ದೇವಪುರ ಗ್ರಾಮದಲ್ಲಿ ದಿ.ಎಚ್.ಟಿ.ಪಾಟೀಲ ಮಾಸ್ಟರ್ ಮಕ್ಕಳ ಅಟಾಟೋಪ.
ದೇವಪುರ ಗ್ರಾಮದಲ್ಲಿ ದಿ.ಎಚ್.ಟಿ.ಪಾಟೀಲ ಮಾಸ್ಟರ್ ಮಕ್ಕಳ ಅಟಾಟೋಪ.
ಅಟಾಟೋಪ ಎಂಬ ಶಬ್ದ ಬಳಸಲು ಕಾರಣವೇನೆಂದರೇ,. ಈ ಪಾಟೀಲ ಸಹೋದರರು ಸ್ವಭಾವತ ಸಂಭಾವಿತರು. ವೈರಿಗಳೂ ಒಪ್ಪುವಂಥಹ ಮಾತು. ಇಲ್ಲ…..ಇಲ್ಲ… ಎನ್ನುತ್ತಲೇ ಎಲ್ಲವನ್ನೂ ಅನುಭವಿಸುವವರು, ಪುಕ್ಕಟ್ಟೆ ಅನುಕೂಲಗಳು, ರಾಜಮರ್ಯಾದೆ, ಅಧಿಕಾರ, ರಾಜಕೀಯ ಮುಂದಾಳತ್ವ, ಎಲ್ಲವೂ ಇವರಿಗೇನೇ ಬೇಕು. ಆದರೇ “ ನಾವು ಸಂಭಾವಿತರಪ್ಪ ನಮಗ್ಯಾಕೆ ಬೇಕು ಊರ ಉಸಾಬರಿ. ನಮ್ಮ ನೆರಳಿಗೆ ನಾವು ಹೆದರುವವರು ಎಂಬ ವಚನ ಮಾತ್ರ ಚಾಚೂ ತಪ್ಪದೇ ಸಾರ್ವಜನಿಕ ಸ್ಥಳದಲ್ಲಿ ನೀಟಾಗಿ ಡೈಲಾಗ ಹೊಡೆಯುತ್ತಾರೆ. ” ಒಂದರ್ಥದಲ್ಲಿ ಇವರು ” ಮಿಲೇತೋ ಮಾರಿ. ನಹಿತೋ ಸದಾ ಬ್ರಹ್ಮಚಾರಿ” ಎನ್ನುತ್ತಾ ಜಾರಿಕೊಳ್ಳುವ ಜಾಣರಿವರು.
ನಂ- (೧) ಇವರು ಎಂಥಹ ನೀಚ ಮನಸ್ಥಿತಿ ಹೊಂದಿದ್ದಾರೆ ಎಂದರೇ ಸುಮಾರು 35 ವರ್ಷಗಳ ಹಿಂದಿನಿಂದಲೂ ಮುಖ್ಯ ರಸ್ತೆಯ ಪಕ್ಕದಲ್ಲಿರುವ ತಮ್ಮ ಹೊಲಗಳನ್ನು ನೀರಾವರಿ ಮಾಡಿಕೊಂಡು ಭತ್ತ ಬೆಳೆಯುತ್ತಿದ್ದಾರೆ. ಸುಮಾರು ೨೦ ಎಕರೆ ಹೊಲಕ್ಕೆ ನೀರಾಯಿಸಲು ೧೦ ಎಚ್.ಪಿ.ಯ ೨ ಪಂಪಸೆಟ್ಟಗಳನ್ನು ಹಳ್ಳದ ದಂಡೆಗಿರುವ ಬೇರೆಯವರ ಹೊಲದಲ್ಲಿ ಕೂಡ್ರಿಸಿದ್ದಾರೆ. ಅಲ್ಲಿಂದಲೇ ನೀರಾವರಿ ಪೈಪಗಳನ್ನು ಹಾಕಿಕೊಂಡು ತಮ್ಮ ಹೊಲಕ್ಕೆ ನೀರಾವರಿ ಮಾಡಿಕೊಂಡಿದ್ದಾರೆ.. ಏನಿಲ್ಲವೆಂದರೂ ವರ್ಷಕ್ಕೆ ೨ ಬೆಳೆಯಿಂದ ಸುಮಾರು ೧೦೦೦ ಚೀಲ ಭತ್ತದ ಬೆಳೆ ತೆಗೆಯುತ್ತಾರೆ.
