ಸಂಪಾದಕೀಯ

ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ಪೂರ್ವಬಾವಿ ಸಭೆ – ಕನಕಗಿರಿ

ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ಪೂರ್ವಬಾವಿ ಸಭೆ

ಕನಕಗಿರಿ ತಾಲೂಕಿನಲ್ಲಿ ತಸಿಲ್ದಾರ್ ಅವರ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ಸಮಿತಿಗಳನ್ನು ರಚಿಸುವ ಕುರಿತು ಪೂರ್ವಭಾವಿ ಸಿದ್ಧತಾ ಸಭೆಗೆ ಹಾಜಿರಾಗಲು ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ಕೋರಿದರು.

ಕನಕಗಿರಿ ತಾಲೂಕಿಗೆ ದಿನಾಂಕ:10.02.2024 ರಂದು ಬೆಳಿಗ್ಗೆ 9:30 ಗಂಟೆಗೆ ಸಂವಿಧಾನ ಜಾಗೃತಿ ಜಾಥಾ ರಥವು ಆಗಮಿಸಲಿದ್ದು ಸದರಿ ವಿಷಯದ ಕುರಿತು ಚರ್ಚಿಸಲು ದಿನಾಂಕ:08.02.2024 ರಂದು ಬೆಳಿಗ್ಗೆ 10:00 ಗಂಟೆಗೆ ಶ್ರೀ ಕನಕಾಚಲಪತಿಯ ದೇವಸ್ಥಾನದ ಯಾತ್ರಿ ನಿವಾಸ ಕನಕಗಿರಿಯಲ್ಲಿ ಪೂರ್ವಭಾವಿ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ತಾಲೂಕ್ ಆಡಳಿತ ಅಧಿಕಾರಿ ವಿಶ್ವನಾಥ್ ಮುರಡಿ ತಿಳಿಸಿದರು.

ಈ ಸಭೆಗೆ ಕನಕಗಿರಿ ಪಟ್ಟಣದ ಎಲ್ಲಾ ಸಮಾಜದ ಮುಖಂಡರು ಹಾಗೂ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಆಗಮಿಸಿ ತಮ್ಮ ಸಲಹೆ ಸೂಚನೆ ನೀಡಲು ಕೋರಿದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button