ಮಾದೇವಪ್ಪ ರಾಂಪುರೆ ಕೂ.ಡಾ ಬಡಾವಣೆಯಲ್ಲಿ 30 ದಿನಗಳ ಶ್ರಾವಣ ಮಾಸದ ಸಮಾರೋಪ ಸಮಾರಂಭವನ್ನು ಕೂ.ಡಾ.ಬಡಾವಣೆಯ ಔಷಧಿ ಭವನದಲ್ಲಿ ಏರ್ಪಡಿಸಲಾಗಿತ್ತು

ಮಾದೇವಪ್ಪ ರಾಂಪುರೆ ಕೂ.ಡಾ ಬಡಾವಣೆಯಲ್ಲಿ ಐದು ವರ್ಷಗಳಿಂದ ಸತತವಾಗಿ ಶ್ರಾವಣ ಮಾಸದಲ್ಲಿ ಪೂರ್ತಿಯಾಗಿ 30 ದಿನಗಳವರೆಗೆ ಪ್ರತಿದಿನ ವಿಶೇಷ ಉಪನ್ಯಾಸಕರನ್ನು ಕರೆಯಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಅದೇ ರೀತಿ ಈ ಐದನೇ ವರ್ಷದಲ್ಲಿ 30 ದಿನಗಳ ಶ್ರಾವಣ ಮಾಸದ ಸಮಾರೋಪ ಸಮಾರಂಭವನ್ನು ಕೂ.ಡಾ.ಬಡಾವಣೆಯ ಔಷಧಿ ಭವನದಲ್ಲಿ ಏರ್ಪಡಿಸಲಾಗಿತ್ತು ಇದೇ ಸಂದರ್ಭದಲ್ಲಿ ದಾನಿಗಳಿಗೂ, ಪ್ರತಿಭಾವಂತ, ವಿದ್ಯಾರ್ಥಿನಿಯರಿಗೂ ಹಾಗೂ ನಿವೃತ್ತಿ ಆದವರಿಗೆ ಸನ್ಮಾನವನ್ನು ಮಾಡಲಾಯಿತು. ಇದನ್ನು ಸ್ಪಂದನ ನಾಗರಿಕ ಕ್ಷ್ಮೇಮಾಭಿವೃದ್ಧಿ ಸಂಘದ ಹಾಗೂ ಬಡಾವಣೆಯ ಇನ್ನಿತರ ಸಂಘಟನೆಗಳ ಆಶ್ರಯದಲ್ಲಿ ನಡೆಸಲಾಗುತ್ತಿದೆ. ಈ ಶ್ರಾವಣ ಮಾಸದ ಸಂಪೂರ್ಣ ಕಾರ್ಯಕ್ರಮದ ಮಾರ್ಗದರ್ಶಿಗಳಾಗಿ ಬಡಾವಣೆಯ ಹಿರಿಯರಾದ ಡಾಕ್ಟರ್ ಬಾಬುರಾವ್ ಕುಲ್ಕರ್ಣಿ ಮತ್ತು ಈ ಶ್ರಾವಣ ಮಾಸದ ಕಾರ್ಯಕ್ರಮದ ಸಂಪೂರ್ಣ ಅಧ್ಯಕ್ಷರಾಗಿ ನಾಗರಾಜ್ ಸುರಪುರ ಅವರು ಗೌರವಾಧ್ಯಕ್ಷರಾಗಿ ನಾಗೇಂದ್ರಪ್ಪ ರವರು ವಹಿಸಿಕೊಂಡಿದ್ದರು. ಈ ಸಮಾರೋಪ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರವರು ಉದ್ಘಾಟಿಸಿದರು ಕಾರ್ಯಕ್ರಮದ ನೇತೃತ್ವವನ್ನು ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕರು ಕೆ.ಕೆಆರ.ಡಿ.ಬಿ ಮಾಜಿ ಅಧ್ಯಕ್ಷರಾದ ದತ್ತಾತ್ರೇಯ ಪಾಟೀಲಗ ರೇವೂರವರು ವಹಿಸಿದ್ದರು ಉಪಸ್ಥಿತರಿದ್ದರು. ಮಾಜಿ ಕೂ.ಡಾ ಅಧ್ಯಕ್ಷರಾದ ಅವಿನಾಶ್ ಕುಲಕರ್ಣಿ ಮತ್ತು ಕೃಷ್ಣಾ ಜಿ ಕುಲಕರ್ಣಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದರು ಕಾರ್ಯಕ್ರಮ ಉದ್ಘಾಟಿಸಿದ ತಿಪ್ಪಣ್ಣಪ್ಪ ಕಮಕನೂರ ತಮ್ಮ ಅನುದಾನದಲ್ಲಿ ಈ ಬಡಾವಣೆಗಾಗಿ ತಾವು ಸಲ್ಲಿಸಿದ ಮನವಿಯಂತೆ ಅನುದಾನವನ್ನು ನೀಡುವೆ ಎಂದು ಕಾರ್ಯಕ್ರಮದ ಕುರಿತು ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೂನದ ಶ್ರೀಗಳು ವಹಿಸಿಕೊಂಡಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಡಾ. ನಾಗರಾಜ್ ಬಡಿಗೇರ್ ಅವರು ಮತ್ತು ಅವರಿಗೆ ಸಹಾಯಕರಾಗಿ ನಾಗರಾಜ್ ಕುಲಕರಣಿಯವರು ಕಾರ್ಯನಿರ್ವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ನಾಗರಾಜ ಸುರುಪುರವರು ಇಡೀ ಕಾಲೋನಿಯ ಸಹಾಯ ಸಹಕಾರದೊಂದಿಗೆ ಶ್ರಾವಣ ಮಾಸದ ಕಾರ್ಯಕ್ರಮ ಯಶಸ್ವಿಯಾಯಿತು ಎಂದು ಬಡಾವಣೆಯ ನಾಗರಿಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು .ಶ್ರೀಗಳ ಆಶೀರ್ವಚನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ನಾಡಗೀತೆಯೊಂದಿಗೆ ಪ್ರಾರಂಭ ಮತ್ತು ವಂದೇ ಮಾತರಂ ಯೊಂದಿಗೆ ಮುಕ್ತಾಯವಾಯಿತು. ವಾಸ್ತವಿಕ ನುಡಿಗಳನ್ನು ಡಾಕ್ಟರ್ ಬಾಬುರಾವ್ ಕುಲಕರ್ಣಿ ಅವರು ಮಂಡಿಸಿದರು ಸ್ವಾಗತವನ್ನು ಆನಂತರವರು ಮಾಡಿದರು. ವಂದನಾರ್ಪಣೆಯನ್ನು ವೀರೇಶ್ ಅರಿಕೇರಿಯವರು ಮಾಡಿದರು.
ನಿವೃತ್ತ ಪ್ರಂಚುಪಾಲರಾದ ಶರಣಪ್ಪ ಕಟ್ಟಿಮನಿ, ವೆಂಕಟೇಶ್ ಅಡ್ವಾಣಿ, ವೀರೇಶ್ ಕ್ಷತ್ರೀಯ, ಗಣಪತಿ ಪೂಜಾರಿ, ಸಾಮಾಜಿಕ ಹೋರಾಟಗಾರ ಪಿಡ್ಡಪ್ಪ ಜಾಲಗಾರ, ನಾಗರಾಜ ಜಮಾದಾರಾಖಾನಿ, ಮತ್ತಿತ್ತರರು ಇದ್ದರು.



