ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ : ಸತೀಶ್ ಜಾರಕಿಹೊಳಿ
ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ:ಸತೀಶ್ ಜಾರಕಿಹೊಳಿ
ವರದಿ: ವಿಜಯಕುಮಾರ ಹಿರೇಮಠ
ತುರ್ವಿಹಾಳ : ತಾವರಗೇರಾ ಪಟ್ಟಣದ ಹೋರವಲಯ
ದಲ್ಲಿನ ಬುದ್ಧ ವಿಹಾರದಿಂದ ತುರ್ವಿಹಾಳ ಮಾರ್ಗವಾಗಿ ರಾಯಚೂರು ನಗರಕ್ಕೆ ತೆರಳುತ್ತಿರುವಾಗ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ
ಯ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಪ.ಪಂ.ಅಧ್ಯಕ್ಷ ಕೆ.ಶಾಮಿದ ಸಾಬ್ ಹಾಗೂ ಆರ್ ಶಿವನಗೌಡ,ಬಾಪುಗೌಡ ದೇವರಮನಿ ಸೇರಿ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು.
ಪಟ್ಟಣದ ಪತ್ರಕರ್ತರು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಮೂಡ ಹಗರಣ ಕುರಿತು ಪ್ರಶ್ನಿಸಿದಾಗ ಮುಡಾ ಒಂದು ಹಳೆಯ ಸುದ್ದಿ ಅದರ ಬಗ್ಗೆ ಪ್ರಶ್ನೆ ಬೇಡ ಎನ್ನುವ ಮೂಲಕ ಮುಡಾದಲ್ಲಿ ಮುಖ್ಯ
ಮಂತ್ರಿ ಸಿದ್ದಾರಾಮಯ್ಯ ಅವರ ಪಾತ್ರ ಏನು ಇಲ್ಲ ಅವರ ಜನಪರ ಯೋಜನೆಗಳನ್ನು ಸಹಿಸಲಾಗದ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ಪಟ್ಟಣದ ನೂರಾರು ಕಾಂಗ್ರೆಸ್ ಪಕ್ಷದ ಯುವ
ಮುಖಂಡರು ಹಾಗೂ ಕಾರ್ಯಕರ್ತರು ಅಭಿಮಾ
ನಿಗಳಿಂದ ಪಟಕಿ ಸಿಡಿಸಿ ಮುಂದಿನ ಮುಖ್ಯಮಂತ್ರಿ ಎನ್ನುವ ಜಯಘೋಷಣೆ ಕೂಗುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಮುಖಂಡರಾದ ಸಿರಾಜ್ ಪಾಷಾ ಧಳಪತಿ,ಶರಣಪ್ಪ ರೇಡ್ಡರ,ಮರಿಸ್ವಾಮಿ ಹತ್ತಿಗುಡ್ಡ,ಶಾಮಿದ್ ಅಲಿ,ಯಲ್ಲಪ್ಪ ಭೋವಿ,ಮರಿಯಪ್ಪ ನಾಮದ್, ಭಿಶೇಖ್ ಗೌಡ ಮಾ.ಪಾ.ಯೂನುಸ್ ಖಾಜಿ,
ಮುರ್ತುಜಾ,ಅಯ್ಯಪ್ಪ ನಾಯಕ, ಸೋಮನಾಥ ಮಾಟೂರು,ಶಿವಪುತ್ರಪ್ಪ ಕೆಂಗೇರಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನೂರಾರು ಯುವಕರು ಭಾಗಿಯಾಗಿದ್ದರು.




