ನೆರವು ನೀಡುವುದನ್ನು ಮೀರಿ ಬೆಳೆದಿದೆ. ಇಂದು ಇದು ತಲಸೇಮಿಯಾ ಆರೈಕೆ ಟ್ರಾನ್ಸ್ ಪಾಂಟೇಶನ್ ಮೂಲಸೌಕರ್ಯ ಮತ್ತು ರೋಗನಿರ್ಣಯ, ತಜ್ಞರ ತರಬೇತಿ ಹಾಗೂ ವೈದ್ಯಕೀಯ ಸಂಶೋಧನೆಗಳನ್ನು ಒಳಗೊಂಡಿದೆ.
“ಒಂದು ಸಾವಿರ ಟ್ರಾನ್ಸ್ ಪ್ಯಾಂಟ್ ಗಳು ದೀರ್ಘಕಾಲೀನ ಸಹಭಾಗಿತ್ವವು ಏನು ಸಾಧಿಸಬಲ್ಲದು ಎಂಬುದನ್ನು ತೋರಿಸುತ್ತವೆ. ಸಂಕಲ್ಪ ಸಂಸ್ಥೆಯು ಅದ್ಭುತವಾದ ಸ್ಥಳೀಯ ನೈಪುಣ್ಯತೆ ಮತ್ತು ಬದ್ಧತೆಯನ್ನು ತಂದರೆ, ಕ್ಯೂರ್2ಚಿಲ್ಮನ್ ಪ್ರಮುಖ ವೈದ್ಯಕೀಯ ಜ್ಞಾನವನ್ನು ನೀಡುತ್ತದೆ. ನಾವು ಒಟ್ಟಾಗಿ ಹೆಚ್ಚಿನ ಮಕ್ಕಳಿಗೆ ಗುಣಮುಖರಾಗುವ ಅವಕಾಶವನ್ನು ನಿಜವಾಗಿಸಲು ನೆರವಾಗುತ್ತಿದ್ದೇವೆ. ನಾವು ಕಟ್ಟಲು ಬಯಸುವ ಸುಸ್ಥಿರ ಸಹಯೋಗ ಇದೇ ಆಗಿದೆ: ದೇಶದಲ್ಲಿಯೇ, ದೇಶಕ್ಕಾಗಿ, ” ಎಂದು DKMS ಜಾಗತಿಕ ಸಿಇಒ ಡಾ. ಎಲೈ ನೊಯ್ದಾರ್ ಹೇಳಿದ್ದಾರೆ.
ಹತ್ತು ವರ್ಷಗಳಿಗೂ ಹೆಚ್ಚು ಕಾಲ ಬೆಳೆದ ಪ್ರಭಾವ
ಸಂಕಲ್ಪ ಸಂಸ್ಥೆಯು ಕ್ಯೂರ್ 2 ಚಿಲ್ಮನ್ ಸಹಭಾಗಿತ್ವದಲ್ಲಿ, 2015 ರಲ್ಲಿ, ಬೆಂಗಳೂರಿನಲಿ.. ತನ್ನ ಮೊದಲ ಮಕ್ಕಳ ಮೂಳೆ ಮಜ್ಜೆ ಕಸಿ (ಬೋನ್ ಮ್ಯಾರೋ ಟ್ರಾನ್ಸ್ ಪಾಂಟೇಶನ್) ಕಾರ್ಯಕ್ರಮವನ್ನು ಪ್ರಾರಂಭಿಸಿತು. ಅದೇ ವರ್ಷದಲಿ.., ಉಚಿತ ಹೆಚ್‌ಎಲ್‌ಎ ಟೈಪಿಂಗ್ ಮೂಲಕ DKMS ಜೊತೆಗಿನ ಸಹಯೋಗವು ಆರಂಭವಾಗಿ, ಅಂದಿನಿಂದ ಚಿಕಿತ್ಸಾ ಹಾದಿಯಲ್ಲಿ ನಿರಂತರವಾಗಿ ಬೆಳೆದಿದೆ. DKMS ಸಂಸ್ಥೆಯು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಉಚಿತ ಹೆಚ್‌ಎಲ್‌ಎ ಟೈಪಿಂಗ್, ತಲಸೇಮಿಯಾ ನಿರ್ವಹಣೆ ಮತ್ತು ಟ್ರಾನ್ಸ್ ಪ್ಲಾಂಟೇಶನ್ ವೆಚ್ಚಗಳನ್ನು ಭರಿಸುತ್ತಿದ್ದು, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ, ವಿಶೇಷ ಮಕ್ಕಳ ಬಿಎಂಟಿ ಸಾಮರ್ಥ್ಯ…..ಮತ್ತು ಮೊಲಿಕ್ಯೂಲರ್ ಡಯಾಗೋಸ್ಟಿಕ್ಸ್‌ನಲ್ಲಿ ಹೂಡಿಕೆ ಮಾಡಿದೆ. ಈ ಪಾಲುದಾರರು ಶುಶೂಷಕರಿಗೆ (ನರ್ಸ್) ತಜ್ಞ ತರಬೇತಿಯನ್ನು ನೀಡುತ್ತಿದ್ದು, 2025 ರಿಂದ ವೈದ್ಯಕೀಯ ಸಂಶೋಧನೆಯಲ್ಲೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ…… ಭಗವಾನ್ ಮಹಾವೀರರ 2, 500ನೇ ಜಯಂತಿಯ ನೆನಪಿಗಾಗಿ ಮತ್ತು ವಿಶೇಷವಾಗಿ ಅಗತ್ಯವಿರುವ ಜನರಿಗೆ ಕೈಗೆಟುಕುವ ಬೆಲೆಯಲ್ಲಿ, ಆರೋಗ್ಯ ರಕ್ಷಣೆಯನ್ನು ಒದಗಿಸಲು 1975 ರಲ್ಲಿ ಸ್ಥಾಪಿಸಲಾಯಿತು.
ಆಸ್ಪತ್ರೆಯನ್ನು 1990 ರಲ್ಲಿ ಉದ್ಘಾಟಿಸಲಾಯಿತು. ಅಂದಿನಿಂದ ಇದು ತಜ್ಞ ವೈದ್ಯಕೀಯ ನೈಪುಣ್ಯತೆ, ಆಧುನಿಕ ತಂತ್ರಜ್ಞಾನ ಮತ್ತು ಕಾಳಜಿಯುಕ್ತ ರೋಗಿ-ಕೇಂದ್ರಿತ ಆರೈಕೆಯನ್ನು ಸಂಯೋಜಿಸುವ ಪ್ರಮುಖ ರೆಫರಲ್ ಕೇಂದ್ರವಾಗಿ ಬೆಳೆದಿದೆ. ತಂತ್ರಜ್ಞಾನ ಮತ್ತು ವೃತ್ತಿಪರ ಜ್ಞಾನದ ನಿರಂತರ ಪ್ರಗತಿಯ ಮೂಲಕ ಸೇವೆ ನೀಡುವ ತತ್ತ್ವದೊಂದಿಗೆ, ಬಿಎಂಜೆಹೆಚ್ ವೆಚ್ಚವನ್ನು ಕಡಿಮೆ ಕಾಯ್ದುಕೊಳ್ಳುವುದರ ಜೊತೆಗೆ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ತಲುಪಿಸಲು ಬದ್ಧವಾಗಿದೆ. ವರದಿ. ಮಂಜುಳಾ ರೆಡ್ಡಿ.