ಆದರೇ…… ಆದರೇ… ಇವರಿಗೆ ಪಂಪಸೆಟ್ಟ ಕೂಡ್ರಿಸಲು ತಮ್ಮ ಹೊಲದಲ್ಲಿ ಜಾಗೆ ಕೊಟ್ಟಿರುವ ಮಾಲೀಕರಿಗೆ 3 ನಾಮ ಏಳೆದಿದ್ದಾರೆ. ಅಂದರೆ ಪಂಪಸೆಟ್ಟ ಕೂಡ್ರಿಸಿಕೊಳ್ಳಲು ಮುಖ್ಯ ರಸ್ತೆಯಿಂದ ಹಳ್ಳದ ದಂಡೆಗೆ ಇರುವ ಹೊಲದ ಮಾಲೀಕರು ಇವರಿಗೆ ಪಂಪಸೆಟ್ಟ ಕೂಡ್ರಿಸಲು ಜಾಗೆ ಕೊಟ್ಟಿದ್ದಾರೆ. ಆದರೇ ಆ ಹೊಲದ ಮಾಲೀಕರಿಗೇನೇ ಮುಖ್ಯ ರಸ್ತೆಯಿಂದ ತಮ್ಮ ಹೊಲಕ್ಕೆ ಹೋಗಿ ಬರಲು, ಕೃಷಿ ಚಟುವಟಿಕೆ ನಡೆಯಿಸಲು ಟ್ರ್ಯಾಕ್ಟರ ಹೋಗಿ-ಬರಲು ತಮ್ಮ ಹೊಲದಲ್ಲಿ ದಾರಿ ಬಿಡುತ್ತಿಲ್ಲ. ಮತ್ತು ಪಂಪಸೆಟ್ಟ ಕೂಡ್ರಿಸಿಕೊಂಡಿರವ ಹೊಲದ ಮಾಲೀಕರ ಹೊಲದಲ್ಲಿಯ ಜಾಗೆಗೆ ವಾರ್ಷಿಕ ಇಂತಿಷ್ಟು ಎಂದು ಬಾಡಿಗೆಯ ದುಡ್ಡೂ ಕೂಡ ಕೊಡುತ್ತಿಲ್ಲ. ಇದು ಸುಮಾರು ೩೫ ವರ್ಷದಿಂದಲೂ ನಡೆಯುತ್ತಾ ಬಂದಿರುವ ಅನ್ಯಾಯ, ದೌರ್ಜನ್ಯದ ಪರಕಾಷ್ಠೆ ಎನ್ನಬಹುದೇ?
ನಂ – (೨) ದೇವಪುರ ಕ್ರಾಸಿನಿಂದ ಹುಣಸಗಿ ಪಟ್ಟಣಕ್ಕೆ ಹೋಗುವ ಟಾರ ರಸ್ತೆಯ ಪಕ್ಕದಲ್ಲಿರುವ ಜಾಗೆ ಅದು ಕೂಡ ನಿಜವಾಗಿಯೂ ಸರಕಾರಕ್ಕೆ ಸಂಬಂಧಪಟ್ಟ ಜಾಗೆ. ಆ ಜಾಗೆಯಲ್ಲಿ ಕೆಲ ವ್ಯಾಪಾರಸ್ಥರು ತಮ್ಮ ಹೊಟ್ಟೆ ಉಪ-ಜೀವನಕ್ಕಾಗಿ ಹೊಟೇಲ್ಗಳು , ಕಿರಾಣಾ ಶಾಪ್, ವರ್ಕಶಾಪಗಳು ಹಾಕಿಕೊಂಡಿದ್ದಾರೆ. ಅಂತಹ ಸುಮಾರು ೧೦ ಜನ ವ್ಯಾಪಾರಿಗಳಿಂದ ಪ್ರತಿ ವರ್ಷ ಪ್ರತಿಯೊಬ್ಬರಿಂದ ರೂ. ೫೦,೦೦೦/- ಸರಕಾರಿ ಜಾಗೆಯಲ್ಲಿದ್ದರೂ ಕೂಡ ಅವರಿಂದ ಜಾಗದ ಬಾಡಿಗೆ ತಾವೇ ಪಡೆಯುತ್ತಾರೆ. ಅದೂ ಕೂಡ ಸರಕಾರಿ ಜಾಗೆಯಲ್ಲಿ ಅಂಗಡಿ ಹಾಕಿಕೊಂಡಿರುವ ವ್ಯಾಪಾರಸ್ಥರಿಂದ? ಇದು ಸುಮಾರು ೩೫ ವರ್ಷಗಳಿಂದಲೂ ಈ ದಂಧೇ ಅನುಚಾನವಾಗಿ ನಡೆದುಕೊಂಡು ಬರುತ್ತಿದೆ. ಈಗಲೂ ನಡೆಯುತ್ತಿದೆ.
