ಪತ್ರಿಕೋದ್ಯಮ

ಕರ್ತವ್ಯ ಮರೆತ ಮುದುನೂರು ಗ್ರಾಮ ಪಂಚಾಯತ್ P. D. O. ಸಂಬಂಧಪಟ್ಟ ಸಚಿವರು ಕ್ರಮ ತೆಗೆದುಕೊಳ್ಳಬಲ್ಲರೆ?.

ಶ್ರೀಮತಿ ವೀಣಾ ಗಂಡ ದಿ.ಶಾಂತಗೌಡ ಮುದನೂರು ತಾಲೂಕು ಹುಣಸಗಿ ಜಿಲ್ಲೆ – ಯಾದಗಿರಿ ಇವರ ಪತಿ ಬ್ಯಾಂಕ್ ಲೋನ್ ಮಾಡಿ ಮತ್ತು ಸತತ ಪರಿಶ್ರಮದೊಂದಿಗೆ ಮುದುನೂರು ಗ್ರಾಮದಲ್ಲಿ ಮನೆ ಕಟ್ಟಿಸಿದ್ದರು. ಕೆಲವು ವರ್ಷಗಳ ನಂತರ ವೀಣಾ ಅವರ ಪತಿ ಶಾಂತಗೌಡ ನಿಧನ ಹೊಂದಿದ್ದಾರೆ. ಅವರ ನಿಧನಾನಂತರ ಮನೆಯ ಮೇಲೆ ಬ್ಯಾಂಕಿನಲ್ಲಿದ್ದ ಸುಮಾರು 16, ರಿಂದ 18 ಲಕ್ಷ ಸಾಲವನ್ನು ವೀಣಾ ಅವರು ಸಂಬಂಧಿಕರಿಂದ ತಾಯಿ ಮನೆಯಿಂದ ದುಡ್ಡು ಹೊಂದಿಸಿ, ಎರಡು ತಿಂಗಳ ಹಿಂದೆ ಬ್ಯಾಂಕಿಗೆ ಪಾವತಿಸಿದ್ದಾರೆ ಇಲ್ಲದಿದ್ದರೆ ಬ್ಯಾಂಕಿನ ಅಧಿಕಾರಿಗಳು ಇವರ ಮನೆಯನ್ನು ಆಕ್ಷನ್ ಮಾಡಲು ತಯಾರಿ ನಡೆಸಿದರು ಅದರಂತೆ ವೀಣಾ ಅವರಿಗೆ ನೋಟಿಸ್ ಕೂಡ ಕಳುಹಿಸಿದ್ದರು.

ಶ್ರೀಮತಿ ವೀಣಾ ಅವರ ಪತಿ ದಿ. ಶಾಂತಗೌಡ ನಿಧಾನನಂತರ ಆ ಮನೆಯ ದಾಖಲೆಗಳನ್ನು ಶ್ರೀಮತಿ ವೀಣಾ ಅವರ ಹೆಸರಿಗೆ ವರ್ಗಾಯಿಸಿದ್ದಾರೆ.

ಸರಕಾರಿ ಸುತ್ತೋಲೆಯಂತೆ ಸಂಬಂಧಿಸಿದ ಮನೆಯ ಇ-ಸ್ವತ್ತು ಮಾಡಿಕೊಡಲು ಮುದನೂರ್ ಗ್ರಾಮ ಪಂಚಾಯತ್ ಪಿ.ಡಿ.ಓ. ಅವರು ವೀಣಾ ಅವರಿಗೆ ಇಲ್ಲದ ನೆಪ ಹೇಳಿ ಸುಮಾರು ವರ್ಷಗಳಿಂದ ಈ ಸ್ವತ್ತು ಮಾಡಿಕೊಡದೆ ತೊಂದರೆ ಕೊಡುತ್ತಿದ್ದಾರೆ.

