ಪತ್ರಿಕೋದ್ಯಮ

ಭ್ರಷ್ಟಾಚಾರದ ಸಹಿಷ್ಣುತೆ ಪ್ರಜಾಪ್ರಭುತ್ವಕ್ಕೆ ಮಾರಕ..Shivaraj Patil ಕಲಬುರ್ಗಿ.

ಭ್ರಷ್ಟಾಚಾರದ ಸಹಿಷ್ಣುತೆ ಪ್ರಜಾಪ್ರಭುತ್ವಕ್ಕೆ ಮಾರಕ

ಕಲಬುರಗಿ: ಭಾರತೀಯರ ಜೀವನದಲ್ಲಿ ಭ್ರಷ್ಟಾಚಾರ ಒಂದು ಒಪ್ಪಿಕೊಂಡು ಬಂದ ಮೌಲ್ಯದಂತಾಗಿದ್ದು ಅದಕ್ಕಿರುವ ಅಪಾರ ಸಹಿಷ್ಣುತೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಪತ್ರಕರ್ತ ಮತ್ತು ಸಾಹಿತಿ ಶ್ರೀನಿವಾಸ ಸಿರನೂರಕರ್ ಹೇಳಿದ್ದಾರೆ.
ಭಾರತ ರಾಷ್ಟ್ರೀಯ ಭ್ರಷ್ಟಾಚಾರ ವಿರೋಧ ಮತ್ತು ಕಾರ್ಯಾಚರಣೆ ಸಮಿತಿ ಕಲಬುರಗಿ ಜಿಲ್ಲಾ ಘಟಕದ ಮೂರನೇ ವಾರ್ಷಿಕ ಸಮ್ಮೇಳನವನ್ನು ಇಲ್ಲಿಯ ಪೂರ್ಣಾನಂದ ಪ್ಯಾರಾಡೈಸ್ ಸಭಾಂಗಣದಲ್ಲಿ ಈಚೆಗೆ ಉದ್ಘಾಟಿಸಿ ಮಾತನಾಡಿದ ಸಿರನೂರಕರ್ ಬ್ರಹ್ಮಾಂಡ ಸ್ವರೂಪಿಯಾಗಿರುವ ಭ್ರಷ್ಟಾಚಾರ ಇಂದು‌ ಭಾರತ ಎದುರಿಸುತ್ತಿರುವ ಅತಿ‌ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದ್ದೆ ಎಂದರು. ” ಭ್ರಷ್ಟಾಚಾರ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವದಲ್ಲದೆ ಸರಕಾರದ ಮೇಲಿನ‌ ಸಾರ್ವಜನಿಕ ನಂಬಿಕೆಯನ್ನು ನಾಶಪಡಿಸುತ್ತದೆ. ಬಡತನ ಮತ್ತು ಅಸಮಾನತೆಗೂ ಭ್ರಷ್ಟಚಾರ ಕಾರಣವಾಗುತ್ತದೆ” ಎಂದು ಸಿರನೂರಕರ್ ನುಡಿದರು.
ಭ್ರಷ್ಟಾಚಾರದ ಅಪರಾಧಕ್ಕೆ ಇರುವ ಶಿಕ್ಷೆ ಕೂಡ ಅತ್ಯಂತ ದುರ್ಬಲವಾಗಿದ್ದು ಪ್ರಾಚೀನ‌ ಮತ್ತು ಮಧ್ಯಯುಗದಲ್ಲಿದ್ದ ಭ್ರಷ್ಟರ ಎಲ್ಲಾ‌ ಆಸ್ತಿಪಾಸ್ತಿ ವಶಪಡಿಸಿಕೊಂಡು ಗಡಿಪಾರು ಮಾಡುವ ಶಿಕ್ಷೆಯನ್ನು ಜಾರಿಗೊಳಿಸುವುದನ್ನು ಪರಿಶೀಲಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ಲೋಕಾಯುಕ್ತ ಉಪಾಧೀಕ್ಷಕರಾದ ಡಾ.ಬಸವರಾಜ ಎಲಿಗಾರ್ ಅವರು ಮಾತನಾಡಿ ವಿಶ್ವದ ಸುಮಾರು ೧೮೨ ರಾಷ್ಟ್ರಗಳ ಭ್ರಷ್ಟಾಚಾರದ ಪಟ್ಟಿಯಲ್ಲಿ ಭಾರತ ೯೨ನೇ ಸ್ಥಾನದಲಗಲಿದ್ದು ಡೆನ್ಮಾರ್ಕ್ ಅತ್ಯಂತ ಕಡಿಮೆ ಭ್ರಷ್ಟಾಚಾರ ಇರುವ ರಾಷ್ಟ್ರವಾಗಿದೆ ಎಂದರು. ಭಾರತದಲ್ಲಿ ಪ್ರಾಮಾಣಿಕರ‌ ಸಂಖ್ಯೆ ಅಪಾಯಕಾರಿಯಾಗಿ ಕುಸಿಯುತ್ತಿರುವುದೇ ಅನಿಯಂ👆ತ್ರಿತ ಭ್ರಷ್ಟಾಚಾರಕ್ಕೊಂದು ಕಾತಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಶಿವರಾಜ ಪಾಟೀಲ ಅವರು ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಒಡ್ಡುವ ಬಿಟ್ಟಿ‌ ಗ್ಯಾರಂಟಿಗಳು ಜನರನ್ನು ‌ಭ್ರಷ್ಟರನ್ನಾಗಿಸಿದ್ದು ಇದರ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ ಎಂದು ಹೇಳಿದರು.

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಕ್ಷೇತ್ರ ಡಾಕ್ಟರ್ ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ್ ಸರಡಗಿ ಅವರು ವಹಿಸಿದ್ದರ ದಕ್ಷಿಣ ಭಾರತದ ಅಧ್ಯಕ್ಷರಾದ ಡಾ. ಎ ಸುಭದ್ರ ಶೆಟ್ಟಿ ಅವರು ತಪಾಧ್ಯಕ್ಷ ಭಾಷಣವನ್ನು ಮಾಡಿದರು ಶಾಮರಾವ್ ವ್ಯಕ್ತಿಯವರು ಸ್ವಾಗತಿಸಿದರು ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶ್ರೀ ಶೇಷಾದ್ರಿ ಕುಲಕರ್ಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button