ನಂ – (೩) ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವಪುರ ಗ್ರಾಮ, ದೇವಪುರ ದಿಂದ ಹುಣಸಗಿ (ವಿಜಯಪುರ ನಗರಕ್ಕೆ) ಪಟ್ಟಣಕ್ಕೆ ಹೋಗುವ ಟಾರ್ ರಸ್ತೆಯ ಬಲಭಾಗಕ್ಕೆ ಇರುವ ಸುಮಾರು ೧೪ ಎಕರೆ ಹೊಲದಲ್ಲಿ ( ಹುಣಸಗಿ ಕಡೆಗೆ ಇರುವ ಟಾರ ರಸ್ತೆಯ ಪಕ್ಕದಲ್ಲಿ ) ಯು.ಕೆ.ಪಿ. ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಸಿದ್ಧಾಪುರ ಸಬ್-ಡಿಸ್ಟಿಬ್ಯೂಟರಿ ನಂ- ೭. ಕಾಲುವೆ ಇದೆ.
ಈ ಕಾಲುವೆ ದೇವತಕಲ್ಲ ಸೀಮೆಯಿಂದ ದೇವಪುರ ದೊಡ್ಡ ಹಳ್ಳದ ವರೆಗೆ ಟೇಲ್ ಎಂಡ್ ಕಾಲುವೆ ಇದೆ. ಇದಕ್ಕೆ ಸಿದ್ಧಾಪುರ ಸಬ್-ಡಿಸ್ಟ್ರೀಬ್ಯೂಟರಿ ಕಾಲುವೆ ಎಂದು ಹೆಸರು. ಈ ಸಿದ್ಧಾಪುರ ಸಬ್-ಡಿಸ್ಟಿಬ್ಯೂಟರಿ ಟೇಲ್ ಎಂಡ ಕಾಲುವೆ, ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಇಲಾಖೆಗೆ ಒಳಪಟ್ಟಿದ್ದು, ೧೯೭೯-೮೦ರ ಸಮಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳು ಸರ್ವೆ ನಂ-೪೧೯ ( ಹೊಲದ ಸರ್ವೆ ನಂಬರ ಸರಿಯಾಗಿಮಾಹಿತಿ ಇಲ್ಲ) ರಲ್ಲಿ ಹುಣಸಗಿ ಟಾರ್ ರಸ್ತೆಯ ಪಕ್ಕದ ಈ ಹೊಲದಲ್ಲಿ ಜಾಗೆ ವಶಪಡಿಸಿಕೊಂಡು ಅದಕ್ಕೆ ತಕ್ಕಂತೇ ಸಂಬಂಧಿಸಿದ ಹೊಲದ ಮಾಲೀಕರಿಗೆ ಭೂ ಪರಿಹಾರದ ಹಣ ಕೂಡ ಮಂಜೂರಿ ಮಾಡಿದ್ದಾರೆ. ಆ ದಿನಗಳಲ್ಲಿ ಸರಕಾರದಿಂದ ಇವರ ತಂದೆಯವರು ಹಣ ಪಡೆದಿದ್ದಾರೆ. ಅಲ್ಲದೇ ಈ ಟೇಲ್ ಎಂಡ್ ಸಿದ್ದಾಪುರ ಸಬ್-ಡಿಸ್ಟಿಬ್ಯೂಟರಿ ಇವರ ಹೊಲದಲ್ಲಿ ಹಾಯ್ದು ಹೋಗುವ ಸ್ಥಳದಲ್ಲಿಚಿಕ್ಕ ಬಾವಿ ಇದೆ ಎಂದು ಆ ಹಳೆಯ ಚಿಕ್ಕ ನೀರಿಲ್ಲದ ಬಾಂವಿಗೂ ಸಹ ಭೂ ಪರಿಹಾರ ಪಡೆದುಕೊಂಡಿದ್ದಾರೆ.