ಮನೆಯ ಕಾನೂನು ಬದ್ಧವಾಗಿರುವ ದಾಖಲೆಗಳನ್ನು ಹಾಗೂ ಅದಕ್ಕೆ ಸಂಬಂಧಿಸಿದ ಸರಕಾರಿ ವೆಚ್ಚವನ್ನು ಚಲನ್ ಮೂಲಕ ಮುದನೂರು ಗ್ರಾಮದ ಗ್ರಾಮ ಪಂಚಾಯತ್ ಖಾತೆಗೆ ಸಂದಾಯ ಮಾಡಿ, ಇ-ಸ್ವತ್ತು ಮಾಡಿಕೊಡಲು ಪಿ.ಡಿ.ಒ. ಅವರಿಗೆ ಮನವಿ ಕೊಟ್ಟರೂ ಇ-ಸ್ವತ್ತು ಮಾಡಿಕೊಡುತ್ತಿಲ್ಲ. ವೀಣಾ ಅವರು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಮುಖಂಡರಿಂದ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ಕೊಟ್ಟು ತಮ್ಮ ಮನೆಯ ಇ-ಸ್ವತ್ತು ಮಾಡಿಕೊಡಲು ಮನವಿ ಮಾಡಿಕೊಂಡಿದ್ದರೂ ಕೂಡ ಇಲ್ಲಿಯವರೆಗೂ ಮುದನೂರು ಮುದನೂರು ಗ್ರಾಮ ಪಂಚಾಯತ್ ಪಿ.ಡಿ.ಓ. ಅಧಿಕಾರಿ ಖ್ಯಾರೇ ಅನ್ನುತ್ತಿಲ್ಲ ಅಂದರೆ ಈ ಪಿ.ಡಿ.ಒ. ಅಧಿಕಾರಿ ಕಾನೂನಿಗಿಂತ ದೊಡ್ಡವರಾಗಿರಬಹುದೇ?

ಶ್ರೀಮತಿ ವೀಣಾ ಅವರು ಕಾನೂನು ಬದ್ಧವಾಗಿರುವ ಮನೆಯ ದಾಖಲೆಗಳನ್ನು ಸಲ್ಲಿಸಿದ್ದರೂ ಕೂಡ ಪಿ. ಡಿ. ಓ. ಅವರು ಅದಕ್ಕೆ ಸೂಕ್ತ ಕಾರಣ ಕೊಟ್ಟು ವೀಣಾ ಅವರ ಮನವಿಯನ್ನು ತಿರಸ್ಕರಿಸಬಹುದಾಗಿತ್ತು ಹಾಗೆ ತಿರಸ್ಕರಿಸಿದ ಮನವಿಯ ಬಗ್ಗೆ ಹಿಂಬರಹ ಕೊಡಬಹುದಾಗಿತ್ತು. ಇದ್ಯಾವುದನ್ನು ಮಾಡುತ್ತಿಲ್ಲ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಸ್ಪಷ್ಟನೆ ಕೊಡುತ್ತಿಲ್ಲ.

ಮುದನೂರು ಗ್ರಾಮ ಪಂಚಾಯತ್ ಕಾರ್ಯಾಲಯದ ಪಿ. ಡಿ. ಓ. ಅಧಿಕಾರಿ, ಕಾನೂನು ಬದ್ದವಾಗಿರುವ , ಮನೆಯ ಇ-ಸ್ವತ್ತು ಮಾಡಲು ನಿರ್ಲಕ್ಷಿಸುತ್ತಿದ್ದಾರೆ. ಶ್ರೀಮತಿ ವೀಣಾ ಅವರ ದಾಯಾದಿಗಳು ತಕರಾರು ಮಾಡಿದ್ದಾರೆ ಎಂದು ಇ-ಸ್ವತ್ತು ಮಾಡುವ ಪ್ರಕ್ರಿಯೆ ನಿಲ್ಲಿಸಿದ್ದಾರೆ. ಅಷ್ಟೇ ಅಲ್ಲ. ತಕರಾರು ಸಲ್ಲಿಸಿದ ವ್ಯಕ್ತಿಯ ಅರ್ಜಿಗಳನ್ನು ಪಿ.ಡಿ.ಒ. ಅವರು ಆಕೆ ಇರುವ ಸ್ಥಳಕ್ಕೆ ( ಶ್ರೀಮತಿ ವೀಣಾ ಅವರು ತಮ್ಮ ಜೀವ ಭಯದಿಂದಾಗಿ ಮುದನೂರು ಗ್ರಾಮದಿಂದ ಹೋಗಿ ತಮ್ಮ ತವರೂರು ಸೇಡಂ ತಾಲೂಕಿನ ಕೋಡ್ಲಾ ಗ್ರಾಮದಲ್ಲಿ ತಾತ್ಕಾಲಿಕವಾಗಿ ಇದ್ದಾರೆ. ಕೆಲವು ದಿನಗಳಾಗಿವೆ ಅಷ್ಟೇ ) ಆಕೆಯ ತವರೂರಿನ ವಿಳಾಸಕ್ಕೆ ತಕರಾರು ಅರ್ಜಿಗಳನ್ನು ನೋಂದಣಿ ಅಂಚೆಯ ಮೂಲಕ ಕಳುಹಿಸಿದ್ದಾರೆ. ಇದ್ಯಾವ ನ್ಯಾಯವೋ ಆ ದೇವರಿಗೆನೇ ಗೊತ್ತು. ಈ ಅಧಿಕಾರಿಗೆ ಸಂಬಂಧಿಸಿದ ತಕರಾರು ಅರ್ಜಿಗಳ ಬಗ್ಗೆ ಪರಿಶೀಲಿಸುವ ಜಾಣತನವೂ ಇಲ್ಲ. ಮತ್ತು ಹಿಂಬರಹ ಕೊಡುವ ಜ್ಞಾನವು ಇಲ್ಲ.

