ನಾಡದೊರೆ ರಾಜವೀರ ಮದಕರಿನಾಯಕ ಜಯಂತೋತ್ಸವ- ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾ ಸ್ವಾಮಿಜೀ.

ನಾಡದೊರೆ ರಾಜವೀರ ಮದಕರಿನಾಯಕ ಜಯಂತೋತ್ಸವ– ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾ ಸ್ವಾಮಿ
ಬೆಂಗಳೂರು. ಚಿತ್ರದುರ್ಗ ಕೋಟೆ ನಾಡು ಹಾಗೂ ನೆಲದ ರಕ್ಷಣೆಗೆ ತಮ್ಮ ಶೌರ್ಯ, ಸಾಹಸ ಹಾಗೂ ಪರಾಕ್ರಮವನ್ನು ಸಮರ್ಪಿಸಿದ ರಾಜವೀರ ಮದಕರಿ ನಾಯಕ ಅವರ ಸ್ಮರಣಾರ್ಥವಾಗಿ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಇಂದು ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾ ಸ್ವಾಮಿ ಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ನಾಡಿನ ಸ್ವಾಭಿಮಾನ, ಧೈರ್ಯ, ಶೌರ್ಯ ಮತ್ತು ತ್ಯಾಗದ ಪ್ರತೀಕವಾಗಿರುವ ರಾಜವೀರ ಮದಕರಿ ನಾಯಕ ಅವರ ಆದರ್ಶಗಳನ್ನು ಮುಂದಿನ ಯುವ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಪವಿತ್ರ ಜಯಂತ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 11-30ಕ್ಕೆ ರಾಜವೀರ ಮದಕರಿ ನಾಯಕ ಪ್ರತಿಮೆ ಒನಕೆ ಓಬವ್ವ ಪ್ರತಿಮೆ। ಅಂಬೇಡ್ಕರ್ ಪ್ರತಿಮೆ ಕನಕದಾಸ ಪ್ರತಿಮೆ ಸಂಗೊಳ್ಳಿರಾಯಣ್ಣ ಪ್ರತಿಮೆ ಜಗಜ್ಯೋತಿ ಬಸವೇಶ್ವರ ಪ್ರತಿಮೆ । ಶ್ರೀಕೃಷ್ಣ ಪ್ರತಿಮೆಗಳಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ
ವೇದಿಕೆ ಕಾರ್ಯಕ್ರಮ : ಮಧ್ಯಾಹ್ನ 1.30ಕ್ಕೆ, ಕನಕ ಸರ್ಕಲ್, ಹೊಳಲ್ಕೆರೆ ರಸ್ತೆ, ಚಿತ್ರದುರ್ಗ
ರಾಜವೀರ ಮದಕರಿ ನಾಯಕರ ನೂತನ ಪ್ರತಿಮೆಯ ಧ್ವನಿವರ್ಧಕಗಳ ಮೂಲಕ ಮೆರವಣಿಗೆ ವಿವಿಧ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು
ಅನ್ನಸಂತರ್ಪಣೆ (ಶ್ರೀ ಬರಗೇರಮ್ಮ ದೇವಸ್ಥಾನದ ಆವರಣದಲ್ಲಿ)
ರಾತ್ರಿ 7.30ಕ್ಕೆ ಮದಕರಿ ಸರ್ಕಲ್ ನಲ್ಲಿ ಧ್ವನಿ ಬೆಳಕಿನ ಪ್ರದರ್ಶನ ಹಾಗೂ ಪಟಾಕಿ ಶೋ & ಲೇಸರ್ ಶೋ
“ಒಗ್ಗಟ್ಟಿನಲ್ಲಿ ಶಕ್ತಿ – ಸಹಭಾಗಿತ್ವದಲ್ಲಿ ಯಶಸ್ಸು”
ಬನ್ನಿ, ಎಲ್ಲರ ಸಹಕಾರ ಮತ್ತು ಸಕ್ರಿಯ ಸಹಭಾಗಿತ್ವದೊಂದಿಗೆ ಜಯಂತೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸುವ ಸಂಕಲ್ಪ ಮಾಡೋಣ. ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ವಿನಮ್ರವಾಗಿ ವಿನಂತಿಸುತ್ತೇವೆ ಎಂದು ತಿಳಿಸಿದರು. ವರದಿ. ಮಂಜುಳಾ ರೆಡ್ಡಿ.




