ನುಡಿ ಭಾರತಿ ಸೌಹಾರ್ದ ಸಹಕಾರ ಸಂಘ ಇನ್ನಷ್ಟು ಸೇವೆ ಸಲ್ಲಿಸಲಿ- ಗುರುರಾಜ ಶೆಟ್ಟಿ. ಮಂಡ್ಯ.

ನುಡಿ ಭಾರತಿ ಸೌಹಾರ್ದ ಸಹಕಾರ ಸಂಘ ಇನ್ನಷ್ಟು ಸೇವೆ ಸಲ್ಲಿಸಲಿ- ಗುರುರಾಜ ಶೆಟ್ಟಿ
ಮಂಡ್ಯ ನುಡಿ ಭಾರತಿ ಸೌಹಾರ್ದ ಸಹಕಾರ ಸಂಘ ಕಳೆದ ಐದು ವರ್ಷದಿಂದ ತನ್ನ ಎಲ್ಲಾ ಸದಸ್ಯರಿಗೆ ನಗದು ಹಾಗೂ ಬಹುಮಾನವನ್ನು ನೀಡುತ್ತಾ ಬಂದಿರುವುದು ಸಂತೋಷವೆಂದು ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರ ಸಂಘದ ಒಕ್ಕೂಟದ ಅಧ್ಯಕ್ಷ ಶ್ರೀ ಗುರುರಾಜ ಶೆಟ್ಟಿ ಅಭಿಪ್ರಾಯ ಪಟ್ಟರು,
ಬಹುತೇಕ ಸಹಕಾರ ಸಂಘಗಳು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿವೆ ಕೆಲವು ಹಳ್ಳ ಹಿಡಿದಿವೆ ಇದರಲ್ಲಿ ನುಡಿ ಭಾರತಿ ಸೌಹಾರ್ದ ಸಹಕಾರ ಸಂಘ ಪ್ರಸ್ತುತ 9.15 ಲಕ್ಷ ರೂಗಳನ್ನು ಆದಾಯ ಗಳಿಸಿ ಸುಮಾರು ಆರು ಕೋಟಿ ಎಷ್ಟು ಹಣವನ್ನು ವ್ಯವಾರ ಮಾಡಿರುವುದು ಸಂತೋಷದ ವಿಷಯವೆಂದು ಆರನೇ ವಾರ್ಷಿಕ ಮಹಾ ಸಭೆಯ ಕಳೆದ ಭಾನುವಾರ ನುಡಿ ಭಾರತಿ ಸಭಾಂಗಣದಲ್ಲಿ ಮಾತನಾಡುತ್ತಾ ತಿಳಿಸಿದರು,
ಅಲ್ಲದೆ ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಮಾರಿ ಪಾವನಿ ಹಾಗೂ ಯದು ಕಿರಣ್ ರವರನ್ನು ಗೌರವಿಸಿ ಸನ್ಮಾನಿಸಲಾಯಿತು,
ಅಲ್ಲದೆ ನುಡಿ ಭಾರತಿ ಸೌಹಾರ್ದ ಸಹಕಾರ ಸಂಘ ಪ್ರಸ್ತುತ ಬೆಳವಣಿಗೆಗೆ ಕಾರಣಕರ್ತರಾದ ಮಂಡ್ಯದ ಯೋಗೇಶ್ ಬಿ ಪಿ, ಉಮ್ಮಡಳ್ಳಿಯ ಕುಮಾರ್, ಯತಗದ ಹಳ್ಳಿಯ ಸಿದ್ದರಾಜು, ಮಂಡ್ಯ ದರ್ಶನ್ ಗೌಡ ಹಾಗೂ ರವಿ ಮತ್ತು ಬೆಸಗರಹಳ್ಳಿಯ ಚಿಕ್ಕವೀರಯ್ಯ ಪಿಗ್ಮಿ ಏಜೆಂಟರಾದ ಶ್ರೀ ಶಿವರಾಜು ಹಾಗೂ ಉಮ್ಮಡ ಹಳ್ಳಿಯ ಶ್ರೀ ಸುಧೀರ್ ಮದ್ದೂರಿನ ಸ್ಮಿತಾ ಮಂಡ್ಯದ ಶ್ರೀಮತಿ ಲೀಲಾ ರವರನ್ನ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು, ಹಾಗೂ ಮಂಡ್ಯ ಜಿಲ್ಲೆಯಲ್ಲಿ ಶ್ರೇಷ್ಠ ಪ್ರಶಸ್ತಿ ಪಡೆದ ಶ್ರೀ ರಮೇಶ್ ಕ್ರಾಂತಿಯೋಗಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರು ಮತ್ತು ನೂತನವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕುಮಾರ್ ಕೊಪ್ಪ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು,
ಸಭೆಯಲ್ಲಿ ಜಿಲ್ಲಾ ಸೌಹಾರ್ದ ಸಹಕಾರದ ಒಕ್ಕೂಟದ ಉಪಾಧ್ಯಕ್ಷ ಶ್ರೀ ಸಿದ್ದಲಿಂಗಯ್ಯನವರು ನುಡಿ ಭಾರತಿ ಸೌಹಾರ್ದ ಸಂಘದ ಉಪಾಧ್ಯಕ್ಷ ಶ್ರೀ ಅರುಣ್ ಕುಮಾರ್ ನಿರ್ದೇಶಕರಾದ ಶ್ರೀ ಸಂದೀಪ್, ಶ್ರೀ ಸ್ವಾಮಿಗೌಡ, ಶ್ರೀ ಅರುಣ್ ಕುಮಾರ್, ವೆಂಕಟೇಶ್ ಟಿ ಡಿ, ಶಂಕರ್, ರಮೇಶ್ ಉಮೇಶ್, ಅರುಣ್, ಕುಮಾರ್ ,ಕೊತ್ತತ್ತಿ ನಾಗರಾಜು, ಯೋಗೇಶ್ ಬಿ ಮತ್ತು ಬಿ ನವೀನ್ ಕುಮಾರ್ ಉಪಸಿದ್ಧರಿದ್ದರು,
ಸಂಘದ ಆಡಳಿತ ಅಧಿಕಾರಿ ಶ್ರೀ ರಂಜಿತ್ ಕುಮಾರ್ ಸ್ವಾಗತಿಸಿದರು, ಸಮಾರಂಭದ ನಿರ್ವಹಣೆಯನ್ನು ಸಂಘದ ನಿರ್ದೇಶಕರು ಶ್ರೀ ದೊರೆಸ್ವಾಮಿ ರವರು ನಿರ್ವಹಿಸಿದರು ,ಸಭೆಯ ಅಧ್ಯಕ್ಷತೆಯನ್ನು ಶ್ರೀ ಎ ಎಲ್ ಬಸವೇಗೌಡ ರವರು ವಹಿಸಿದ್ದರು, ಸಂಘದ ಎಲ್ಲ ಸದಸ್ಯರಿಗೂ ನಗುದು ಹಣ, ಬಹುಮಾನವನ್ನ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.




