ಜೇವರ್ಗಿ ಪೊಲೀಸ್ ಸ್ಟೇಷನ್ ಪಿ.ಎಸ್.ಐ. ಮೆಹಬೂಬ್ ಅಲಿ. ಉತ್ಸಾಹಿ ಯುವ ಪೊಲೀಸ್ ಅಧಿಕಾರಿಯ ಮನ ಕರಗುವ ಮಾತುಗಳು.

ಜೇವರ್ಗಿ ಪೊಲೀಸ್ ಸ್ಟೇಷನ್ ಪಿ.ಎಸ್.ಐ. ಮೆಹಬೂಬ್ ಅಲಿ. ಉತ್ಸಾಹಿ ಯುವ ಪೊಲೀಸ್ ಅಧಿಕಾರಿಯ ಮನ ಕರಗುವ ಮಾತುಗಳು.
ಹಿಂದುಳಿದ ಕಲ್ಯಾಣ ಕರ್ನಾಟಕದ ಜೇವರ್ಗಿ ಠಾಣೆಯ ಪಿ.ಎಸ್.ಐ. ಶ್ರೀ ಮಹಿಬೂಬ್ ಅಲಿ ಉತ್ಸಾಹಿ, ಪಾದರಸದಂತಹ ವ್ಯಕ್ತಿತ್ವಯುಳ್ಳ ಯುವ ಅಧಿಕಾರಿ. ಇದಕ್ಕೂ ಮೀರಿ ಜನಸ್ನೇಹಿ, ಹಸನ್ಮುಖಿ, ಸಮಾಧಾನ ಗುಣ ಹೊಂದಿದ್ದು, ಠಾಣೆಗೆ ಬರುವ ಪ್ರತಿಯೊಬ್ಬರನ್ನು ಸ್ನೇಹಿತರಂತೆ ನಗುಮುಖದಿಂದ ಸ್ವಾಗತಿಸುತ್ತಾರೆ. ಮುಂದೆ ಕುಡ್ರಿಸಿಕೊಂಡು ಅವರ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸುತ್ತಾ, ಅದಕ್ಕೆ ಪರಿಹಾರ ಕೊಡುವ ಇವರ ಮಾತಿನ ಶೈಲಿ ಎಂತವರಿಗಾದರೂ ಹೃದಯ ತಂಪಾಗಿಸುತ್ತದೆ.
ದಂಪತಿಗಳ ಸಂಸಾರದ ಸಮಸ್ಯೆ ಹೊತ್ತುಕೊಂಡು ಠಾಣೆಗೆ ಬಂದಿದ್ದ ಯುವ ಪತಿ- ಪತ್ನಿಯರಿಗೆ ಶ್ರೀ ಮಹಬೂಬಲಿಯವರು ಹೇಳಿದ ಮನ ಕರಗುವ ಮಾತುಗಳನ್ನು ಇಲ್ಲಿ ಕೇಳೋಣ ಬನ್ನಿ
- ಏ ತಮ್ಮ ಮದುವೆ ಸ್ವರ್ಗದಲ್ಲಿ ಆಗಿರುತ್ತದೆ ಎಂದು ನಾವು ನೀವು ಪತ್ರಿಕೆಗಳಲ್ಲಿ ಹಲವಾರು ಮಾಧ್ಯಮ ಕ್ಷೇತ್ರಗಳಲ್ಲಿ ಓದಿದ್ದು ಕೇಳಿದ್ದೀಯಾ? ನೆನಪಿದೆಯಾ?
- ಹೆಣ್ಣು ಗಂಡಿಗೆ ಮದುವೆ ಎಂಬ ಶಾಸ್ತ್ರ ಜೀವನದಲ್ಲಿ ಒಮ್ಮೆ ದೊರಕುತ್ತದೆ. ವಧು-ವರರನ್ನು ಒಟ್ಟುಗೂಡಿಸಿ ಮುಂದಿನ ಅವರ ಜೀವನ ಸುಗಮವಾಗಿ ಸಾಗಲಿ, ಮುಂದಿನ ಪೀಳಿಗೆ ವೃದ್ಧಿಸಲಿ ಎಂದು ವಯಸ್ಸಿಗೆ ಬಂದು ಹೆಣ್ಣು ಗಂಡನ್ನು ಬೆಸೆಯಲು ಗುರು ಹಿರಿಯರು ತಂದೆ ತಾಯಿಗಳು ಸೇರಿಕೊಂಡು ಮದುವೆ ಮಾಡುತ್ತಾರೆ. ಇದು ಹೆಣ್ಣು ಗಂಡಿನ ನಡುವೆ ಇರುವ ಪವಿತ್ರ ಸಂಬಂಧವಿದು. ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವುದು ನಿನ್ನ ಕೆಲಸ. ಈ ವಿಷಯ ನಿನಗೆ ಗೊತ್ತೇನಪ್ಪಾ. ಸಪ್ತಪದಿ ಅಂದರೆ ಹೆಂಡತಿಯ ಜೊತೆಗೆ ಏಳು ಹೆಜ್ಜೆ ಹಾಕಿದ್ದೀಯಲ್ಲ ಆ 7 ಹೆಜ್ಜೆಗಳಲ್ಲೂ ಒಂದೊಂದು ಮಹತ್ವವಾದ ಮತ್ತು ಜೀವನಕ್ಕೆ ಸಂಬಂಧಿಸಿದ, ಜೀವನಕ್ಕೆ ದಿಕ್ಕು ತೋರಿಸುವ ಅರ್ಥಗರ್ಭಿತವಾದ ಉದ್ದೇಶವಿದೆ ಅದನ್ನು ಅರಿತು ಹೆಂಡತಿಯೊಂದಿಗೆ ಜೀವನ ಮಾಡು.