ಸಧ್ಯ ಶ್ರೀಮತಿ ಶಾರದಾಬಾಯಿ ಗಂಡ ದಿವಂಗತ ಹಣಮಂತ್ರಾಯ ಮಾಸ್ತರ ಇವರ ಮಾಲೀಕತ್ವದಲ್ಲಿದ್ದ ಜಮೀನು ಅವರ ಮಕ್ಕಳಾದ (೧) ಶ್ರೀ ನಂದನ್ಗೌಡ ತಂದೆ ದಿವಂಗತ ಹಣಮಂತ್ರಾಯ ಮಾಸ್ತರ. (೨) ಶ್ರೀ ಶಾಂತಗೌಡ ತಂದೆ ದಿವಂಗತ ಹಣಮಂತ್ರಾಯ ಮಾಸ್ತರ. (೩) ಶ್ರೀ ಬಸನ್ಗೌಡ ತಂದೆ ದಿವಂಗತ ಹಣಮಂತ್ರಾಯ ಮಾಸ್ತರ. ಇವರ ಭಾಗಕ್ಕೆ ಬಂದಿರುತ್ತದೆ.
ಈ ಸರ್ವೆ ನಂಬರ ಹೊಲದಲ್ಲಿ ದೇವಪುರ ಕ್ರಾಸನಿಂದ ಹುಣಸಗಿ ಕಡೆಗೆ ಹೋಗುವ ಟಾರ ರಸ್ತೆಯ ಬಲ ಭಾಗದಲ್ಲಿ ಸಿದ್ಧಾಪುರ ಸಬ್-ಡಿಸ್ಟ್ರಿಬ್ಯೂಟರಿ ನಂ-೭ ಟೇಲ್ ಎಂಡ ಕಾಲುವೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಕಾಲುವೆ ಎಡ ಪಕ್ಕದಲ್ಲಿ ಕಾಲುವೆಯ ನಿರ್ವಹಣೆಗಾಗಿ ವಾಹನಗಳು ಓಡಾಡಲು ನಿರ್ಮಿಸಿರುವ ೮ ಫೀಟ್ನ ಕಚ್ಚಾ ರಸ್ತೆ ಇರುತ್ತದೆ. ಕಾಲುವೆಯ ಬಲ ಭಾಗಕ್ಕೆ ಖಾಲಿ ಜಾಗೆ ಅದರ ಪಕ್ಕದಲ್ಲಿ ದೇವಪುರ ಕ್ರಾಸ್ ದಿಂದ ಹುಣಸಗಿ ಹೋಗುವ ಟಾರ್ ರಸ್ತೆ ಇದೆ.
ಕಾಲುವೆಯ ಎಡ ಭಾಗದಲ್ಲಿ ( ದೇವಪುರ ಕ್ರಾಸದಿಂದ ಹುಣಸಗಿ ಪಟ್ಟಣಕ್ಕೆ ಹೋಗುವಾಗ) ಇರುವ ಖಾಲಿ ಜಾಗೆ ಸರಕಾರಕ್ಕೆ ಸೇರಿರುವ ಜಾಗೆ ಆ ಜಾಗೆಯಲ್ಲಿಯೇ ಅಂದರೇ,
ನಡುವೆ ೧೦ ಫೀಟ್ ಖಾಲಿ ಜಾಗೆ ಇದೆ. ಅದು ಸರಕಾರಕ್ಕೆ ಸಂಬಂಧಿಸಿದ ಜಾಗೆ ಇರುತ್ತದೆ.