ಕಾನೂನು ಬದ್ಧವಾಗಿ ಇರುವ ದಾಖಲೆಗಳನ್ನು ಪರಿಶೀಲಿಸುವ ವ್ಯವಧಾನವಿಲ್ಲದೆ ತಮ್ಮ ಅಧಿಕಾರದ ಪರಿಧಿಯಲ್ಲಿ ಕ್ರಮ ತೆಗೆದುಕೊಳ್ಳುವ ಕನಿಷ್ಠ ಜ್ಞಾನವು ಇಲ್ಲವೆಂದರೆ ಸಾರ್ವಜನಿಕ ಅಧಿಕಾರಿ ಅದ್ಯಾವ ತರಹ ಸರ್ಕಾರಿ ಕರ್ತವ್ಯ ನಿಭಾಯಿಸುತ್ತಾರೋ ಎನ್ನುವುದೇ ಸಂಶಯಕ್ಕೆ ಈಡು ಮಾಡಿಕೊಟ್ಟಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಸನ್ಮಾನ್ಯ ಶ್ರೀ ಈಶ್ವರ್ ಖಂಡ್ರಿಯವರೇ, ತಮ್ಮ ಆಧೀನದಲ್ಲಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸಿಬ್ಬಂದಿಗಳು, ನೌಕರರು, ಅಧಿಕಾರಿಗಳಿಗೆ ಕರ್ತವ್ಯದ ಕನಿಷ್ಠ ಜ್ಞಾನದ ಬಗ್ಗೆ ಇಲಾಖೆಯಿಂದ ತರಬೇತಿ ಕೊಡಿಸಲು ವಿನಂತಿ.

ಅಲ್ಲದೆ ಶ್ರೀಮತಿ ವೀಣಾ ಗಂಡ ದಿ. ಶಾಂತಗೌಡ ಮುದನೂರು ತಾಲೂಕ ಹುಣಸಗಿ ಜಿಲ್ಲಾ ಯಾದಗಿರಿ ಇವರ ಪತಿಯ ಸ್ವತಹಶ್ರಮದಿಂದ ಕಟ್ಟಿಸಿದ ಮನೆಯ ನ್ಯಾಯ ಬದ್ಧ, ಕಾನೂನು ಬದ್ಧವಾಗಿರುವ ದಾಖಲೆಗಳನ್ನು ಪರಿಶೀಲಿಸಿ ಮನೆಯ ಈ ಸ್ವತ್ತು ಮಾಡಿಕೊಳ್ಳಲು ಮುದನೂರು ಗ್ರಾಮ ಪಂಚಾಯತ್ ಪಿ.ಡಿ.ಓ. ಅವರಿಗೆ ಸಂಬಂಧಿಸಿದ ಅಧಿಕಾರಿಗಳಿಂದ ನಿರ್ದೇಶಿಸಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ. ಎಂ. ಎ. ಸುಗಂಧಿ. ವಕೀಲರು ಬೆಂಗಳೂರು 9731113141.

Related Articles

Leave a Reply

Your email address will not be published. Required fields are marked *

Back to top button