- ಈಕೆ ನಿನ್ನ ಹೆಂಡತಿಯಾಗಿ ನಿನ್ನ ಜೀವನದಲ್ಲಿ ಬಂದಿದ್ದಾಳೆ ಅವಳ ಒಳ್ಳೆಯ ಗುಣಗಳು ಮತ್ತು ಕೆಲವರು ಚಿಕ್ಕ-ಪುಟ್ಟ ಸಮಸ್ಯೆಗಳನ್ನು ನೀನು ಕ್ಷಮಿಸುತ್ತಾ ಸಹಕಾರ ಸಹಬಾಳ್ವೆ ಮಾಡಲೇಬೇಕು ಈ ಅವಕಾಶ ಬಿಟ್ಟರೆ ಬೇರೇನೂ ಇಲ್ಲ.
- ಈಕೆಯನ್ನು ತೊರೆದು ಮತ್ತೊಂದು ಮದುವೆ ಆಗುವ ವಿಚಾರ ಏನಾದರೂ ಇದೆಯಾ? ಅಂತಹ ಉದ್ದೇಶ ಇಟ್ಟುಕೊಂಡಿದ್ದರೇ ಈಗಲೇ ತಲೆಯಿಂದ ತೆಗೆದು ಹಾಕಿಬಿಡು.
ಸಂಸಾರದಲ್ಲಿ ಸಹಕಾರ ಸಹಬಾಳ್ವೆ ಮುಖ್ಯ. ಮತ್ತೊಂದು ಹೆಣ್ಣಿನೊಂದಿಗೆ ಮದುವೆಯಾದರೆ
ಆಕೆಯಲ್ಲಿ ಎಲ್ಲಾ ಸದ್ಗುಣಗಳೇ ಇರುತ್ತವೆ ಎಂದು ಏನು ಗ್ಯಾರಂಟಿ ? ಹೊಸತಾಗಿ ಬಂದವಳೂ ಕೂಡ ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದಾಗ, ಆಕೆಯನ್ನು ಬಿಟ್ಟು 3 ನೇ ಮದುವೆಯಾಗುತ್ತೀಯ? ಮದುವೆ ಎನ್ನುವುದು ಮಕ್ಕಳ ಆಟ ಎಂದು ತಿಳಿದಿದ್ದೀಯಾ?. ಸಿಕ್ಕದ್ದನ್ನೇ ಒಪ್ಪ ಓರಣವಾಗಿ, ನಿಯತ್ತಾಗಿ ಜೀವನ ಮಾಡುವುದನ್ನು ಕಲಿ. ನಿನ್ನ ಜೀವನ ಸುಗಮ, ಸುಖವಾಗಿರುತ್ತದೆ. ಇದ್ದುದ್ದನ್ನು ಸರಿಯಾಗಿ ಬಳಸಿಕೋ, ಇಲ್ಲದರ ಬಗ್ಗೆ ಕನಸು ಕಾಣಬೇಡ. - ತಾಳಿ ಕಟ್ಟಿದ ಮರುಕ್ಷಣವೇ ಈಕೆ ನಿನ್ನ ಅರ್ಧಾಂಗಿಯಾಗಿದ್ದಾಳೆ. ಮುಂದಿನ ನಿನ್ನ ಜೀವನದಲ್ಲಿ ಈಕೆ ನಿನ್ನ ದೇಹದ ಅರ್ಧ ಭಾಗ ಎಂದು ತಿಳಿದುಕೊಳ್ಳಲೇಬೇಕು. ಇದು ನಾನು ನೀನು ಹೇಳೋದಲ್ಲ. ನಮ್ಮ ಸಂಸ್ಕೃತಿ, ಪುರಾಣ, ಪುಣ್ಯ ಕಥೆಗಳೂ ಕೂಡ ಇದೇ ಹೇಳುತ್ತವೆ . ಆಕೆಯ ತಪ್ಪುಗಳನ್ನು ಮನ್ನಿಸುತ್ತ, ಸಂಸಾರದಲ್ಲಿ ಆಕೆಯೂ ಕೆಲವು ಸಲಹೆ ಸೂಚನೆಗಳನ್ನು ಕೊಡುತ್ತಿದ್ದರೆ ಅದನ್ನೂ ಕೇಳುತ್ತಾ ಸಂಸಾರ ಮಾಡಬೇಕು. ಮದುವೆಯಾಗುವವರೆಗೂ ಅಣ್ಣ ತಮ್ಮ ಅಕ್ಕ ತಂಗಿ ತಂದೆ ತಾಯಿ ದಾಯಾದಿಗಳ ಮಾತು