ಸೆಪ್ಟೆಂಬರ್ 22ರಂದು ರಾಯಚೂರು ಚಲೋ ಆಯುಷ್ ವೈದ್ಯರುಗಳಿಂದ ಬೃಹತ್ ಪ್ರತಿಭಟನೆ. ಬೆಂಗಳೂರು.

ಸೆಪ್ಟೆಂಬರ್ 22ರಂದು ರಾಯಚೂರು ಚಲೋ ಆಯುಷ್ ವೈದ್ಯರುಗಳಿಂದ ಬೃಹತ್ ಪ್ರತಿಭಟನೆ
ಸೆಪ್ಟೆಂಬರ್ 22ರಂದು ರಾಯಚೂರು ಚಲೋ ಆಯುಷ್ ವೈದ್ಯರುಗಳಿಂದ ಬೃಹತ್ ಪ್ರತಿಭಟನೆ
ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಯುಶ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕದ ವತಿಯಿಂದ ಆಯುಷ್ ವೈದ್ಯರ ಬಹುದಿನಗಳ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ 22ರಂದು ರಾಯಚೂರು ಚಲೋ ಅನಿರ್ದಿಷ್ಟಾವಧಿ ಮುಷ್ಕರ ಮತ್ತು ಧರಣಿ ಸತ್ಯಾಗ್ರಹದ ಕುರಿತು ಅಧ್ಯಕ್ಷರಾದ ಡಾ||ಮೋಹನ್ ಬಿರಾದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಆನಂದ್ ಕಿರಿಶಾಳ, ಪದಾಧಿಕಾರಿಗಳಿಂದ ಮಾಧ್ಯಮಗೋಷ್ಟಿ.
ಅಧ್ಯಕ್ಷರಾದ ಡಾ.ಮೋಹನ್ ಬಿರಾದಾರ ರವರು ಮಾತನಾಡಿ ಆಯುಷ್ ಇಲಾಖೆಯ ವೈದ್ಯರುಗಳಿಗೆ ಸಂಬಳ ಹೆಚ್ಚಳವಿಲ್ಲ ಮತ್ತು ಸಾಮಾಜಿಕ ಕಾರ್ಯಕರ್ತರು ಎಂದು ಹೇಳಿಕೊಂಡು ವಿಡಿಯೊ ಮಾಡುವುದು, ಬ್ಲಾಕ್ ಮೇಲ್ ಮಾಡುತ್ತಿದ್ದಾರೆ.
ಆಯುಷ್ ವೈದ್ಯರುಗಳು ಬಹುದಿನಗಳಿಂದ ವಿವಿಧ ಬೇಡಿಕೆಗಳು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು ನಮ್ಮ ಮನವಿ ಸರ್ಕಾರ ಸ್ಪಂದನೆ ಮಾಡಿಲ್ಲ ಅದ್ದರಿಂದ ಸೆಪ್ಟೆಂಬರ್ 22ರಂದು ರಾಯಚೂರು ಚಲೋ ಮುಷ್ಕರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ 32ಜಿಲ್ಲೆಗಳಿಂದ ಆಯುಷ್ ವೈದ್ಯರುಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಆಯುಷ್ ವೈದ್ಯರುಗಳಿಗೆ ಆಧುನಿಕ ಔಷಧ ಬಳಕೆ, ವೃತಿಪರ ಹಕ್ಕುಗಳು ಮತ್ತು ಸೇವಾ ಅವಕಾಶಗಳು ಹಾಗೂ ಕೆ.ಪಿ.ಎಂ.ಇ. ಕಾಯಿದೆಯಲ್ಲಿ ದೂರು ಸೂಕ್ತ ಪರಿಶೀಲನೆ ಹಲವಾರು ಬೇಡಿಕೆಗಳಿಗಾಗಿ ಸಂಘಟನೆ ಹೋರಾಟ ಮಾಡಲಾಗುತ್ತಿದೆ. ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರ ಇದರ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ವರದಿ. ಮಂಜುಳಾ ರೆಡ್ಡಿ.