ಈ ಜಾಗೆ ಸರಕಾರಕ್ಕೆ ಸೇರಿದ್ದರೂ ಸಹ ಅಲ್ಲಿಯ ವ್ಯಾಪಾರಸ್ಥರು ಪಾಟೀಲರ ಮಕ್ಕಳಿಗೆ ವರ್ಷಕ್ಕೆ ೫೦ ಸಾವಿರದಂತೆ ಭೂಬಾಡಿಗೆ ಕೊಡುತ್ತಾರೆ.
ಸುಮಾರು ೧೦ ಜನ ವ್ಯಾಪಾರಸ್ಥರು ದೇವಪುರ ಕ್ರಾಸಿನಲ್ಲಿ ಕೆಲ ಜನರು ಹೋಟೆಲ್, ಖಾನಾವಳಿ ವ್ಯಾಪಾರ ನಡೆಸುತ್ತಿದ್ದಾರೆ. ಈ ಜಾಗೆ ಸರ್ಕಾರಕ್ಕೆ ಸೇರಿದ ಜಾಗೆಯಲ್ಲಿ ಇವರು ಬಾಡಿಗೆ ಪಡೆಯುತ್ತಾರೆ. ಈ ವ್ಯಾಪಾರಸ್ಥರಿಂದ ವರ್ಷಕ್ಕೆ ಸುಮಾರು ರೂ.೩ ರಿಂದ ೫ ಲಕ್ಷ ರೂಪಾಯಿ ಬಾಡಿಗೆ ಇವರು ಪಡೆಯುತ್ತಿದ್ದಾರೆ.
ಈ ಎಲ್ಲಾ ವಿಷಯ ನೈಜವಾಗಿಯೂ ಸತ್ಯವಾಗಿಯೂ ಇರುತ್ತದೆ ಸದ್ಯ ಸಾರ್ವಜನಿಕವಾಗಿ ತಲೆದೋರಿರುವ ಸಮಸ್ಯೆ ಏನೆಂದರೇ. ದೇವಪುರ ಕ್ರಾಸ್ನಿಂದ ಹುಣಸಗಿ ಟಾರ ರಸ್ತೆಯ ಬಲ ಭಾಗದ ಮತ್ತು ಸಿದ್ದಾಪುರ ಸಬ್- ಡಿಸ್ಟ್ರಿಬ್ಯೂಟರಿ ನಡುವೆ ಇರುವ ಸರಕಾರಿ ಜಾಗೆಯಲ್ಲಿ (೧) ಶ್ರೀ ನಂದನ್ಗೌಡ ತಂದೆ ದಿವಂಗತ ಹಣಮಂತ್ರಾಯ ಮಾಸ್ತರ. (೨) ಶ್ರೀ ಶಾಂತಗೌಡ ತಂದೆ ದಿವಂಗತ ಹಣಮಂತ್ರಾಯ ಮಾಸ್ತರ. (೩) ಶ್ರೀ ಬಸನಗೌಡ ತಂದೆ ದಿವಂಗತ ಹಣಮಂತ್ರಾಯ ಮಾಸ್ತರ. ಈ 3 ಜನರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡ ಸರಕಾರಿ ಜಾಗೆಯಲ್ಲಿ ಸುಮಾರು ೧೮ ಆರ್.ಸಿ.ಸಿ.ಶಾಪ್ ದಕ್ಷಿಣಾಭಿಮುಖವಾಗಿ ನಿರ್ಮಿಸಿದ್ದಾರೆ. ೧ ಶಾಪ್ ಅಳತೆ ೭ ft. ಅಗಲ.೧೫ ft. ಉದ್ದ ವಿಸ್ತೀರ್ಣದಲ್ಲಿ ೧೮ ಶಾಪಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತು ಅಲ್ಲಿಯ ವ್ಯಾಪಾರಿಗಳಿಂದ ಒಂದು ತಿಂಗಳಿಗೆ ತಲಾ ರೂ.