ಕೇಳುತ್ತ ಬೆಳೆದಿರುತ್ತೇವೆ. ಮದುವೆಯಾದ ನಂತರ ಪತ್ನಿಯ ಬಗ್ಗೆ ಕಾಳಜಿ ವಹಿಸಬೇಕು. ಆಕೆಯ ಮಾತಿಗೂ ಬೆಲೆ ಕೊಡಬೇಕು. ನಮ್ಮನ್ನೇ ನಂಬಿ ಬಂದಿರುವ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೆಂಡತಿ ಹೇಳುವ ಹಲವಾರು ಸೂಚನೆಗಳನ್ನು ಗೌರವಿಸಬೇಕು. ಆಗ ಮಾತ್ರ ನಿನ್ನ ಜೀವನ, ಸಂಸಾರ, ಮಕ್ಕಳು ಆಗಿ ಸಮಾಜದಲ್ಲಿ ನಿನಗೆ ಗೌರವ ಸಿಕ್ಕುತ್ತದೆ. ಇಲ್ಲದಿದ್ದರೇ ಸಮಾಜ ನಿನ್ನನ್ನು ಗೌರವಿಸುವುದಿಲ್ಲ. ಹೆಂಡತಿಯೊಂದಿಗೆ ಬಾಳಲಾರದ ಮೂರ್ಖ ಎಂದು ಹೀಯಾಳಿಸುತ್ತಾರೆ.
ಅದೇ ತರಹ ಪಿ. ಎಸ್. ಐ. ಮಹಬೂಬ ಅಲಿಯವರು ಹುಡುಗಿಯ ಜೊತೆ ಮಾತಾಡುತ್ತ.
ಏನಮ್ಮ ನಿನ್ನ ತೊಂದರೆ? ನಿನ್ನ ಗಂಡ ಹೊಡೆಯುವುದು ಬಡಿಯೋದು ಮಾಡ್ತಾನ? ಇಲ್ಲ ಎಂದು ಹೇಳ್ತಾ ಇದ್ದೀಯಾ. ಮತ್ತೇನು ಸಮಸ್ಯೆ? ಇಲ್ಲಿವರೆಗೂ ನಾನು ನಿನ್ನ ಗಂಡನಿಗೆ ಹೇಳಿದ ಮಾತು ನಿನಗೂ ಅನ್ವಯಿಸುತ್ತದೆ. ಮದುವೆಯಾದ ನಂತರ ಹುಟ್ಟಿ ಬೆಳೆದ ಮನೆ ಬಿಟ್ಟು ಗಂಡನ ಮನೆಗೆ ಬಂದಿರ್ತೀಯ. ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಕೆಲವು ದಿನಗಳೇ ಬೇಕಾಗುತ್ತವೆ. ಸಹಿಸಿಕೊಳ್ಳಬೇಕಮ್ಮ. ಇದೇ ನಿನ್ನ ಜೀವನ. ಭವಿಷ್ಯದಲ್ಲಿ ನಿನ್ನ ಜೀವನದಲ್ಲಿ ಗಂಡ ಮಕ್ಕಳೇ ನಿನಗೆ ದಿಕ್ಕು. ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಅವರು ನಿನ್ನ ಕಷ್ಟ ಸುಖ ವಿಚಾರಿಸಬಹುದಷ್ಟೇ ಅವರೆಲ್ಲ ನೆಪ ಮಾತ್ರಕ್ಕೆ ಇರುತ್ತಾರೆ. ಆದರೆ ಜೀವನ ಮಾತ್ರ ನಿನ್ನ ಗಂಡನೊಂದಿಗೆ ಮಾಡಲೇಬೇಕಾಗುತ್ತದೆ. ತವರಿನಲ್ಲಿ ತಂದೆ ತಾಯಿ ಇದ್ದರು. ಗಂಡನ ಮನೆಯಲ್ಲಿ ಅತ್ತೆ ಮಾವ ಇರುತ್ತಾರೆ ಅವರನ್ನೇ ತಂದೆ ತಾಯಿ ಎಂದು