ಸಂಪಾದಕೀಯ

ಕಲಬುರ್ಗಿಯಲ್ಲಿ 5 ನೆಯ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನ.

ಕಲಬುರ್ಗಿಯಲ್ಲಿ 5 ನೆಯ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನ


ಬೆಂಗಳೂರ: ಹೈದರಾಬಾದ್ ಕರ್ನಾಟಕ ಪುಸ್ತಕ ಪ್ರಕಾಶಕರ ಮುದ್ರಕರ ಮಾರಾಟಗಾರರ ಸಂಘದ ವತಿಯಿಂದ 5ನೇ ಬಾರಿಗೆ ಕಲ್ಯಾಣ ಕರ್ನಾಟಕ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನವನ್ನು
2026ರ ಮೇ ಅಂತ್ಯದಲ್ಲಿ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪುಸ್ತಕ ಪ್ರಕಾಶಕರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಸೇಡಂ ತಿಳಿಸಿದ್ದಾರೆ .

ಕಲ್ಯಾಣ ಕರ್ನಾಟಕ ಭಾಗದ
ಹಿರಿಯ ಪ್ರಕಾಶಕರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಐತಿಹಾಸಿಕ ಸಾಹಿತ್ಯ
ಸಾಂಸ್ಕೃತಿಕ ಪರಂಪರೆ ಮತ್ತು ಸ್ಥಳೀಯ ಗ್ರಾಮೀಣ ಜಾನಪದ ಸಾಹಿತ್ಯದ ಅನಾವರಣ.
ಜಿಲ್ಲೆಯ ಪ್ರತಿಭಾವಂತ ಸಾಹಿತಿಗಳ ಯುವಕವಿಗಳ ಪ್ರತಿಭೆಗಳ ಪ್ರತಿಭಾ ಶೋಧ.
ಹಿರಿಯ ಪುಸ್ತಕ ಪ್ರಕಾಶಕರಿಗೆ ಸನ್ಮಾನ
ಪುಸ್ತಕ ಪ್ರಕಾಶಕರ ಕೃತಿಗಳಿಗೆ ಪ್ರಶಸ್ತಿ ಹಾಗೂ
ಪ್ರಕಾಶಕರ ಕವಿ ಗೋಷ್ಠಿ ಪ್ರಕಾಶನದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪ್ರಕಾಶಕರನ್ನ ಗುರುಜಿಸಿ ಗೌರವಿಸುವ
ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಿದೆ
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ
ಪೂರ್ವಭಾವಿ ಸಭೆಯಲ್ಲಿ ಕಲ್ಯಾಣ ಕರ್ನಾಟಕದ
ಜಿಲ್ಲೆಯ ಯುವ ಸಾಹಿತಿ ಕವಿಗಳಿಗೆ ವೇದಿಕೆ ಒದಗಿಸಿಕೊಡುವ ಬಗ್ಗೆ ಚರ್ಚಿಸಿ ಹೆಚ್ಚಿನ ಅವಕಾಶವನ್ನು ಸ್ಥಳೀಯ ಪ್ರಕಾಶಕರಿಗೆ
ಸಾಹಿತಿಗಳಿಗೆ ನೀಡಲು ನಿರ್ಣಯಿಸಲಾಯಿತು.
5 ನೆಯ ಪುಸ್ತಕ ಪ್ರಕಾಶಕರ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲಾಯಿತು ಎಂದು ಮಹಿಪಾಲರೆಡ್ಡಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಹೇಶ ಬಾಬು ಸುರ್ವೆ ಅವರನ್ನು (ಮೊ : 9845338160)
ಸಂಪರ್ಕಿಸಲು ಕೋರಲಾಗಿದೆ..

Related Articles

Leave a Reply

Your email address will not be published. Required fields are marked *

Back to top button