೫೦೦೦/-ಯಂತೆ ಒಂದು ವರ್ಷಕ್ಕೆ ರೂ. ೬೦,೦೦೦/- ಅದರಂತೆ ೨ ವರ್ಷದ ಅಂದರೇ ರೂ.೬೦,೦೦೦ +೬೦,೦೦೦ = Rs. ೧,೨೦,೦೦೦/- ಅಡ್ವಾನ್ಸ ಪಡೆದು ಶಾಪ್ ನಿರ್ಮಿಸಿದ್ದಾರೆ. ೧೮ ಶಾಪಗೆ ಒಟ್ಟು ರೂ. ೨೧,೬೦,೦೦೦/- ಅಡ್ವಾನ್ಸ್ ಬಾಡಿಗೆ ಹಣ ಪಡೆದುಕೊಂಡಿದ್ದಾರೆ ಮತ್ತು ೧೮ RCC .ಶಾಪ್ಗಳ ಕಟ್ಟಡ ಬಹುತೇಕ ಮುಗಿಯುವ ಹಂತದಲ್ಲಿವೆ,. ಸಿದ್ದಾಪುರ ಸಬ್-ಡಿಸ್ಟ್ರೀಬ್ಯೂಟರಿ ಕಾಲುವೆ ಮತ್ತು ಅದರ ಬಲ ಪಕ್ಕದಲ್ಲಿರುವ ೮ ಅಡಿ ಕಚ್ಚಾ ರಸ್ತೆ ನೆಲಸಮ ಮಾಡಿದ್ದಾರೆ ಇದರಿಂದಾಗಿ ಈ ಕಾಲುವೆಯಿಂದ ಮುಂದಿನ ಹೊಲಗಳಿಗೆ ನೀರು ಹರಿಸುವುದು ಸಂಪೂರ್ಣ ಮುಚ್ಚಿದೆ ಹೋಗುದೆ ಮತ್ತು ಮುಂದಿನ ಹೊಲದ ರೈತರಿಗೆ ತಮ್ಮ ಹೊಲದಲ್ಲಿ ಬೆಳೆಯುವ ಬೆಳೆಗಳಿಗೆ ನೀರಿಲ್ಲದೇ ಅನ್ಯಾಯವಾಗಿದೆ.
ದೇವಪುರ ಗ್ರಾಮದಲ್ಲಿ ಸಂಭಾವಿತ ಪಾಟೀಲ ಸಹೋದರರ ಅಟಾಟೋಪದ ಕೆಲಸಗಳು ಜೋರಾಗಿಯೇ ನಡೆಯುತ್ತಿವೆ? ಕೇಳುವರ್ಯಾರು? ಕಂದಾಯ ಅಧಿಕಾರಿಗಳು, ಕೃ.ಮೆ.ಯೋ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಕಡೆಗೆ ಗಮನ ಹರಿಸಬಲ್ಲರೇ? ಅಥವಾ ರಾಜಕೀಯ ಪ್ರಭಾವದಿಂದ ಮೇಲೆ ಕಾಣಿಸಿರುವ ಅನ್ಯಾಯ, ಆಕ್ರಮ, ಸರಕಾರಿ ಜಾಗೆಯ ಒತ್ತುವರಿ, ಕಾಲುವೆ ಸಂರ್ಪೂಣ ನಿರ್ನಾಮ ಮಾಡಿರುವ ಇವರ ಕಾನೂನು ಬಾಹಿರ ಕೆಲಸವನ್ನು ಮುಚ್ಚಿ ಹಾಕಿ ಜಾಣ ಕುರುಡು ತೋರುತ್ತಾರೋ ಏನೋ ತಿಳಿತ್ತಿಲ್ಲ. ಆದರೇ ಈ ಅನ್ಯಾಯದ ವಿರುದ್ಧ ಕೊನೆ ಉಸಿರಿರುವವರೆಗೂ ಹೋರಾಡಲು ನಾನಂತೂ ಸಿದ್ಧನಿದ್ದೇನೇ ಜನರ ಆಶೀರ್ವಾದವಿರಲಿ. M.No - 9731113141. ಬೆಂಗಳೂರು.