ತಿಳಿದುಕೊಳ್ಳಬೇಕು. ಸಾಮರಸ್ಯ, ಸಮಾಧಾನದಿಂದ ಜೀವನ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಈ ದುಷ್ಟ ಸಮಾಜ ಕೆಟ್ಟ ದೃಷ್ಟಿಯಿಂದ ನೋಡುತ್ತದೆ. ಈ ದುಷ್ಟ ಸಮಾಜದ ಜನ ನಿಮ್ಮ ಬಗ್ಗೆ ಇನ್ನಿಲ್ಲದಂತಹ, ಮನಸ್ಸು ಘಾಸಿಗೊಳ್ಳುವಂತಹ, ಮಾತನಾಡುತ್ತದೆ. ಅದನ್ನು ಜೀವನಪೂರ್ತಿ ಕೇಳಿಕೊಂಡು ಸಹಿಸಿಕೊಂಡು ಇರಬೇಕಾಗುತ್ತದೆ. ಅಂತಹ ಜೀವನ ವೈರಿಗೂ ಬೇಡ. ನಿನ್ನ ಗಂಡ ಮಕ್ಕಳೇ ನಿನ್ನ ಲೋಕ, ಈ ಲೋಕವನ್ನು ನೀನು ಪ್ರೀತಿಸಬೇಕು. ಗೌರವಿಸಬೇಕು ಗಂಡ ಅತ್ತೆ ಮಾವನೊಂದಿಗೆ ಹೊಂದಿಕೊಂಡು ಚೆನ್ನಾಗಿ ಬಾಳ್ವೆ ಮಾಡಬೇಕಮ್ಮ ಹೋಗು ಚೆನ್ನಾಗಿರು. ಮತ್ತೆ ಬರುವಂಥ ಆಗದಿರಲಿ. ಎಂದು ನಗುತ್ತಾ ಹರಸಿ, ಹಾರೈಸಿ ಕಳುಹಿಸಿದರು
ಜೇವರ್ಗಿ ಪೊಲೀಸ್ ಸ್ಟೇಷನ್ ಪಿ.ಎಸ್.ಐ. ಅವರದ್ದುವು ಕೂಡ ಚಿಕ್ಕ ವಯಸ್ಸೇ, ಆದರೆ ಅವರ ಅನುಭವದ ಮಾತುಗಳು ಅಭೂತಪೂರ್ವ ಆಗಿವೆ. ಹರಿದು ಹೋಗುವ ಸಂಸಾರದ ವಿಷಯಗಳನ್ನು ಅರಿತುಕೊಂಡಿರುವ ಇವರು ಗಂಡ ಹೆಂಡತಿ ಇಬ್ಬರನ್ನು ಮುಂದೆ ಕೂಡಿಸಿಕೊಂಡು ಬುದ್ದಿ ಹೇಳಿ, ಸಂಬಂಧವನ್ನು ಕೂಡಿಸಲು ನಗು ಮೊಗದಿಂದಲೇ ಪ್ರಯತ್ನಿಸಿದರು.
ಅದೇ ತರಹ ಮಾತನ್ನಾಡಿ ಸಾರ್ವಜನಿಕರ ಮನ ಗೆಲ್ಲುತ್ತಾರೆ. ಇವರಿಗೆ ಹುಟ್ಟಿನಿಂದಲೇ ಬಂದಿರುವ ಶಾಂತ ಸ್ವಭಾವ, ಸ್ನೇಹಮಯ ನಡೆ, ಜನರನ್ನು ಮಾತಿನ ಮೋಡಿಯಲ್ಲಿಯೇ ಕಟ್ಟಿ ಹಾಕುವ ಇವರ ಚಾಣಾಕ್ಷ ಗುಣ ಮೆಚ್ಚುವಂತದ್ದೇ ಇದರಲ್ಲಿ ಲವಲೇಶವೂ ಕೃತಕತೆ ಎಂದು ಅನ್ನಿಸುವುದಿಲ್ಲ.
ಉಜ್ವಲ ಭವಿಷ್ಯ ಹೊಂದಿರುವ ಪಿ.ಎಸ್.ಐ. ಮಹಿಬೂಬ್ ಅಲಿ ಅವರ ಸೇವೆ ಇದೇ ರೀತಿ ಮುಂದುವರೆಯಲಿ. ಎಂದು ಪ್ರಜಾಶ್ರೀ ಆನ್ಲೈನ್ ಸುದ್ದಿ ಮಾಧ್ಯಮ ಬೆಂಗಳೂರು. ಶ್ರೀಯುತರಿಗೆ ಹರಸಿ, ಹಾರೈಸುತ್ತದೆ.



