ಅಧಿಕಾರ ಶಾಶ್ವತ ಅಲ್ಲ, ನಿಷ್ಟೆ, ಶ್ರದ್ದೆಯಿಂದ ಕಾಂಗ್ರೆಸ್ ಸೇವಾದಳದ ಕೆಲಸ ಮಾಡಿ- ಎಂ.ರಾಮಚಂದ್ರ
ಕೆಪಿಸಿಸಿ ಸೇವಾದಳ ರಾಜ್ಯ ಪದಾಧಿಕಾರಿಗಳ ಸಭೆ
ಅಧಿಕಾರ ಶಾಶ್ವತ ಅಲ್ಲ, ನಿಷ್ಟೆ, ಶ್ರದ್ದೆಯಿಂದ ಕಾಂಗ್ರೆಸ್ ಸೇವಾದಳದ ಕೆಲಸ ಮಾಡಿ- ಎಂ.ರಾಮಚಂದ್ರ
ಬೆಂಗಳೂರು: ಕೆಪಿಸಿಸಿ ಕಛೇರಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ: ರಾಜ್ಯ ಪದಾಧಿಕಾರಿಗಳ ಸಭೆ.
ಸೇವಾದಳ ರಾಜ್ಯ ಮುಖ್ಯ ಸಂಘಟಕರಾದ ಎಂ.ರಾಮಚಂದ್ರರವರು, ರಾಜ್ಯ ಮಹಿಳಾ ಸಂಘಕರಾದ ಗಿರೀಜಾ ಹೂಗಾರ್, ಸೇವಾದಳ ಕರ್ನಾಟಕದ ಉಸ್ತುವಾರಿ ಸಂಗ್ರಾಮ್ ತಾವಡೆ, ಸಹ ಉಸ್ತುವಾರಿ ವೇಣುಗೋಪಾಲ್, ಕಾರ್ಯಾಧ್ಯಕ್ಷರಾದ ವಿ.ವಿ.ತುಳಸಿಗಿರಿ, ಸೇವಾದಳ ಯುವ ಬ್ರಿಗೇಡ್ ಅಧ್ಯಕ್ಷರಾದ ಜುನೇದ್ ರವರು ಕಾರ್ಯಕಾರಿಣಿ ಸಭೆ ಉದ್ಘಾಟನೆ ಮಾಡಿದರು.
ರಾಜ್ಯ ಮುಖ್ಯ ಸಂಘಟಕ ಎಂ.ರಾಮಚಂದ್ರರವರು ಮಾತನಾಡಿ ಸೇವಾದಳ ರಾಜಕೀಯ ಸಂಘಟನೆ ಮಾಡಬೇಕು ಅಥವಾ ಸೇವಾ ಸಂಘಟನೆ ಮಾಡಬೇಕ ಎಂಬುದು ಚರ್ಚಿಸಲಾಯಿತು. ಸೇವಾದಳದಿಂದ ರಾಜಕೀಯದಲ್ಲಿ ಸಂಘಟನೆ ಹಾಗೂ ಜನ ಸೇವೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಅಧಿಕಾರ ಶಾಶ್ವತ ಅಲ್ಲ, ಜನ ಸೇವೆ ಮತ್ತು ನಿಷ್ಟೆ, ಶ್ರದ್ದೆಯಿಂದ ಸೇವಾದಳ ಸಂಘಟನೆ ಮಾಡಿ, ಎಲ್ಲರು ಒಟ್ಟಾಗಿ ಸಾಗಬೇಕು.
ಸೇವಾದಳದಲ್ಲಿ ಕ್ರಿಯಾಶೀಲರಾಗಿ ಇರುವವರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು .ಸೇವಾದಳ ಸಂಘಟನೆಗಾಗಿ 7 ಕಾರ್ಯಯೋಜನೆ ರೂಪಿಸಲಾಗಿದೆ.
ಜಿಲ್ಲಾಮಟ್ಟದ ಪದಾಧಿಕಾರಿಗಳು ಸೆಪ್ಟಂಬರ್ ಒಳಗೆ ನೀಡಬೇಕು ಹಾಗೂ ಸೇವಾದಳ ಒಬ್ಬ ಕಾರ್ಯಕರ್ತ 10ಸದಸ್ಯರನ್ನ ನೋಂದಾವಣೆ ಮಾಡಬೇಕು. 224ವಿಧಾನಸಭಾ ಕ್ಷೇತ್ರದಲ್ಲಿ ಸೇವಾದಳ ವಿಕ್ಷಕರನ್ನು ನೇಮಕ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಾವಿರ ಸೇವಾದಳ ಸದಸ್ಯರನ್ನು ನೋಂದಾಣೆ ಕಾರ್ಯ.
ಪ್ರತಿ ಜಿಲ್ಲೆಯಲ್ಲಿ ಸೇವಾದಳದ ವತಿಯಿಂದ ಮೂರು ದಿನದ ತರಭೇತಿ ಶಿಬಿರ ಆಯೋಜಿಸಲಾಗುವುದು. ಪ್ರತಿ ಭಾನುವಾರ ಧ್ವಜರೋಹಣ ಮತ್ತು ಧ್ವಜವಂದನಾ ಕಾರ್ಯಕ್ರಮ.
ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ ಸರ್ವೋದಯ ಜ್ಯೋತಿ ಪಾದಯಾತ್ರೆ ಕಾರ್ಯಕ್ರಮ.
1924ರಲ್ಲಿ ಬೆಳಗಾವಿ ನಡೆದ ಕಾಂಗ್ರೆಸ್ ಪಕ್ಷದ ಅಧಿವೇಶನದಲ್ಲಿ ಅಧ್ಯಕ್ಷರಾಗಿದ್ದರು 2024ಶತಮಾನೋತ್ಸವ ಶುಭಾ ಸಂದರ್ಭದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಅವಳಿನಗರದಲ್ಲಿ 10ಸಾವಿರ ಸೇವಾದಳ ವತಿಯಿಂದ ಮಹಾತ್ಮ ಗಾಂಧಿ ಭಾರತ ಸರ್ವೋದಯ ಜ್ಯೋತಿ ಸಮಾವೇಶವನ್ನು 25ನೇ ಡಿಸೆಂಬರ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಸೇವಾದಳ ಸೇವಾಮನೋಭಾವನೆಯಿಂದ ಜನಸೇವೆ ಮತ್ತು ಸಂಘಟನೆ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಹೇಳಿದರು.
ಸೇವಾದಳ ಪದಾಧಿಕಾರಿಗಳ ಸಭೆಯಲ್ಲಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರು , ಪದಾಧಿಕಾರಿಗಳು ಪಾಲ್ಗೊಂಡಿದ್ದರು.



